ಶನಿವಾರ, ಆಗಸ್ಟ್ 24, 2019
28 °C

ಗಡ್ಡಿಯಲ್ಲಿ ಹಾರಾಡಿದ ತಿರಂಗಧ್ವಜ

Published:
Updated:
Prajavani

ಕಕ್ಕೇರಾ (ಯಾದಗಿರಿ): ಪ್ರವಾಹದಿಂದ ಹೊರಜಗತ್ತಿನ ಸಂಪರ್ಕ ಕಳೆದುಕೊಂಡಿರುವ ನೀಲಕಂಠರಾಯನಗಡ್ಡಿಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಹಣಮಂತ ಗೋವಿಂದರ್ ರಾಷ್ಟ್ರಧ್ವಜಾರೋಹಣ ಮಾಡಿದರು.

ಕೃಷ್ಣ ನದಿ ಪ್ರವಾಹ ಹಿನ್ನೆಲೆಯಲ್ಲಿ ಗಡ್ಡಿ ಸಂಪರ್ಕ ಸಹಕಾರಿಯಾಗಿದ್ದ ಜಾಲರಿ ಸೇತುವೆ ಪ್ರವಾಹಕ್ಕೆ ಕೊಚ್ಚಿಕೊಂಡ ಹೋದ ಹಿನ್ನೆಲೆಯಲ್ಲಿ ಗಡ್ಡಿ ಶಾಲಾ ಮುಖ್ಯ ಗುರು ಬಸವನಗೌಡ ಪಾಟೀಲ ಗಡ್ಡಿಗೆ ತೆರಳಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಹಣಮಂತ ಗೋವಿಂದರ್‌ಗೆ ಧ್ವಜಾರೋಹಣ ಮಾಡಿರಿ ಎಂದು ಸೂಚಿಸಿದ್ದರಿಂದ ಶಾಲಾ ಮಕ್ಕಳ ಜೊತೆಗೆ ಧ್ವಜಾರೋಹಣ ಮಾಡಿದರು.

ಗಡ್ಡಿಯ ಪ್ರಮುಖರಾದ ಯಂಕಪ್ಪ, ಮರಪ್ಪ ಅಂಬ್ರಪ್ಪ, ದೇವರಾಜ ಅನೇಕರಿದ್ದರು.

Post Comments (+)