ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಜಿಲ್ಲೆಯಲ್ಲಿ ಟೊಮೆಟೊ, ಈರುಳ್ಳಿ ದರ ಇಳಿಕೆ

ನುಗ್ಗೆಕಾಯಿ ಬೆಲೆ ಗಗನಕ್ಕೆ, ಕಡಿಮೆಯಾದ ಸೊಪ್ಪುಗಳ ದರ
Last Updated 11 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ಯಾದಗಿರಿ: ಕಳೆದ ವಾರಕ್ಕಿಂತ ಈ ವಾರ ತರಕಾರಿ ದರದಲ್ಲಿ ತುಸು ಇಳಿಕೆಯಾಗಿದೆ. ಆದರೆ, ಒಂದು ತಿಂಗಳಿಂದ ನುಗ್ಗೆಕಾಯಿ ದರ ಗಗನಕ್ಕೇರಿದ್ದು, ಎಲ್ಲಿಯೂ ಸಿಗುತ್ತಿಲ್ಲ. ಮದುವೆ ಸಿಸನ್‌ ಆರಂಭವಾಗಿದ್ದು, ಸಂಬಾರ್‌ನಲ್ಲಿ ನುಗ್ಗೆಕಾಯಿ ಘಮ ಇಲ್ಲದಂತೆ ಆಗಿದೆ.

ಟೊಮೆಟೊ ದರ ₹70ರಿಂದ ₹50ಕ್ಕೆ ಇಳಿಕೆಯಾಗಿದೆ. ಇದರ ಜೊತೆಗೆ ಈರುಳ್ಳಿ ದರವೂ ₹5ರಿಂದ ₹10 ಇಳಿಕೆಯಾಗಿದೆ. ಸಗಟು ದರದಲ್ಲಿ ₹35 ಮಾರಾಟವಾದರೆ, ಚಿಲ್ಲರೆ ದರದಲ್ಲಿ ₹40ಕ್ಕೆ ಒಂದು ಕೆ.ಜಿ ದರ ಇದೆ.

ನುಗ್ಗೆಕಾಯಿ ₹300 ಕೆಜಿ ಇದ್ದು, ಈಗ ಎಲ್ಲ ಕಡೆಯೂ ಇಲ್ಲ ಎನ್ನು ಉತ್ತರ ಸಿಗುತ್ತಿದೆ. ಕರಿಬೇವು ₹60ರಿಂದ ₹80 ಕೆಜಿ ಇದೆ. ಈಗ ಹಸಿ ಬಟಾಣಿ ಸಿಜನ್‌ ಶುರುವಾಗಿದ್ದು, ₹80ರಿಂದ 100 ರ ತನಕ ಒಂದು ಕೇಜಿಗೆ ಮಾರಾಟವಾಗುತ್ತಿದೆ. ಇಷ್ಟು ದಿನಗಳ ಕಾಲ ಹಸಿ ಬಟಾಣಿ ಸಗಟು ವ್ಯಾಪಾರಿಗಳಲ್ಲಿ ಮಾತ್ರ ಸಿಗುತ್ತಿತ್ತು. ಈಗ ಚಿಲ್ಲರೆ ಅಂಗಡಿಗಳಲ್ಲಿಯೂ ಮಾರಾಟಕ್ಕೆ ಇಡಲಾಗಿದೆ.

ಕಳೆದ ಎರಡ್ಮೂರು ದಿನಗಳಲ್ಲಿ ಹೂಕೋಸು ದರ ₹10 ದರ ಹೆಚ್ಚಳವಾಗಿದೆ. ಕಳೆದ ವಾರ ಬದನೆಕಾಯಿ ಶತಕದ ಸಮೀಪ ಬಂದಿತ್ತು. ಆದರೆ, ಈ ವಾರ ಕೆಜಿಗೆ ₹60 ದರವಿದೆ.

ಸೊಪ್ಪುಗಳ ದರ: ಈ ವಾರ ಸೊಪ್ಪುಗಳ ದರ ತುಸು ಇಳಿಕೆಯಾಗಿದೆ. ವಿವಿಧ ಸೊಪ್ಪುಗಳನ್ನು ₹20ಗೆ ಮೂರು ಕಟ್ಟು ನೀಡಲಾಗುತ್ತಿದೆ.

ಮೆಂತೆ ಸೊಪ್ಪು ₹15–20, ಪಾಲಕ್‌ ಸೊಪ್ಪು ₹20 ಮೂರು, ಪುಂಡಿಪಲ್ಯೆ ಒಂದು ಕಟ್ಟು ₹5, ರಾಜಗಿರಿ ಸೊಪ್ಪು ₹5ಗೆ ಒಂದು ಕಟ್ಟು, ಸಬ್ಬಸಿಗಿ ಒಂದು ಕಟ್ಟು ₹5, ಕೊತಂಬರಿ ಸೊಪ್ಪು ಒಂದು ಕಟ್ಟು ₹15–20, ಪುದೀನಾ ಒಂದು ಕಟ್ಟು ₹15–20 ದರ ಇದೆ.

ತರಕಾರಿ; ದರ (ಪ್ರತಿ ಕೆ.ಜಿಗೆ ₹ಗಳಲ್ಲಿ)
ಟೊಮೆಟೊ; 50-60
ಬದನೆಕಾಯಿ; 60–70
ಬೆಂಡೆಕಾಯಿ; 60–70
ದೊಣ್ಣೆಮೆಣಸಿನಕಾಯಿ; 60–70
ಆಲೂಗಡ್ಡೆ; 30-35
ಈರುಳ್ಳಿ; 30–35
ಎಲೆಕೋಸು; 40–50
ಹೂಕೋಸು; 60–70
ಚವಳೆಕಾಯಿ; 60–70
ಬೀನ್ಸ್; 70–80
ಗಜ್ಜರಿ;60-70
ಸೌತೆಕಾಯಿ; 40–50
ಮೂಲಂಗಿ; 40-50
ಮೆಣಸಿನಕಾಯಿ; 40-30
ಸೋರೆಕಾಯಿ; 40–50
ಬಿಟ್‌ರೂಟ್; 50-60
ಹೀರೆಕಾಯಿ; 60-70
ಹಾಗಲಕಾಯಿ; 50-60
ತೊಂಡೆಕಾಯಿ; 40-50
ಅವರೆಕಾಯಿ; 50–60

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT