ವಡಗೇರಾ: ಕೇಂದ್ರ ಸರ್ಕಾರ ವಡಗೇರಾ ತಾಲ್ಲೂಕನ್ನು ಮಹತ್ವಕಾಂಕ್ಷಿ ತಾಲ್ಲೂಕು ಎಂದು ಘೋಷಣೆ ಮಾಡಿದರೂ ಹಿಂದುಳಿದ ತಾಲ್ಲೂಕು ಕೇಂದ್ರ ಯಾರಿಗೂ ಬೇಡವಾಗಿದೆ. ರಾಯಚೂರು ಸಂಸದರಾಗಿ ಜಿ.ಕುಮಾರ ನಾಯಕ ಆಯ್ಕೆಯಾಗಿ 6 ತಿಂಗಳುಗಳು ಕಳೆಯುತ್ತಾ ಬಂದರು ಈವರೆಗೂ ವಡಗೇರಾ ತಾಲ್ಲೂಕಿಗೆ ಬೇಟಿ ಕೊಟ್ಟಿಲ್ಲ.

ತಾಲ್ಲೂಕಿನ ಹಿನ್ನೆಲೆ: ಕಳೆದ 7 ವರ್ಷಗಳ ಹಿಂದೆ ವಡಗೇರಾ ತಾಲ್ಲೂಕು ಕೇಂದ್ರ ಎಂದು ಕಾರ್ಯ ನಿರ್ವಹಿಸುತ್ತಾ ಇದೆ. ಈ ತಾಲ್ಲೂಕಿನ ವ್ಯಾಪ್ತಿಯಲ್ಲಿ 17 ಪಂಚಾಯಿತಿಳಿದ್ದು ಒಟ್ಟು ಜನಸಂಖ್ಯೆ, 1,09,752, ಕುಟುಂಬಗಳ ಸಂಖ್ಯೆ 1,8427 ಇದೆ (2011ರ ಜನಗಣತಿ ಪ್ರಕಾರ).

ಕೃಷ್ಣಾ, ಭೀಮಾ ನದಿಗಳು ಇಲ್ಲಿನ ಪ್ರಮುಖ ಜಲಮೂಲಗಳಾಗಿದ್ದು 26,898 ಹೇಕ್ಟರ್ ನೀರಾವರಿ ಕ್ಷೇತ್ರ, 25,352 ಒಣ ಬೇಸಾಯ ಭೂಮಿ ಇದೆ. ಭತ್ತ, ಶೇಂಗಾ, ಹತ್ತಿ, ತೊಗರಿ, ಹೆಸರು, ಜೋಳ ಇಲ್ಲಿನ ಪ್ರಮುಖ ಬೆಳೆಗಳು. ಸಕಾಲದಲ್ಲಿ ಜಮೀನುಗಳಿಗೆ ನೀರು ಸಿಗದೆ ಇರುವದರಿಂದ ರೈತರು ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ.

ಮಳೆಗಾಲದಲ್ಲಿ ಹಾಗೂ ಪ್ರವಾಹ ಬಂದಾಗ ಈ ಎರಡು ನದಿಗಳು ತುಂಬಿ ಹರಿಯುತ್ತವೆ. ನದಿಯ ನೀರು ಸಂಗ್ರಹಿಸಲು ಚೆನ್ನೂರ (ಜೆ) ಹತ್ತಿರ ಬ್ರಿಜ್ ಕಂ ಬ್ಯಾರೇಜ್ ಇಲ್ಲದಿರುವದರಿಂದ ನೀರು ವ್ಯರ್ಥವಾಗುತ್ತಿದೆ.

ತಾಲ್ಲೂಕಿನ ಚೆನ್ನೂರ (ಜೆ) ಹತ್ತಿರ ಕೃಷ್ಣಾ ನದಿಗೆ ಅಡ್ಡಲಾಗಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಿದರೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಸುಮಾರು 14 ಸಾವಿರ ಹೇಕ್ಟೆರ್, ವಡಗೇರಾ ತಾಲ್ಲೂಕಿನ ಸುಮಾರು 21 ಸಾವಿರ ಹೇಕ್ಟೆರ್ ಜಮೀನುಗಳಿಗೆ ನೀರಿನ ಅನುಕೂಲವಾಗುತ್ತದೆ.

ಈ ಹಿಂದೆ ಚೆನ್ನೂರ (ಜೆ) ಹತ್ತಿರ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ರಾಜ್ಯ ಸರ್ಕಾರಕ್ಕೆ ಅನುಮೋದನೆಗೆ ಮನವಿ ಕಳುಹಿಸಲಾಗಿತ್ತು. ಆಗ ನೀರಾವರಿ ಸಚಿವರಾಗಿದ್ದ ರಮೇಶ ಚಾರಕಿಹೊಳಿ ಅದಕ್ಕೆ ಅನುಮೋದನೆ ಕೊಡುವ ಭರವಸೆ ನೀಡಿದ್ದರು. ಈಗಲೂ ಅದು ಭರವಸೆಯಾಗಿಯೇ ಇದೆ.

ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಹಾಗೂ ಹಿಂದುಳಿದ ತಾಲ್ಲೂಕಾ ಕೇಂದ್ರವಾದ ವಡಗೇರಾ ಆರೋಗ್ಯ, ಶಿಕ್ಷಣ, ಕೃಷಿ, ಜಲಸಂಪನ್ಮೂಲ, ಕೌಶಲಾಭಿವೃದ್ಧಿ, ಸಾಮಾಜಿಕ ಅಿವೃದ್ಧಿ, ಮೂಲಸೌಕರ್ಯಗಳು ಕುಂಟುತ್ತಾ ಸಾಗುವುದರ ಜತೆ ಸಮಸ್ಯೆಗಳ ಸುಳಿಯಲ್ಲಿ ತೇಲಾಡುತ್ತಾ ಇದೆ.

ರಾಯಚೂರು ಲೋಕಸಭಾ ಸಂಸದ ಜಿ.ಕುಮಾರ ನಾಯಕ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಹಾಗೂ ಹಿಂದುಳಿದ ತಾಲ್ಲೂಕಾ ಕೇಂದ್ರವಾದ ವಡಗೇರಾಕ್ಕೆ ಬೇಟಿ ಕೊಟ್ಟು ಜನ ಸಾಮಾನ್ಯರ, ಗ್ರಾಮಸ್ಥರ, ವಿದ್ಯಾರ್ಥಿಗಳ ಹಾಗೂ ರೈತರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎನ್ನುವುದು ಇಲ್ಲಿನ ಜನ, ಸಂಘಟನೆಗಳ ಅಭಿಪ್ರಾಯವಾಗಿದೆ.

‘ಇಲ್ಲಿಯವರೆಗೂ ಜಿಲ್ಲಾ ಉಸ್ತುವಾರಿ ಸಚಿವರು ವಡಗೇರಾ ತಾಲ್ಲೂಕಿಗೆ ಬೇಟಿ ಕೊಟ್ಟಿಲ್ಲ. ಲೋಕಸಭಾ ಸದಸ್ಯ ಕುಮಾರ ನಾಯಕ ಅವರಾದರೂ ಇಲ್ಲಿ ಬಂದು ಸಮಸ್ಯೆ ಆಲಿಸಬೇಕು’ ಎನ್ನುವುದು ಜನರ ಆಗ್ರಹ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.