ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ: ₹ 2 ಕೋಟಿ ವೆಚ್ಚದ ಟೌನ್‌ಹಾಲ್ ಉದ್ಘಾಟನೆ

Last Updated 29 ಸೆಪ್ಟೆಂಬರ್ 2020, 15:35 IST
ಅಕ್ಷರ ಗಾತ್ರ

ಶಹಾಪುರ: 2015-16ನೇ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ (ನೆಮ್ಮದಿ ಊರು) ಯೋಜನೆ ಅಡಿಯಲ್ಲಿ ₹ 2 ಕೋಟಿ ವೆಚ್ಚದಲ್ಲಿ ನಗರದ ಪ್ರಥಮದರ್ಜೆ ಕಾಲೇಜು ಆವರಣದಲ್ಲಿ ನಿರ್ಮಿಸಿದ ಟೌನ್‌ಹಾಲ್ ಕಟ್ಟಡವನ್ನು ಶಾಸಕ ಶರಣಬಸಪ್ಪ ದರ್ಶನಾಪುರ ಮಂಗಳವಾರ ಉದ್ಘಾಟಿಸಿದರು.

ಟೌನ್‌ಹಾಲ್‌ನಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಮತ್ತು ಸಭೆ ಸಮಾರಂಭಗಳಿಗೆ ಅನುಕೂಲವಾಗಲಿದೆ. ಕೆಳ ಮಹಡಿ ಮತ್ತು ಮೊದಲನೆ ಮಹಡಿ ಇದ್ದು ಡೈನಿಂಗ್ ಹಾಲ್, ಶೌಚಾಲಯವನ್ನು ಒಳಗೊಂಡಿದೆ. ಇನ್ನಷ್ಟು ಸೌಲಭ್ಯಗಳನ್ನು ಒದಗಿಸಬೇಕಾಗಿದೆ. ಇನ್ನೂ ₹ 1 ಕೋಟಿ ವೆಚ್ಚದಲ್ಲಿ ಕಾಂಪೌಂಡ ನಿರ್ಮಾಣ, ಖುರ್ಚಿ, ಧ್ವನಿವರ್ಧಕ ಹಾಗೂ ಇನ್ನಿತರ ಸಾಮಗ್ರಿ ಪಡೆದುಕೊಳ್ಳಲು ಅಂದಾಜುಪಟ್ಟಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವೆ ಎಂದರು.

ತಹಶೀಲ್ದಾರ್‌ ಜಗನಾಥರೆಡ್ಡಿ, ಪೌರಾಯುಕ್ತ ರಮೇಶ್ ಪಟ್ಟೇದಾರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜಗನ್ನಾಥ ಮೂರ್ತಿ, ಭೂಸೇನಾ ನಿಗಮದ ಅಧಿಕಾರಿ ಸದಾನಂದ ಎಸ್., ಯಡಳ್ಳಿ, ರಫೀಕ್ ಅಹ್ಮದ್, ಕಾಲೇಜಿನ ಪ್ರಾಚಾರ್ಯ ಪ್ರೊ.ಚೆನ್ನರೆಡ್ಡಿ ತಂಗಡಗಿ, ಶರಣು ಪೂಜಾರಿ, ನಗರಸಭೆ ಸದಸ್ಯರಾದ ಶಿವುಕುಮಾರ ತಳವಾರ, ಅಂಬ್ಲಪ್ಪ, ಮಾಜಿ ನಗರಸಭೆ ಸದಸ್ಯ ವಸಂತ ಸುರಪುರ, ಜ್ಞಾನಪ್ಪ ಅಣಬಿ, ರಾಮಣ್ಣ ಸಾದ್ಯಾಪುರ, ಮುಸ್ತಾಫ್ ದರ್ಬಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT