ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಡಗೇರಾ: ಜಿಲ್ಲಾ ನ್ಯಾಯಾಧೀಶರಿಂದ ಸ್ಥಳ ಪರಿಶೀಲನೆ

Last Updated 22 ಜನವರಿ 2023, 14:03 IST
ಅಕ್ಷರ ಗಾತ್ರ

ಯಾದಗಿರಿ: ನ್ಯಾಯಾಲಯದ ಬಗ್ಗೆ ಪ್ರತಿಯೊಬ್ಬರಲ್ಲಿ ಗೌರವ ಭಾವನೆ ಇದೆ. ಸೂಕ್ತ ಸ್ಥಳವನ್ನು ಗುರುತಿಸಿ ಮುಂಬರುವ ದಿನಗಳಲ್ಲಿ ಇಲ್ಲಿ ನ್ಯಾಯಾಲಯ ಸ್ಥಾಪನೆಯಾಗುತ್ತದೆ ಎಂದು ಜಿಲ್ಲಾ ನ್ಯಾಯಾಧೀಶ ನಂಜುಂಡಯ್ಯ ಹೇಳಿದರು.

ವಡಗೇರಾ ಪಟ್ಟಣದಲ್ಲಿ ನೂತನ ತಾಲ್ಲೂಕು ನ್ಯಾಯಾಲಯ ಆರಂಭಿಸಲು ಸ್ಥಳಗಳನ್ನು ಪರಿಶೀಲಿಸಿದ ನಂತರ ಅವರು ಮಾತನಾಡಿದರು.

ಹೈಕೋರ್ಟ್‌ ಆದೇಶದ ಹಾಗೂ ನಿಯಮದ ಪ್ರಕಾರ ತಾಲ್ಲೂಕು ನ್ಯಾಯಾಲಯಕ್ಕಾಗಿ ಸ್ಥಳವನ್ನು ಪರಿಶೀಲಿಸಲು ಬಂದಿದ್ದೇನೆ. ಇದು ಪ್ರಾಥಮಿಕ ಹಂತ. ನಿಯಮದ ಪ್ರಕಾರ ತಾಲ್ಲೂಕು ನ್ಯಾಯಾಲಯ ಸ್ಥಾಪನೆ ಮಾಡಬೇಕಾದರೆ ಮೂರು ಎಕರೆ ಜಮೀನು ಬೇಕಾಗುತ್ತದೆ. ಅದನ್ನು ಗುರುತಿಸಿ ಅನುಮೋದನೆಗೆ ಕಳುಹಿಸಿದಾಗ ಸರ್ಕಾರದಿಂದ ಮಂಜೂರಾಗಿ ವಡಗೇರಾ ಪಟ್ಟಣದಲ್ಲಿ ತಾಲ್ಲೂಕು ನ್ಯಾಯಾಲಯ ಆರಂಭಿಸಬಹುದೆಂದು ತಿಳಿಸಿದರು.

ತಾಲ್ಲೂಕು ನ್ಯಾಯಾಲಯಕ್ಕಾಗಿ ಸೂಕ್ತ ಸ್ಥಳ ಗುರುತಿಸಿದರೆ ನನ್ನ ಸಹಾಯ ಸಹಕಾರ ಸಹಮತ ಇದೆ. ಮುಂಬರುವ ದಿನಗಳಲ್ಲಿ ವಡಗೇರಾದಲ್ಲಿ ತಾಲ್ಲೂಕು ನ್ಯಾಯಾಲಯ ಆರಂಭವಾಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.

ಹಳೇ ಮೈಸೂರು ಭಾಗಕ್ಕೆ ಹೋಲಿಕೆ ಮಾಡಿದರೆ ಉತ್ತರ ಕರ್ನಾಟಕದವರು ಎಷ್ಟೋ ವಾಸಿ. ಅವರಲ್ಲಿ ಹೋರಾಟ ಮನೋಭಾವನೆ ಇದೆ. ಹೋರಾಟದ ಮೂಲಕ ತಮ್ಮ ಹಕ್ಕುಗಳನ್ನು ಪಡೆಯುವಲ್ಲಿ ಉತ್ತರ ಕರ್ನಾಟಕದವರು ಮೊದಲಿಗರು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿ.ಪಂ ಮಾಜಿ ಸದಸ್ಯ ಸಿದ್ದಣ್ಣಗೌಡ ಕಾಡಂನೋರ್, ವೈದ್ಯ ಡಾ. ಸುಭಾಷ ಕರಣಿಗಿ, ತಾಲ್ಲೂಕು ನ್ಯಾಯಾಲಯದ ಅವಶ್ಯಕತೆ ಬಗ್ಗೆ ವಿವರವಾಗಿ ವಿವರಣೆ ನೀಡಿದರು.

ಈ ಸಂದರ್ಭದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಾಹಿಲ್ ಅಹ್ಮದ ಕುನ್ನಿಭಾವಿ, ಡಿಜಿಪಿ ಎಂ. ಕರಿಗೌಡ, ಫೋಕ್ಸೊ ಪಿಪಿ ಅನಂತರೆಡ್ಡಿ, ಲೋಕಾಯುಕ್ತ ಪಿಪಿ ಟಿ ಶಿವರಾಜ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ಮಾಲಿಪಾಟೀಲ, ಹಿರಿಯ ವಕೀಲರಾದ ಬಸವರಾಜ ಪಾಟೀಲ ಖ್ಯಾತನಾಳ, ಚನ್ನಬಸವರಾಜ ದಂಡಿಗಿಮಠ, ಗೋವಿಂದ, ತಹಶೀಲ್ದಾರ್ ಸುರೇಶ ಅಂಕಲಗಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ, ಪಿಡಿಒ ಮಲ್ಲಿಕಾರ್ಜುನ ಸಜ್ಜನಶೆಟ್ಟಿ, ತಾಲ್ಲೂಕು ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಕರಿಕಳ್ಳಿ, ಪ್ರಾಂಶುಪಾಲ ಸುರೇಶ ತಡಿಬಿಡಿ, ಭೀರಪ್ಪ ಸಂಕೀನ್, ಯಂಕಣ್ಣ ಬಸವಂತಪುರ, ಪರಶುರಾಮ ಕುರಕುಂದಾ, ಶರಣು ಕುರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT