ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಸಂತ: ಸಿದ್ದೇಶ್ವರ ಶ್ರೀಗೆ ಶ್ರದ್ಧಾಂಜಲಿ

ಹುಣಸಗಿ ತಾಲ್ಲೂಕಿನ ವಿವಿಧೆಡೆ ಸಿದ್ದೇಶ್ವರ ಶ್ರೀಗೆ ಶ್ರದ್ಧಾಂಜಲಿ
Last Updated 5 ಜನವರಿ 2023, 5:47 IST
ಅಕ್ಷರ ಗಾತ್ರ

ಹುಣಸಗಿ: ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಸಭೆಗಳನ್ನು ನಡೆಸಿ ಸ್ವಯಂ ಪ್ರೇರಿತರಾಗಿ ಶ್ರದ್ಧಾಂಜಲಿ ಸಲ್ಲಿಸಿದರು.

ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ನೀಲಾಂಬೀಕಾ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಮಾಜದ ಮುಖಂಡ ಶಾಮಸುಂದರ ಜೋಶಿ ಮಾತನಾಡಿ, ತಮ್ಮ ಪ್ರವಚನಗಳ ಮೂಲಕ ಮನುಕುಲದ ಉದ್ದಾರಕ್ಕಾಗಿ ಶ್ರಮಿಸಿದ ಮಹಾನ್ ಸಂತ ಸಿದ್ದೇಶ್ವರ ಸ್ವಾಮೀಜಿ. ಅವರ ಸೇವಾ ಕಾರ್ಯ ಎಂತವರನ್ನು ಬೆರಗಾಗುವಂತೆ ಮಾಡಿದೆ. ಕಾವಿಯನ್ನು ಧರಿಸದೆ ತಮ್ಮ ಜೀವನದುದ್ದಕ್ಕೂ ಅಧ್ಯಾತ್ಮದ ಕೃಷಿ ಮಾಡಿದ ಋಷಿ ಎಂದು ಬಣ್ಣಿಸಿದರು.

ಹಿರಿಯ ಮುಖಂಡ ರವೀಂದ್ರ ಅಂಗಡಿ ಮಾತನಾಡಿ, ಪ್ರವಚನದ ಮೂಲಕ ದೇಶದ ಅಸಂಖ್ಯಾತ ಭಕ್ತರ ಜೀವನವನ್ನು ಪರಿವರ್ತನೆ ಮಾಡಿದ ಮಹಾಯೋಗಿ ಎಂದು ಹೇಳಿದರು.

ಈರಸಂಗಯ್ಯಸ್ವಾಮಿ ಕೊಡೇಕಲ್ಮಠ, ಶರಣಯ್ಯಸ್ವಾಮಿ ಹಿರೇಮಠ, ರಂಗನಾಥ ದೋರಿ,ಸೋಮಲಿಂಗಪ್ಪ ದೋರಿ, ಬಸನಗೌಡ ಮಾಲಿಪಾಟೀಲ, ಮೋಹನ ಪಾಟೀಲ, ಧರೆಪ್ಪ ಮೇಟಿ, ವೀರಸಂಗಪ್ಪ ಅಂಬ್ಲಿಹಾಳ, ಬೊಮ್ಮಣ್ಣ ಪತ್ತಾರ, ಬಸವರಾಜ ಅಡ್ಡಿ, ಚಂದ್ರಶೇಖರ ಹೋಕ್ರಾಣಿ, ಮಲ್ಲು ಜಂಗಳಿ, ರಮೇಶ ಬಿರಾದಾರ, ತಿಪ್ಪಣ್ಣ ದ್ಯಾಮನಾಳ,ವನಕೇರಪ್ಪ, ಸಂಗಣ್ಣ ನಾಗಬೇನಾಳ, ಸಾನಸಪ್ಪ ನವಲಗುಡ್ಡ, ಭೀಮಣ್ಣ ಗುಳಬಾಳ, ವಿರೇಶ ದೋರಿ, ಪ್ರಲ್ಹಾದ್ ಗೌಡ, ಮಹಾವೀರ ದೇವೂರ, ಫಾಯಣ್ಣ ಬಪ್ಪರಗಿ, ಗಿರೀಶ ಮನ್ಯಾಳ, ಸಂಗಮೇಶ ಧನ್ನೂರ, ಚಿನ್ನಪ್ಪ ಕುಂಬಾರ, ಮಶಾಕ್, ಸಂಗಣ್ಣ ಪಡಶೆಟ್ಟಿ ಇದ್ದರು.

ಕೊಡೇಕಲ್ಲ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮೇಣಬತ್ತಿ ಬೆಳಗುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಗ್ರಾಮದ ಬಸವೇಶ್ವರ ವೃತ್ತದ ಬಳಿ ಶ್ರೀಗಳ ಭಾವಚಿತ್ರಕ್ಕೆ ಮೇಣಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿದರು. ಈ ವೇಳೆ ಶಿಕ್ಷಕ ಅಶೋಕ ಕೋಳೂರ ಮಾತನಾಡಿ, ನಡೆದಾಡುವ ದೇವರಾದ ಶ್ರೀ ತಮ್ಮ ಆಧ್ಯಾತ್ಮಿಕ ವಾಣಿಯಿಂದ ವಿಶ್ವವನ್ನೆ ಬೆಳಗಿಹೋಗಿದ್ದಾರೆ. ಅಂತಹ ಮಹಾಯೋಗಿಗಳ ಅಮೃತ ನುಡಿಗಳನ್ನು ಒಂದು ತಿಂಗಳ ಕಾಲ ಕೊಡೇಕಲ್ಲ ಗ್ರಾಮದ ಜನ ಆಲಿಸಿದ್ದರು ಎಂದು ಹೇಳಿದರು.

ಈರಪ್ಪ ದೋರಿ, ಬಸನಗೌಡ ಮಾಲಿಪಾಟೀಲ, ರಮೇಶ ಬಿರಾದಾರ, ಬಸವರಾಜ ಭದ್ರಗೋಳ, ಕೋರಿಸಂಗಯ್ಯಗಡ್ಡದ, ಬಸಣ್ಣ ಬಾವೂರ, ಚಂದ್ರಶೇಖರ ಹೊಕ್ರಾಣಿ, ಮಲ್ಲು ಜಂಗಳಿ, ಚಂದಪ್ಪ ಸಜ್ಜನ, ಸಂಗನಬಸ್ಸು ಪಂಜಗಲ್ ಇದ್ದರು.

ಹಗರಟಗಿ ವರದಿ: ಹಗರಟಗಿ ಗ್ರಾಮದಲ್ಲಿ ಸಿದ್ದೇಶ್ವರಸ್ವಾಮೀಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಶಿಕ್ಷಕ ಭಾಗಣ್ಣ ಮಲ್ನಾಡ್ ಮಾತನಾಡಿದರು. ಸಂಗಣ್ಣ ಮಸ್ಕಾನಾಳ, ಅಂಬ್ರಣ್ಣ ಹಿರೂರ, ವಿರೇಶ ಸಜ್ಜನ, ಶರಣು ಅಕ್ಕಿ, ಬಸವರಾಜ ಮನಗೂಳಿ, ರಾಘವೇಂದ್ರ ಬಾಕ್ಲಿ, ಶಿವಲಿಂಗ ಹಿಕ್ಕಲಗುತ್ತಿ, ಕಾಶಿನಾಥ, ಬಸಣ್ಣ, ಭೀಮಣ್ಣ, ವೀರಭದ್ರಪ್ಪ, ರುದ್ರು, ಮಂಜುನಾಥ, ಮಲ್ಲಣ್ಣ, ಭೀಮನಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT