‘ಬದುಕಿಗೆ ವಚನ ಸಾಹಿತ್ಯ ಮಾರ್ಗದರ್ಶಿ’

7
ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಕಿವಿಮಾತು

‘ಬದುಕಿಗೆ ವಚನ ಸಾಹಿತ್ಯ ಮಾರ್ಗದರ್ಶಿ’

Published:
Updated:
Deccan Herald

ಯಾದಗಿರಿ: ‘ಬದುಕಿಗೆ ಮಾರ್ಗದರ್ಶನ ನೀಡುವ ವಚನ ಸಾಹಿತ್ಯವನ್ನು ಎಲ್ಲರೂ ಅಧ್ಯಯನ ಮಾಡಬೇಕು’ ಎಂದು ಗುರುಮಠಕಲ್‌ ಖಾಸಾಮಠದ ಪೀಠಾಧಿಪತಿ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಕರೆ ನೀಡಿದರು.

ಇಲ್ಲಿನ ಸರ್ವಜ್ಞ ಕಾಲೇಜಿನಲ್ಲಿ ಸೋಮವಾರ ಸಗರನಾಡು ಸೇವಾ ಪ್ರತಿಷ್ಠಾನ ಆಯೋಜಿಸಿದ್ದ ಶ್ರಾವಣ ಸಂಭ್ರಮ ವಿಶೇಷ ಸರಣಿ ಉಪನ್ಯಾಸ ಮಾಲಿಕೆ ಉದ್ಘಾಟಿಸಿ ಮಾತನಾಡಿದರು.

‘ಸಾಹಿತ್ಯ ಪ್ರಾಕಾರಗಳಲ್ಲೇ ವಚನ ಸಾಹಿತ್ಯ ಭಿನ್ನ ಮತ್ತು ಅತ್ಯಂತ ವಿಶಿಷ್ಠವಾದದು. ಆದರೆ, ವಚನ ಸಾಹಿತ್ಯವನ್ನು ಅಧ್ಯಯನ ಮಾಡುವವರ ಸಂಖ್ಯೆ ಕ್ಷೀಣಿಸಿದೆ. ವಚನ ಸಾಹಿತ್ಯ ಹೊರಗಿಟ್ಟು ಅನ್ಯ ಸಾಹಿತ್ಯ ಪ್ರಾಕಾರಗಳನ್ನು ಅಧ್ಯಯನ ಮಾಡಿದರೂ ಸಾಹಿತ್ಯ ಅಧ್ಯಯನ ಪರಿಪೂರ್ಣ ಆಗುವುದಿಲ್ಲ. ಪ್ರತಿಯೊಬ್ಬರೂ ವಚನ ಪರಂಪರೆಯನ್ನು ಪೋಷಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಶ್ರಾವಣಮಾಸಕ್ಕೆ ಸನಾತನ ಸಂಸ್ಕೃತಿಯಲ್ಲಿಯೇ ಅತ್ಯಂತ ವಿಶಿಷ್ಟ ಸ್ಥಾನ ಪಡೆದಿದೆ. ವ್ರತಧಾರಿಗಳಾಗಿ, ನೇಮನಿಷ್ಠೆಯಿಂದ ಪೂಜೆ, ಧ್ಯಾನ, ಧಾರ್ಮಿಕ ಆಚರಣೆಗಳನ್ನು ಕಟ್ಟುನಿಟ್ಟಾಗಿ ಮಾಡುವವರಿಗೆ ಬದುಕಿನ ಸನ್ಮಾರ್ಗ ಪ್ರಾಪ್ತಿಯಾಗುತ್ತದೆ. ಯಾವ ಸತ್ಕಾರ್ಯಕ್ಕೂ ಶ್ರಾವಣಮಾಸ ಪವಿತ್ರವಾದುದು. ಆತ್ಮ ಮತ್ತು ಮನಸ್ಸನ್ನು ಪರಿಶುದ್ಧಗೊಳಿಸುವಂತಹ ಶಕ್ತಿ ಶ್ರಾವಣ ಮಾಸಕ್ಕೆ ಇದೆ’ ಎಂದರು.

