ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ಎಲ್ಲೆಡೆ ಜನಜಂಗುಳಿ

Last Updated 6 ಜುಲೈ 2021, 3:19 IST
ಅಕ್ಷರ ಗಾತ್ರ

ಸುರಪುರ: ರಾಜ್ಯ ಸರ್ಕಾರ ಸೋಮವಾರದಿಂದ ಸಂಪೂರ್ಣ ಅನ್‍ಲಾಕ್ ಘೋಷಿಸುತ್ತಿದ್ದಂತೆ ಸುರಪುರ ನಗರ ಯಥಾಸ್ಥಿತಿಗೆ ಬರುತ್ತಿದೆ. ಇದನ್ನೇ ಕಾಯುತ್ತಿದ್ದ ಜನರು ಎಲ್ಲೆಂದರಲ್ಲಿ ತಿರುಗಾಡುತ್ತಿದ್ದಾರೆ. ಅಂತರ, ಮಾಸ್ಕ್ ಮಾಯವಾಗಿದೆ. ಮಾರುಕಟ್ಟೆ, ವೃತ್ತಗಳು, ಮುಖ್ಯ ರಸ್ತೆಗಳು, ಬಸ್‍ನಿಲ್ದಾಣ ಇತರ ಮುಖ್ಯ ಸ್ಥಳಗಳಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು.

ತರಕಾರಿ, ಕಿರಾಣಿ, ಬಟ್ಟೆ ಅಂಗಡಿ, ಚಿನ್ನದ ಅಂಗಡಿಗಳಲ್ಲಿ ಜನದಟ್ಟಣೆ ಕಂಡುಬಂತು. ಮದುವೆ ಸಮಾರಂಭಗಳು ಇನ್ನೂ ನಡೆಯುತ್ತಿರುವುದರಿಂದ ಗ್ರಾಹಕರು ನಗರಕ್ಕೆ ಆಗಮಿಸಿದ್ದರು.ಚಹಾದ ಅಂಗಡಿ, ಮದ್ಯದಂಗಡಿ ಹಾಗೂ ಹೊಟೆಲ್‍ಗಳಲ್ಲಿ ಜನರು ಸೇರಿದ್ದರು.

ದೇವಸ್ಥಾನಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಲಿಲ್ಲ. ನಗರದ ಪ್ರಮುಖ ದೇವಸ್ಥಾನಗಳಾದ ವೇಣುಗೋಪಾಲಸ್ವಾಮಿ, ಲಕ್ಷ್ಮೀ ನರಸಿಂಹ, ರಾಮದೇವರ ಗುಡಿ, ಬನಶಂಕರಿ ಮತ್ತಿತರ ದೇವಸ್ಥಾನಗಳ ಬಾಗಿಲು ತೆರೆದಿದ್ದವು. ಅರ್ಚಕರು ಭಕ್ತರಿಗಾಗಿ ಕಾಯುವಂತಾಯಿತು.

‘ಲಾಕ್‍ಡೌನ್ ಇದ್ದರಿಂದ ಕೇವಲ ಪೂಜೆಯನ್ನಷ್ಟೆ ಮಾಡುತ್ತಿದ್ದೇವು. ಸೋಮವಾರ ಭಕ್ತರಿಗಾಗಿ ದೇವಸ್ಥಾನ ಮುಕ್ತಗೊಳಿಸಿದೆವು. ಭಕ್ತರು ಬೆರಳೆಣಿಕೆಯಷ್ಟೆ ಬಂದರು. ತೀರ್ಥ, ಮಂತ್ರಾಕ್ಷತೆ ಕೊಟ್ಟು ಕಳುಹಿಸಿದೆವು’ ಎಂದು ವೇಣುಗೋಪಾಲಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಅಂಜನೇಯಚಾರ್ಯುಲು ತಿಳಿಸಿದರು.

‘ಸುರಪುರ ಬಸ್ ಘಟಕದಿಂದ ಸೋಮವಾರ 40 ಬಸ್‍ಗಳನ್ನು ವಿವಿಧ ಸ್ಥಳಗಳಿಗೆ ಓಡಿಸಲಾಗಿದೆ. ಪ್ರಯಾಣಿಕರ ಸಂಖ್ಯೆ ಪರವಾಗಿಲ್ಲ. ಬಸ್‍ಗಳಿಗೆ ದಿನಾಲೂ ಸೋಂಕು ನಿವಾರಣಾ ದ್ರಾವಣ ಸಿಂಪಡಿಸುತ್ತೇವೆ. ಮಂಗಳವಾರದಿಂದ ಮತ್ತಷ್ಟು ಬಸ್‍ಗಳನ್ನು ಓಡಿಸುತ್ತೇವೆ’ ಎಂದು ಘಟಕ ವ್ಯವಸ್ಥಾಪಕ ಭದ್ರಪ್ಪ ತಿಳಿಸಿದರು.

‘ಅನ್‍ಲಾಕ್ ಅರ್ಥ ಕೊರೊನಾ ಸಂಪೂರ್ಣ ತೊಲಗಿದೆ ಎಂದಲ್ಲ. ಮಾರ್ಗಸೂಚಿಗಳನ್ನು ತಪ್ಪದೆ ಪಾಲಿಸಬೇಕು. ಮೈಮರೆತರೆ ಕೊರೊನಾ ಪ್ರಕರಣಗಳು ಮತ್ತೆ ಹೆಚ್ಚುವ ಸಂಭವವಿರುತ್ತದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪನಾಯಕ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT