ವಡಗೇರಾ: ತಾಲ್ಲೂಕಿನ ವ್ಯಾಪ್ತಿಯ ತುಮಕೂರು, ಅಗ್ನಿಹಾಳ, ರೋಟ್ನಡಗಿ, ಗುಂಡ್ಲೂರು, ಹಾಲಗೇರಾ, ಬೀರನಾಳ, ಬಬಲಾದ ಹುಲಕಲ್, ಹಾಲಗೇರಾ, ಗಡ್ಡೆಸೂಗುರು ಹಾಗೂ ಪಟ್ಟಣ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ತ್ಯಾಗ ಹಾಗೂ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಮುಸ್ಲಿಂ ಸಮುದಾಯದವರು ಆಚರಿಸಿದರು.

ಗುರುವಾರ ಬೆಳಿಗ್ಗೆ ಸುಮಾರು 9 ಗಂಟೆಗೆ ವಡಗೇರಾ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಹಿಂದುಗಡೆ ಇರುವ ಈದ್ಗಾ ಆವರಣದಲ್ಲಿ ಮೌಲ್ವಿ ಹಬ್ಬದ ನಮಾಜ್ ಅನ್ನು ಹಾಗೂ ಧರ್ಮ ಬೋಧನೆಯನ್ನು ಬೋಧಿಸಿದ ನಂತರ ಮುಸ್ಲಿಂ ಸಮುದಾಯದವರು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ನಂತರ ತಮ್ಮ ಆತ್ಮೀಯರನ್ನು ಹಾಗೂ ಗೆಳೆಯರನ್ನು ಮನೆಗೆ ಕರೆಸಿ ಸುರಕುಂಬಾ, ಸಿಹಿ ಭಜಿ ಹಾಗೂ ಇನ್ನಿತರ ಆಹಾರ ಪದಾರ್ಥಗಳನ್ನು ಸವಿದರು.

ಈ ಸಂದರ್ಭದಲ್ಲಿ ಮೌಲ್ವಿ ಆಫೀಜ್ ಹನಿಫ್ ಸಾಬ್,ಮಹ್ಮದ ಖುರೇಸಿ, ಮೈನುದ್ದೀನ್ ದೇವದುರ್ಗ, ವಕೀಲ ಚಾಂದ, ಬಾಷುಮಿಯ್ಯ ನಾಯಕೋಡಿ, ಅಬ್ದುಲ್ ಕರಿಂಸಾಬ, ಹುಸೇನ್ ಸಾಬ, ಅಬ್ದುಲ್ ಖತಾಲಿ, ಅಬ್ದುಲ್ ಚಿಗಾನೂರ, ಬಾಷಾ ಪಾನಶಾಪ್, ಉಸ್ಮನಬಾಷಾ ತಡಬಿಡಿ, ