ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆ ನೋಟ: ಟೊಮೆಟೊ, ಬೀನ್ಸ್‌, ಗಜ್ಜರಿ ದರ ಏರಿಕೆ

ಮೆಂತ್ಯೆ, ಕರಿಬೇವು ಬೆಲೆ ಏರಿಕೆ, ಪಾಲಕ್‌ ಆವಕ ಕುಂಠಿತ
Last Updated 3 ನವೆಂಬರ್ 2022, 15:45 IST
ಅಕ್ಷರ ಗಾತ್ರ

ಯಾದಗಿರಿ: ಕಳೆದ ವಾರಕ್ಕಿಂತ ಈ ವಾರದಲ್ಲಿ ಕೆಲ ತರಕಾರಿ ದರ ಏರಿಕೆಯಾಗಿದೆ. ಟೊಮೆಟೊ, ಬೀನ್ಸ್‌, ಗಜ್ಜರಿ ದರ ಏರಿಕೆಯಾಗಿದ್ದು, ಗ್ರಾಹಕರಿಗೆ ಚೌಕಾಶಿಗೆ ಇಳಿದು ಖರೀದಿಸುವುದು ಮಾರುಕಟ್ಟೆಯಲ್ಲಿ ಕಂಡು ಬರುತ್ತಿದೆ.

ಸಗಟು ಮಾರುಕಟ್ಟೆಯಲ್ಲಿ ₹30ರಿಂದ 35 ಟೊಮೆಟೊ ಬೆಲೆ ಇದ್ದರೆ, ಚಿಲ್ಲರೆ ಅಂಗಡಿಗಳಲ್ಲಿ ₹5 ಹೆಚ್ಚಿದೆ.

ಮಾರುಕಟ್ಟೆಗೆ ಬಾರದ ನುಗ್ಗೆ: ಹಲವು ದಿನಗಳಿಂದ ನುಗ್ಗೆಕಾಯಿ ದರ ಏರುಗತಿಯಲ್ಲಿದ್ದು, ಮಾರುಕಟ್ಟೆಗೆ ಬರುತ್ತಿಲ್ಲ. ಇದರಿಂದ ಚಿಲ್ಲರೆ ಅಂಗಡಿಗಳ ವ್ಯಾಪಾರಿಗಳು ನುಗ್ಗೆ ತರುವುದನ್ನು ಬಿಟ್ಟಿದ್ದಾರೆ. ಇದರ ಜತೆ ಬೀನ್ಸ್‌, ಗಜ್ಜರಿ ದರ ಹೆಚ್ಚಳವಾಗಿದ್ದು, ಉಳಿದ ಕೆಲ ತರಕಾರಿಗಳು ಬೆಲೆಯೂ ಅಧಿಕವಾಗಿದೆ.

ಬದನೆಕಾಯಿ ₹70–80 ಕೆಜಿ, ಡೊಣ್ಣೆಮೆಣಸಿನಕಾಯಿ ₹60–70, ಗಜ್ಜರಿ ₹90-100, ಗೀಚು ಹೀರೆಕಾಯಿ, ತುಪ್ಪದ ಹೀರೆಕಾಯಿ ₹70-80 ದರ ಹೆಚ್ಚಳವಿದ್ದು, ಉಳಿದ ತರಕಾರಿ 60ರ ಕೆಳಗೆ ಇದೆ.

ಕರಿಬೇವು ದರ ಹೆಚ್ಚಳ: ಕಳೆದ ಕೆಲ ದಿನಗಳಿಂದ ಕರಿಬೇವು ದರ ಕೆಜಿಗೆ ₹70ರಿಂದ 80 ದರ ಇದೆ. ಒಂದು ತಿಂಗಳ ಹಿಂದೆ ₹50ರಿಂದ ₹60 ಕೆಜಿ ಇದ್ದ ಈಗ ₹10ರಿಂದ ₹20 ದರ ಹೆಚ್ಚಳವಾಗಿದೆ. ಇದರಿಂದ ಚಿಲ್ಲರೆ ವ್ಯಾಪಾರಿಗಳು ₹10ಗೆ ಒಂದು ಕಟ್ಟು ಮಾರಾಟ ಮಾಡುತ್ತಿದ್ದಾರೆ.

ಸೊಪ್ಪುಗಳ ದರ: ಕಳೆದ ವಾರಕ್ಕಿಂತ ಈ ವಾರ ಮೆಂತ್ಯೆ ಸೊಪ್ಪು ದರದಲ್ಲಿ ₹5ಹೆಚ್ಚಾಗಿದೆ. ಎಲ್ಲ ಸೊಪ್ಪುಗಳನ್ನು ₹10ಗೆ ಒಂದು, ₹20ಗೆ ಮೂರು ಕಟ್ಟು ಮಾರಾಟ ಮಾಡಲಾಗುತ್ತಿದೆ.

ಮೆಂತ್ಯೆ ಸೊಪ್ಪು ₹30 ಒಂದು ಕಟ್ಟು, ಸಬ್ಬಸಗಿ, ಪಾಲಕ್‌, ಪುಂಡಿ ಪಲ್ಯೆ, ರಾಜಗಿರಿ, ₹10ಗೆ ಒಂದು ಕಟ್ಟು ಸೊಪ್ಪು ಮಾರಾಟ ಮಾಡಲಾಗುತ್ತಿದೆ. ಪಾಲಕ್ ಸೊಪ್ಪು ಮಾತ್ರ ಆವಕ ಕಡಿಮೆಯಾಗಿದೆ. ಕೊತಂಬರಿ ₹25–30 ಒಂದು ಕಟ್ಟು, ಪುದೀನಾ ₹15–20 ಒಂದು ಕಟ್ಟು, ಕರಿಬೇವು ₹70–80 ಕೆಜಿ, ಉತ್ತಮ ಗುಣಮಟ್ಟದ ಬೆಳ್ಳುಳ್ಳಿ ₹100–120, ಶುಂಠಿ ₹60–70, ನಿಂಬೆಹಣ್ಣು ದರ ಒಂದಕ್ಕೆ ₹5ಗೆ ಒಂದು ಇದೆ. ನಿಂಬೆ ಕಾಯಿಗಳು ದರ ಇಳಿಕೆಯಾಗಿಲ್ಲ.

****

ತರಕಾರಿ; ದರ (ಪ್ರತಿ ಕೆ.ಜಿಗೆ ₹ಗಳಲ್ಲಿ)

ಟೊಮೆಟೊ;30–35

ಆಲೂಗಡ್ಡೆ;30–35

ಈರುಳ್ಳಿ;30–35
ಬದನೆಕಾಯಿ;70–80
ಬೆಂಡೆಕಾಯಿ;50–60
ದೊಣ್ಣೆಮೆಣಸಿನಕಾಯಿ;60–70
ಎಲೆಕೋಸು;40–50
ಹೂಕೋಸು;60–70
ಚವಳೆಕಾಯಿ;60–70
ಬೀನ್ಸ್; 80–90
ಗಜ್ಜರಿ;90-100
ಸೌತೆಕಾಯಿ; 50–60
ಮೂಲಂಗಿ;40-50
ಮೆಣಸಿನಕಾಯಿ;50-60
ಸೋರೆಕಾಯಿ;50–60
ಬಿಟ್‌ರೂಟ್;60-70
ಹೀರೆಕಾಯಿ;70-80
ಹಾಗಲಕಾಯಿ;50-60
ತೊಂಡೆಕಾಯಿ;50-60
ಅವರೆಕಾಯಿ;60–70

***

ನುಗ್ಗೆಕಾಯಿ, ಬೀನ್ಸ್‌, ಗಜ್ಜರಿ ಬೇರೆ ತರಕಾರಿಗಿಂತ ಬೆಲೆ ಹೆಚ್ಚಾಗಿದೆ. ಉಳಿದಂತೆ ಕರಿಬೇವು ದರವೂ ಹೆಚ್ಚಳವಾಗಿದೆ
ಬಸವರಾಜ, ತರಕಾರಿ ವ್ಯಾಪಾರಿ

***

ಕೆಲ ತರಕಾರಿಗಳ ದರ ಸ್ಥಿರವಾಗಿದ್ದರೆ, ಕೆಲ ಸೊಪ್ಪುಗಳ ಬೆಲೆ ಅಧಿಕವಾಗಿದೆ. ಮೆಂತ್ಯೆ ಸೊಪ್ಪು ದುಬಾರಿ ದರವಿದ್ದು, ಪಾಲಕ್‌ ಸಿಗುತ್ತಿಲ್ಲ
ಮಹೆಬೂಬ್, ಗ್ರಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT