ವಡಗೇರಾ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಬುಧವಾರ ಬೆಳಿಗ್ಗೆ ಅಕಾಲಿಕವಾಗಿ ಸುರಿದ ರೋಹಿಣಿ ಮಳೆಯ ನೀರಿಗೆ ಗ್ರಾಮದ ಬಡಾವಣೆಗಳು ಹಾಗೂ ಮುಖ್ಯ ರಸ್ತೆಗಳ ಮೇಲೆ ನೀರು ಹರಿದಾಡಿರುವುದರಿಂದ ಗ್ರಾಮಸ್ಥರಿಗೆ ನಡೆದಾಡಲು ತೀವ್ರ ಸಮಸ್ಯೆಯಾಯಿತು.

ಬುಧುವಾರ ಬೆಳಿಗ್ಗೆ ಸುಮಾರು 5.15ಕ್ಕೆ ಆರಂಭವಾದ ಜೋರಾದ ಮಳೆ ಸತತವಾಗಿ ಒಂದು ಗಂಟೆ ಕಾಲ ಸುರಿದು ನಂತರ ಹತ್ತು ಗಂಟೆಯವರೆಗೆ ತುಂತುರು ಬಂದು ನಿಧಾನವಾಗಿ ಮಳೆ ನಿಂತಿತು .

ವಡಗೇರಾ ತಾಲ್ಲೂಕಿನ ವ್ಯಾಪ್ತಿಯಲ್ಲಿ ಮಳೆ ಮಾಪನಾ ಕೇಂದ್ರದ ದಾಖಲೆ ಪ್ರಕಾರ ಸುಮಾರು 22 ಮೀ.ಮೀ ಮಳೆಯಾಗಿದೆ. ರೋಹಿಣಿ ಕಾರ್ತಿಯ ಮಳೆ ಒಂದೇ ಸಮನೆ ಪ್ರಶಾಂತವಾಗಿ ನಿಧಾನವಾಗಿ ಸುರಿದ ಕಾರಣ ರಸ್ತೆಗಳೆಲ್ಲಾ ಸ್ವಚ್ಛವಾಗಿವೆ ಹಾಗೆಯೆ ಚರಂಡಿಯಲ್ಲಿ ಇದ್ದ ತ್ಯಾಜ್ಯ ಮಳೆಯ ನೀರಿಗೆ ಹರಿದು ಹೋಗಿರುವುದರಿಂದ ಚರಂಡಿಗಳು ಸಹ ಸ್ವಚ್ಛವಾಗಿವೆ.

ಬೆಳಿಗ್ಗೆಯೆ ಆರಂಭವಾದ ಮಳೆಯಿಂದಾಗಿ ತರಕಾರಿ ವ್ಯಾಪರಸ್ಥರು, ಕಿರಾಣಿ ಅಂಗಡಿಯವರು ಹಾಗೂ ಇನ್ನೂ ಸಣ್ಣ ಪುಟ್ಟ ವ್ಯಾಪಾರಿಗಳು ವ್ಯಾಪಾರವಿಲ್ಲದೆ ಸುಮ್ಮನೆ ಮಳೆಯನ್ನು ನೋಡುತ್ತಾ ಕುಳಿತುಕೊಂಡ ದೃಶ್ಯ ಪಟ್ಟಣದಲ್ಲಿ ಕಂಡು ಬಂತು. ನಂತರ ಮಳೆ ನಿಂತ ಮೇಲೆ ವ್ಯಾಪರ ಆರಂಭವಾಯಿತು.

ಈಗಾಗಲೆ ಬಹಳಷ್ಟು ಜನ ರೈತರು ತಮ್ಮ ಜಮೀನುಗಳನ್ನು ಹದ ಮಾಡಿಕೊಂಡು ಹತ್ತಿ ಬೀಜವನ್ನು ಖರೀದಿಸಿ ಇಟ್ಟುಕೊಂಡಿದ್ದಾರೆ. ಇನ್ನೂ ಕೆಲವೆ ದಿನಗಳಲ್ಲಿ ಹತ್ತಿ ಬಿತ್ತನೆ ಆರಂಭ ಮಾಡುತ್ತೇವೆ ಎಂದು ರೈತರು ಹೇಳುತ್ತಾರೆ. ರೋಹಿಣಿ ಮಳೆಯು ರೈತರ ಮೊಗದಲ್ಲಿ ರೊನಕ್ನ್ನು (ಕಾಂತಿ) ಹೆಚ್ಚಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-30-672090266

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.