ಶಹಾಪುರ: ಯುಪಿಎಸ್ಸಿ ಪರೀಕ್ಷೆ ಫಲಿತಾಂಶ ಹೊರ ಬಿದ್ದಿದ್ದು, ತಾಲ್ಲೂಕಿನ ಇಬ್ಬರು ಯುವಕರು ಆಯ್ಕೆಯಾಗಿರುವುದು ವಿಶೇಷವಾಗಿದೆ. ನಗರದ ಗುತ್ತಿಪೇಟ ನಿವಾಸಿ ಬಸವರಾಜ ಜವಳಿ 664ನೇ ರ್ಯಾಂಕ್ ಪಡೆದರೆ, ತಾಲ್ಲೂಕಿನ ಚೆನ್ನೂರ(ಕೆ) ಗ್ರಾಮದ ಯುವಕ ಚಂದ್ರಶೇಖರ ಯುಪಿಎಸ್ಸಿ ಪರೀಕ್ಷೆಯಲ್ಲಿ 880 ರ್ಯಾಂಕ್ ಪಡೆದು ಇಬ್ಬರು ಗಮನಾರ್ಹ ಸಾಧನೆ ಮಾಡಿದ್ದಾರೆ.

ನಗರದ ಗುತ್ತಿಪೇಟ ಬಡಾವಣೆಯ ವಿಶ್ವನಾಥ ಜವಳಿ ಅವರ ಪುತ್ರ ಬಸವರಾಜ ಅವರು ನಗರ ಸುಮಿತ್ರ ಶಿಕ್ಷಣ ಸಂಸ್ಥೆಯಲ್ಲಿ 1ರಿಂದ 7ರವರೆಗೆ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿದ್ದಾರೆ. ನಂತರ ಸಿವಿಲ್ ಎಂಜನಿಯರಿಂಗ್ ಮಾಡಿ ಪದವಿ ಪಡೆದಿದ್ದಾರೆ.

‘ಅಂದಿನ ಪುರಸಭೆಗೆ ಮುಖ್ಯಾಧಿಕಾರಿಯಾಗಿ ಮಹಿಳಾ ಅಧಿಕಾರಿ ಒಬ್ಬರು ಆಗಮಿಸಿದ್ದರು. ನಗರದ ರಸ್ತೆ ಒತ್ತುವರಿ ಪ್ರದೇಶಕ್ಕೆ ಭೇಟಿ ನೀಡಿ ಯಾವುದೆ ಮುಲಾಜಿಲ್ಲದೆ ರಸ್ತೆ ಒತ್ತುವರಿ ತೆರವುಗೊಳಿಸಿದರು. ಆಗ ನಾನು 7ನೇ ತರಗತಿ ಅಭ್ಯಾಸ ಮಾಡುತ್ತಿದ್ದೆ. ನಾನು ಹಿರಿಯ ಅಧಿಕಾರಿಯಾದರೆ ಯಾರಿಗೂ ಬಗ್ಗದೆ ಸಾರ್ವಜನಿಕ ಸೇವೆ ಮಾಡಬಹುದು ಎಂಬ ಆಸೆ ಚಿಗುರೊಡೆಯಿತು. ಅಲ್ಲದೆ ನನ್ನ ಸಂಬಂಧಿಕರು ಒಬ್ಬರು ಐಪಿಎಸ್ ಉತ್ತಿರ್ಣರಾಗಿದ್ದರು. ಇವರಿಬ್ಬರು ನನಗೆ ಪ್ರೇರಣೆಯಾಗಿ ಯುಪಿಎಸ್ಸಿ ಪರೀಕ್ಷೆ ಬರೆಯಲು ಮುಂದಾದೆ’ ಎನ್ನುತ್ತಾರೆ ಬಸವರಾಜ.

‘ಅದರಂತೆ ನಿರಂತರ ಅಭ್ಯಾಸ ಮಾಡುವುದರ ಜತೆಗೆ ಗೆಳಯರ ಜತೆ ಗುಂಪು ಚರ್ಚೆ ಮಾಡಿದೆ. ಅಲ್ಲದೆ ಕನ್ನಡ ಮಾಧ್ಯಮ ವಿದ್ಯಾರ್ಥಿಯಾಗಿದ್ದರಿಂದ ‘ಪ್ರಜಾವಾಣಿ’ ದಿನ ಪತ್ರಿಕೆಯನ್ನು ಚಿಕ್ಕಂದಿನಿಂದಲೇ ಓದಲು ಆರಂಭಿಸಿದೆ. ಮುಂದೆ ಸ್ಪರ್ಧಾತ್ಮ ಪರೀಕ್ಷೆ ಬರೆಯಲು ಪ್ರಜಾವಾಣಿ ನನಗೆ ಬದುಕಿನ ದಿಕ್ಸೂಚಿಯಾಯಿತು. ಸ್ಪರ್ಧಾತ್ಮ ಪರೀಕ್ಷೆಯಲ್ಲಿ ಕನ್ನಡ ದಿನಪತ್ರಿಕೆ ಪ್ರಜಾವಾಣಿ ವಿದ್ಯಾರ್ಥಿಗಳಿಗೆ ಬೈಬಲ್ ಆಗಿದೆ’ ಎನ್ನುತ್ತಾರೆ.

ತಾಲ್ಲೂಕಿನ ಚೆನ್ನೂರ(ಕೆ) ಗ್ರಾಮದ ಅಪ್ಪಟ ಗ್ರಾಮೀಣ ಪ್ರತಿಭೆಯಾಗಿರುವ ಚಂದ್ರಶೇಖರ ಅವರದು ಬಡ ಕುಟುಂಬ. ತಂದೆ ಮಾನಶಪ್ಪ ಕೃಷಿ ಕೆಲಸ ನಿರ್ವಹಿಸಿ ಮಕ್ಕಳನ್ನು ಓದಿಸಿದರು. ವನದುರ್ಗದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಚಂದ್ರಶೇಖರ ಅಭ್ಯಾಸ ಮಾಡಿದ್ದಾರೆ.

‘ನನಗೆ ನಮ್ಮ ಅಣ್ಣನೇ ಪ್ರೇರಣೆ ಹಾಗೂ ಗುರು ಆಗಿದ್ದಾರೆ. ಅವರ ನಿರಂತರ ಓದಿನ ಬಗ್ಗೆ ಆಸಕ್ತಿ ಮೂಡಿಸುವುದರ ಜತೆಯಲ್ಲಿ ಪರೀಕ್ಷೆ ಸಿದ್ಧತೆ ಬಗ್ಗೆ ಜಾಗೃತಿ ಹಾಗೂ ಅರಿವು ಮೂಡಿಸಿದರು. ನೀನು ಐಪಿಎಸ್ ಅಧಿಕಾರಿ ಆಗಬೇಕು ಎಂದು ಪ್ರೇರಣೆ ನೀಡಿದರ ಫಲವಾಗಿ ನನ್ನ ಮನಸ್ಸಿನಲ್ಲಿ ಉನ್ನತ ಗುರಿ ಮೂಡಿತು. ಅದರಂತೆ ಅವಿರತವಾಗಿ ಪ್ರಯತ್ನ ಮಾಡಿದೆ. ಹಲವು ಬಾರಿ ವಿಫಲನಾದರು ಸಹ ಎದೆಗುಂದೆ ಕೊನೆಗೆ ಯಶಸ್ವಿಯ ದಡ ಸೇರಿದೆ’ ಎನ್ನುತ್ತಾರೆ ಚಂದ್ರಶೇಖರ.

ಇಬ್ಬರ ಯುವಕರ ಸಾಧನೆಗೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹಾಗೂ ತಾಲ್ಲೂಕಿನ ಜನತೆ ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.