ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಸಮುದ್ರ ಇದ್ದಂತೆ: ನ್ಯಾ.ಶಿವನಗೌಡ

ಯುವ ವಕೀಲರಿಗಾಗಿ ಕಾನೂನು ಕಾರ್ಯಾಗಾರ ಆಯೋಜನೆ
Last Updated 25 ಫೆಬ್ರುವರಿ 2020, 9:54 IST
ಅಕ್ಷರ ಗಾತ್ರ

ಯಾದಗಿರಿ: ‘ಕಾನೂನು ಸಮುದ್ರ ಇದ್ದಹಾಗೆ, ಎಷ್ಟು ತಿಳಿದುಕೊಂಡರೂ ಸಾಲದು. ಯುವ ವಕೀಲರು ಈ ಕಾರ್ಯಾಗಾರದ ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಶಿವನಗೌಡ ಹೇಳಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್, ಜಿಲ್ಲಾ ವಕೀಲರ ಸಂಘ, ಶಹಾಪುರ, ಸುರಪುರ ವಕೀಲರ ಸಂಘ ಸಹಯೋಗದಲ್ಲಿ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮೂರು ದಿನಗಳ ‘ಕಾನೂನು ಕಾರ್ಯಾಗಾರ’ ಉದ್ಘಾಟಿಸಿ ಅವರು ಮಾತನಾಡಿದರು.

‘ನುರಿತ ವಕೀಲರಿಂದ ಕಾನೂನಿನ ಬಗ್ಗೆ ಸಮಗ್ರ ಮಾಹಿತಿ ಪಡೆದು ವೃತ್ತಿಗೆ ಅನುಕೂಲ ಮಾಡಿಕೊಳ್ಳಬೇಕು. ವಕೀಲರು ಕಕ್ಷಿದಾರರಿಗೆ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದರು.

ರಾಜ್ಯ ವಕೀಲರ ಪರಿಷತ್ ಉಪಾಧ್ಯಕ್ಷ ಎನ್.ಶಿವಕುಮಾರ ಮಾತನಾಡಿ, ‘ವಕೀಲರ ಕಲ್ಯಾಣ ನಿಧಿ ಹೆಚ್ಚಿಸಲು ಚಿಂತನೆ ನಡೆದಿದೆ. ಸರ್ಕಾರದಿಂದ ವಕೀಲರ ಪರಿಷತ್‌ಗೆಬಜೆಟ್‌ನಲ್ಲಿ ಸುಮಾರು ₹100 ಕೋಟಿ ಹಣ ಮೀಸಲಿಗೆ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮಾತನಾಡಿದ್ದೇವೆ’ ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ನಾಮದೇವ ಸಾಲಮಂಟಪಿ ಹಾಗೂ ಪ್ರಕಾಶ ಅರ್ಜುನ್ ಬನಸೋಡೆ ಮಾತನಾಡಿ, ‘ವಕೀಲರು ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಶ್ರದ್ಧೆ ಆಸಕ್ತಿಯಿಂದ ವೃತ್ತಿ ಮಾಡಬೇಕು’ ಎಂದು ಸಲಹೆ ನೀಡಿದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಸ್ಮಿತಾ ಲೋಕೇಶ ಮಾಲಗಾಂವೆ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಕ್ಯಾತನಾಳ, ರಾಜ್ಯ ವಕೀಲರ ಪರಿಷತ್ ಸದಸ್ಯ ಕಾಶಿನಾಥ ಮೋತಕಪಲ್ಲಿ, ಶಹಾಪುರ ವಕೀಲರ ಸಂಘದ ಅಧ್ಯಕ್ಷ ಮಲ್ಲಪ್ಪ ರಾಂಪೂರೆ, ಬಸವರಾಜ ಕಾರಡ್ಡಿ, ಹಿರಿಯ ವಕೀಲರಾದ ನರಸಿಂಗರಾವ್ ಕುಲಕರ್ಣಿ, ಗಂಗಾಧರ ಆವಂತಿ ಜಿ. ನಾರಾಯಣರಾವ್, ಬಿ.ಜಯಚಾರ್ಯ, ಮಹಿಪಾಲರಡ್ಡಿ ಇಟಿಗಿ, ಎಸ್.ಪಿ.ನಾಡೇಕರ್, ಎಂ.ವಿಜಯಕುಮಾರ, ಸಂಘದ ಉಪಾಧ್ಯಕ್ಷ ನಾಗಯ್ಯ ಗುತ್ತೇದಾರ, ಪ್ರಧಾನ ಕಾರ್ಯದರ್ಶಿ ವಿನಯಕುಮಾರ ಕುಲಕರ್ಣಿ, ವಿಜಯಕುಮಾರ ಕೊಂಕಲ್, ಪರುಶುರಾಮ ರಾಮನಳ್ಳಿ, ಪುಷ್ಪಲತಾ ಪಾಟೀಲ, ಬಿ.ಬಿ.ಕಿಲ್ಲನಕೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT