ವಡಗೇರಾ: ವಡಗೇರಾ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಕೋನಹಳ್ಳಿ ಗ್ರಾಮದ ಹನುಮಾನ ದೇವಾಲಯದ ಹತ್ತಿರ ಕುಡಿಯುವ ನೀರಿನ ಪೈಪ್ ಹಾಳಾಗಿ ತಿಂಗಳುಗಳಾಗಿವೆ. ಹೀಗಾಗಿ ಪೈಪ್ ದುರಸ್ತಿಯನ್ನು ಕೂಟಲೇ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

‘ಪೈಪ್ ಒಡೆದು ಹೋದಕಾರಣ ಮನೆಗಳಿಗೆ ಸರಬರಾಜು ಆಗುವ ಕುಡಿಯುವ ನೀರಿನಲ್ಲಿ ಚರಂಡಿಯ ಹೊಲಸು ನೀರು ಸೇರಿಕೊಳ್ಳುತ್ತಿದೆ. ಇದರಿಂದ ರೋಗ ರುಜಿನಗಳ ಆತಂಕ ಉಂಟಾಗಿದೆ’ ಎನ್ನುತ್ತಾರೆ ಗ್ರಾಮಸ್ಥರು.

ಒಡೆದ ಪೈಪ್ನಿಂದ ಬರುವ ನೀರು ರಸ್ತೆ ಅತಿಕ್ರಮಿಸಿಕೊಂಡು ಗಲೀಜು ಸೃಷ್ಟಿಸುತ್ತಿದೆ. ಈ ಹೊಲಸು ನೀರಿನಲ್ಲಿಯೆ ಭಕ್ತರು ಹನುಮಾನ ದೇವಾಯಕ್ಕೆ ಬರುವುದು ಅನಿವಾರ್ಯವಾಗಿದೆ. ಅಲ್ಲದೆ ಶುದ್ಧ ಕುಡಿಯುವ ನೀರಿಗಾಗಿ ಖಾಲಿ ಕೊಡಗಳನ್ನು ಹಿಡದುಕೊಂಡು ಬೋರವೆಲ್ ಗಳಿಗೆ ಅಲೆಯುವದು ಸಾಮಾನ್ಯವಾಗಿದೆ’ ಎಂದು ತಮ್ಮ ಅಳಲು ತೊಡಿಕೊಂಡರು.

ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೆ ಪ್ರಯೋಜನವಾಗಿಲ್ಲ. ಇನ್ನಾದರೂ ಅಧಿಕಾರಿಗಳು ಪೈಪ್ ದುರಸ್ತಿ ಮಾಡಬೇಕು. ಒಂದು ವೇಳೆ ಉದಾಸಿನತೆ ಮುಂದುವರೆಸಿದರೆ ಗ್ರಾಮ ಪಂಚಾಯಿತಿ ಎದರುರು ಪ್ರತಿಭಟಿಸಲಾಗುವುದು’ ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.