ಸೋಮವಾರ, ಜೂನ್ 21, 2021
28 °C

ವಡಗೇರಾ: ಸಂಗೊಳ್ಳಿ ರಾಯಣ್ಣ ಜಯಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಡಗೇರಾ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶನಿವಾರ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಜಯಂತಿ ಆಚರಿಸಲಾಯಿತು.

ಪಟ್ಟಣದ ಮುಖಂಡರಾದ ಬಸವರಾಜ ಸೊನ್ನದ, ಎಪಿಎಂಸಿ ಮಾಜಿ ಅಧ್ಯಕ್ಷ ದೇವಪ್ಪ ಕಡೆಚೂರ ಸಂಗೋಳ್ಳಿ ರಾಯಣ್ಣ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ಯುವ ಮುಖಂಡ ಫಕೀರ್ ಅಹ್ಮದ್ ಮರಡಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ಕಿತ್ತೂರು ಸಂಸ್ಥಾನದ ರಾಣಿ ಚನ್ನಮ್ಮನ ಬಲಗೈ ಬಂಟನಾಗಿ ಬ್ರಿಟಿಷರ ನಿದ್ದೆಗೆಡಿಸಿ ಅವರ ವಿರುದ್ಧ ಹೋರಾಡಿದ ವೀರ ಸೇನಾನಿ. ಸ್ವಾತಂತ್ರ್ಯದ ಸಲುವಾಗಿ ಹೋರಾಡಿ ಮಡಿದ ಕ್ರಾಂತಿವೀರರಾದ ಅವರ ಆದರ್ಶಗಳನ್ನು ಯುವಕರು ಪಾಲಿಸಬೇಕು ಎಂದರು.

ಬಸನಗೌಡ ಜಡಿ, ಶಿವರಾಜ್ ಬಾಗೂರು, ತಿಮ್ಮಣ್ಣ ಕಡೆಚೂರ, ಮಲ್ಲಣ್ಣ ನೀಲಹಳ್ಳಿ, ಫಯಾಜ್ ನಾಯ್ಕೋಡಿ, ಅಬ್ದುಲ್ ಚಿಗಾನೂರ, ದೇವು ಜಡಿ, ಗುರುನಾಥ್ ನಾಟೇಕರ್, ಭೀಮಣ್ಣ ಬೂದಿಹಾಳ, ಮಹಿಬೂಬ ಖುರೇಷಿ, ಶರಣು ಕುರಿ, ಹೊನ್ನಪ್ಪ ಹೊರಟುರು, ಮರಲಿಂಗ ಗೋನಾಲ, ಶಿವು ಗೋನಾಲ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.