ಯುವ ಸಾಹಿತಿ ಮಂಜುನಾಥ ಜುನಗೊಂಡ ಬಸವಾದಿ ಶರಣರು ಮತ್ತು ವಚನ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ನೀಡಿ,‘ಶರಣರು ರಚಿಸಿದ ಪ್ರತಿಯೊಂದು ವಚನಗಳು ನಮ್ಮ ಬದುಕಿಗೆ, ಸಾಧನೆಗೆ ಸ್ಫೂರ್ತಿಯಾಗಿದೆ. 12ನೇ ಶತಮಾನದಲ್ಲಿಯೇ ಬಸವಣ್ಣ ಜಗತ್ತಿಗೆ ಸಂಸತ್ತಿನ ಪರಿಕಲ್ಪನೆಯನ್ನು ನೀಡಿದ್ದರು. ಕಾಯಕ ಮತ್ತು ದಾಸೊಹ ಸಂಸ್ಕೃತಿಗೆ ಹೊಸ ಭಾಷ್ಯ ಬರೆದರು. ಅಲ್ಲದೇ ಅಡುಗೆ ಕೋಣೆಗೆ ಸಿಮಿತವಾಗಿದ್ದ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತಂದು ವಚನಗಳನ್ನು ರಚಿಸಲು ಅವಕಾಶ ಮಾಡಿಕೊಟ್ಟರು. ಸಮಾಜದಲ್ಲಿ ಅತ್ಯಂತ ಆಳವಾಗಿ ಬೇರುರಿದ್ದ ಜಾತಿ ವ್ಯವಸ್ಥೆಯ ವಿರುದ್ಧ ಸಮರಸಾರಿ ಅಂತರ್ಜಾತಿ ವಿವಾಹಕ್ಕೆ ಅವಕಾಶ ಕಲ್ಪಿಸಿದ್ದರು’ ಎಂದು ಹೆಳಿದರು.

ಹಿರಿಯ ಪತ್ರಕರ್ತ ಅಯ್ಯಣ್ಣ ಹುಂಡೆಕಾರ ಮಾತನಾಡಿ,‘ ಇಸ್ಲಾಂ ಬಂಧುಗಳಿಗೆ ರಂಜಾನ್‌ ತಿಂಗಳು ಎಷ್ಟು ವಿಶೇಷ ಮತ್ತು ಪವಿತ್ರವೋ ಹಾಗೆ ಹಿಂದುಗಳಿಗೆ ಶ್ರಾವಣಮಾಸ ವಿಶೇಷ ಮತ್ತು ಪವಿತ್ರ ಮಾಸವಾಗಿದೆ. ಈ ಮಾಸದಲ್ಲಿ ಕೈಗೊಳ್ಳಬೇಕಾದ ಧಾರ್ಮಿಕ ಆಚರಣೆಗಳನ್ನು ಕೈಗೊಂಡು ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕಿದೆ’ ಎಂದು ಸಲಹೆ ನೀಡಿದರು.

ಜಿಲ್ಲಾ ಕನ್ನಡ ಸಾಹಿತ್ಯು ಅಧ್ಯಕ್ಷ ಸಿದ್ದಪ್ಪಹೊಟ್ಟಿ, ಅಲ್ಲಮಪ್ರಭು ಅಭಿವೃದ್ಧಿ ಅಕಾಡೆಮಿ ಅಧ್ಯಕ್ಷ ಸೋಮಶೇಖರ ಮಣ್ಣೂರು ಮಾತನಾಡಿದರು.

ಕಾಲೇಜಿನ ಪ್ರಾಚಾರ್ಯ ಗಂಗಾಧರ ಬಡಿಗೆರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಾಸ್ತ್ತಾವಿಕವಾಗಿ ಮಾತನಾಡಿದರು, ಉಪನ್ಯಾಸಕ ಶ್ರೀಶೈಲ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು, ಆಕಾಶ ಜುಲಾತೆ ಸ್ವಾಗತಿಸಿದರು. ವಿವೇಕಾನಂದ ಸ್ವಾಮಿ ವಂದಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !