ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಟೊಮೆಟೊ, ಬೀನ್ಸ್‌ ದರ ಏರಿಕೆ

ಮಾರುಕಟ್ಟೆ ನೋಟ: ಸೊಪ್ಪು ದರ ಯಥಾಸ್ಥಿತಿ, ಹಸಿಮೆಣಸಿನಕಾಯಿ, ಗಜ್ಜರಿಗೆ ಅಧಿಕ ಬೆಲೆ
Last Updated 7 ಮೇ 2022, 19:30 IST
ಅಕ್ಷರ ಗಾತ್ರ

ಯಾದಗಿರಿ: ಬೇಸಿಗೆಯಲ್ಲಿ ಟೊಮೆಟೊ, ಹಸಿಮೆಣಸಿನಕಾಯಿ, ಬೀನ್ಸ್‌ ದರ ಏರಿಕೆಯಾಗಿದ್ದು, ಗ್ರಾಹಕರ ಜೇಬು ಸುಡುತ್ತಿದೆ.

ಕಳೆದ ತಿಂಗಳಲ್ಲಿ ₹20ರಿಂದ ₹30ಗೆ ಒಂದು ಕೆಜಿ ಟೊಮೆಟೊ ದರವಿದ್ದು, ಈಗ 30ರಿಂದ ₹40 ಏರಿಕೆಯಾಗಿದೆ. ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಬೆಳೆಯು ಇಲ್ಲದಿದ್ದರಿಂದ ದರ ಏರಿಕೆಯಾಗಿದೆ ಎಂದು ವ್ಯಾಪಾರಿಗಳು ತಿಳಿಸುವ ಮಾತಾಗಿದೆ.

ಒಂದು ಟೊಮೆಟೊ ಟ್ರೇ ₹1,200ಗೆ ಮಾರಾಟವಾಗುತ್ತಿದೆ. ಇದರಿಂದ ವ್ಯಾ‍ಪಾರಿಗಳು ದರ ಏರಿಕೆ ಮಾಡಿದ್ದಾರೆ.ಇದರ ಜೊತೆಗೆ ಹಸಿಮೆಣಸಿಕಾಯಿ, ಬಿನ್ಸ್‌ ದರವೂ ಏರಿಕೆಯಾಗಿದೆ. ಹೈಬ್ರಿಡ್‌ ಗಜ್ಜರಿ, ನಾಟಿ ಗಜ್ಜರಿಯಲ್ಲಿ ₹20ರಿಂದ 30ರ ದರ ವ್ಯಾತ್ಯಸವಿದೆ.

ಹಸಿಮೆಣಸಿನಕಾಯಿ ಕೇಜಿಗೆ ₹80 ಇದ್ದರೆ, ಬೀನ್ಸ್‌ ದರ ಒಂದೊಂದು ಕಡೆ ಒಂದೊಂದು ದರವಿದೆ. ಸಗಟು ಮಾರುಕಟ್ಟೆಯಲ್ಲಿ ಬೀನ್ಸ್ ₹150–160 ದರವಿದ್ದರೆ, ಚಿಲ್ಲರೆ ಅಂಗಡಿಗಳಲ್ಲಿ ₹190ರಿಂದ ₹200 ಬೆಲೆ ಇದೆ. ಬೇಸಿಗೆ ಕಾರಣ ಈ ತರಕಾರಿಗಳಿಗೆ ದರ ಹೆಚ್ಚಳವಾಗಿದೆ. ಇನ್ನೂ ಗಜ್ಜರಿ ₹100 ರಿಂದ ₹120ರ ತನಕ ಬೆಲೆ ಇದೆ.

ಬೆಳ್ಳುಳ್ಳಿ ಒಂದು ಕೆಜಿಗೆ ₹60, ಹಸಿಶುಂಠಿ ₹80, ನುಗ್ಗೆಕಾಯಿ ₹60, ಕರಿಬೇವು ₹50 ಕೆಜಿಗೆ ಮಾರಾಟ ಮಾಡಲಾಗುತ್ತಿದೆ.

ಸೊಪ್ಪುಗಳ ದರ: ತರಕಾರಿ ದರಗಳ ಏರಿಕೆಯಾಗಿದ್ದರೂ ಸೊಪ್ಪುಗಳ ದರ ಅಗ್ಗವಾಗಿದೆ. ₹5ರಿಂದ 10ಗೆ ಎಲ್ಲ ವಿದಧ ಸೊಪ್ಪುಗಳು ಸಿಗುತ್ತಿವೆ. ಸ್ಥಳೀಯವಾಗಿ ಸೊಪ್ಪುಗಳ ಆವಕವಾಗುತ್ತಿದೆ. ದೊಡ್ಡ ಗಾತ್ರಕ್ಕೆ ಮಾತ್ರ ₹10 ದರವಿದೆ.

ಮೆಂತ್ಯೆ ಸೊಪ್ಪು ₹20ಗೆ ಮೂರು ಕಟ್ಟು ಸಿಗುತ್ತಿದೆ. ಪಾಲಕ್‌ ಸೊಪ್ಪು ₹5ಗೆ ಒಂದು ಕಟ್ಟು, ಪುಂಡಿಪಲ್ಯೆ ₹20ಗೆ 5 ಕಟ್ಟು, ರಾಜಗಿರಿ ಸೊಪ್ಪು ₹20ಗೆ 5 ಕಟ್ಟು, ಸಬ್ಬಸಿಗಿ ಚಿಕ್ಕ ಗಾತ್ರದ ₹5, ದೊಡ್ಡ ಗಾತ್ರ ₹10 ಒಂದು ಇದೆ. ಕೊತಂಬರಿ ಮತ್ತು ಪುದೀನಾ ಸೊಪ್ಪು ಒಂದು ₹10ರಿಂದ ₹15 ದರವಿದೆ.

***

ತರಕಾರಿ; ದರ

(ಪ್ರತಿ ಕೆ.ಜಿಗೆ ₹ಗಳಲ್ಲಿ)

ಟೊಮೆಟೊ;70-60

ಬದನೆಕಾಯಿ;40–45

ಬೆಂಡೆಕಾಯಿ;30–40

ದೊಣ್ಣೆಮೆಣಸಿನಕಾಯಿ;50–60

ಆಲೂಗಡ್ಡೆ;25-30

ಈರುಳ್ಳಿ;30–25

ಎಲೆಕೋಸು;30–40

ಹೂಕೋಸು;50–60

ಚವಳೆಕಾಯಿ;30–40

ಬೀನ್ಸ್; 150–160

ಗಜ್ಜರಿ;100-110

ಸೌತೆಕಾಯಿ; 30–40

ಮೂಲಂಗಿ;20-30

ಮೆಣಸಿನಕಾಯಿ;80-70

ಸೋರೆಕಾಯಿ;30–40

ಬಿಟ್‌ರೂಟ್;60-50

ಹೀರೆಕಾಯಿ;80-70

ಹಾಗಲಕಾಯಿ;60-50

ತೊಂಡೆಕಾಯಿ;30-40

ಅವರೆಕಾಯಿ;70–80
***
ಈರುಳ್ಳಿ ದರ ಅಗ್ಗ
ಈರುಳ್ಳಿ ಬೆಲೆ ಈ ಬಾರಿ ಅಗ್ಗವಾಗಿದ್ದು, ನಗರದ ಲಾಲ್‌ ಬಹದ್ದೂರ್‌ ಶಾಸ್ತ್ರಿ ವೃತ್ತದಲ್ಲಿ ಮೂಟೆಗಳನಿಟ್ಟು ಮಾರಾಟ ಮಾಡಲಾಗುತ್ತಿದೆ.

ಈರುಳ್ಳಿಯಲ್ಲಿ ಎರಡು ವಿಧಗಳಿದ್ದು, ಗಾತ್ರಕ್ಕೆ ಅನುಗುಣವಾಗಿ ಬೆಲೆ ನಿಗದಿ ಮಾಡಲಾಗಿದೆ. ಬಿಳಿ ಈರುಳ್ಳಿ ₹100ಗೆ ನಾಲ್ಕು ಕೆಜಿ, ಕಂದು ಬಣ್ಣದ ಈರುಳ್ಳಿ ₹100ಗೆ 5 ಕೆಜಿ ಮಾರಾಟ ಮಾಡಲಾಗುತ್ತಿದೆ.

ಇನ್ನೂ ಮಾರುಕಟ್ಟೆಗಳಲ್ಲೂ ಈರುಳ್ಳಿ ಕಡಿಮೆ ಇದೆ. ಇದರಿಂದ ಗ್ರಾಹಕರು ಮುಗಿಬಿದ್ದು, ಖರೀದಿ ಮಾಡುತ್ತಿದ್ದಾರೆ.

***

ತರಕಾರಿಯಲ್ಲಿ ಟೊಮೆಟೊ, ಹಸಿಮೆಣಸಿನಕಾಯಿ, ಬೀನ್ಸ್‌, ಗಜ್ಜರಿ ಅಧಿಕ ದರವಿದೆ. ದೂರದ ಜಿಲ್ಲೆಗಳಿಂದ ತರಕಾರಿ ಆವಕ ಆಮದಾಗುತ್ತಿದೆ
ನೂರ್ ಮಹಮ್ಮದ್, ವ್ಯಾಪಾರಿ

***

ತರಕಾರಿ ಮಾರುಕಟ್ಟೆಗಳಲ್ಲಿ ಒಂದೊಂದು ಕಡೆ ಒಂದೊಂದು ದರವಿದೆ. ಟೊಮೆಟೊ ದರ ಏರಿಕೆಯಾಗಿದೆ. ಮನೆಮನೆಗೆ ತರುವ ಪುಟ್ಟಿ ತರಕಾರಿ ಮಾರುಕಟ್ಟೆಗಿಂತ ₹20 ಬೆಲೆ ಜಾಸ್ತಿ ಇದೆ
ಕೃಷ್ಣಾ ರೆಡ್ಡಿ, ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT