ವಡಗೇರಾ: ‘ಮಾನಸಿಕ ನೆಮ್ಮದಿ ಪಡೆಯಬೇಕಾದರೆ ಪಾದಯಾತ್ರೆ, ಧಾರ್ಮಿಕ ಕಾರ್ಯಕ್ರಮ, ದೇವರ ಧ್ಯಾನ ಮಾಡುವದು ಬಹಳ ಅವಶ್ಯ’ ಎಂದು ಅಡವಿಲಿಂಗ ಮಹಾರಾಜರು ಹೇಳಿದರು.

ಸಮೀಪದ ಕೊಳ್ಳೂರು ಗ್ರಾಮದಲ್ಲಿ ಷಣ್ಮುಖಪ್ಪ ಪೂಜಾರಿ ನೇತೃತ್ವದಲ್ಲಿ ಸತತ 7ನೇ ವರ್ಷದ ಕೊಳ್ಳೂರು–ತಿರುಪತಿ ಪಾದಯಾತ್ರೆ ಕೈಗೊಂಡ ಭಕ್ತರಿಗೆ ಆಶೀರ್ವಾದ ನೀಡಿ ಅವರು ಮಾತನಾಡಿದರು.

‘ಇಂದಿನ ಅವಸರದ ಜೀವನದಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಕಷ್ಟು ಜನರಿಗೆ ಆಗುತ್ತಿಲ್ಲ. ಇದರಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗುತಿದ್ದಾರೆ. ಅದರಿಂದ ಹೊರಬರಬೇಕಾದರೆ ವರ್ಷಕ್ಕೆ ಒಮ್ಮೆಯಾದರೂ ಧಾರ್ಮಿಕ ಸ್ಥಳಗಳಿಗೆ ಪಾದಯಾತ್ರೆ ಕೈಗೊಳ್ಳಬೇಕು’ ಎಂದು ತಿಳಿಸಿದರು.

ಜಿ.ಪಂ ಮಾಜಿ ಸದಸ್ಯ ಶ್ರೀನಿವಾಸರಡ್ಡಿ ಚೆನ್ನೂರ ಮಾತನಾಡಿ, ‘ಕಳೆದ 7 ವರ್ಷದಿಂದ ಕೊಳ್ಳೂರು ಗ್ರಾಮದ ಭಕ್ತರು ಪಾದಯಾತ್ರೆ ಕೈಗೊಳ್ಳುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಮಹೇಶರಡ್ಡಿ ಮುದ್ನಾಳ ಮಾತನಾಡಿ, ‘ಕಷ್ಟದಲ್ಲಿ ಇದ್ದವರಿಗೆ ಸಹಾಯ , ಸಹಕಾರ ಹಾಗೂ ಪರೋಪಕಾರ ಕಾರ್ಯಗಳನ್ನು ಮಾಡಬೇಕು, ಆಗ ಮಾತ್ರ ಮೋಕ್ಷ ಪಡೆಯಲು ಸಾಧ್ಯ’ ಎಂದು ಅಭಿಪ್ರಾಯ ಪಟ್ಟರು.

ಸುಮಾರು 50ಕ್ಕಿಂತ ಹೆಚ್ಚು ಜನ ಕೊಳ್ಳೂರಿನಿಂದ ತಿರುಪತಿಗೆ ಪಾದಯಾತ್ರೆಯನ್ನು ಕೈಗೊಂಡಿದ್ದಾರೆ.

ದೇವಾಪೂರ ಶಿವಾಚಾರ್ಯರು, ರಾಜಾವೇಣುಗೋಪಾಲ, ಬಸವರಾಜ ಭಂಗಿ, ಅಮಲಯ್ಯ, ಬಸವರಾಜ ಗಿನಕೇರಿ, ವಾಲ್ಮಿಕಿ ನಾಯಕ ರಾಮಣ್ಣ, ನಾಗಪ್ಪ ಹಾಗೂ ಇನ್ನಿತರರು ಇದ್ದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-30-1444583370

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.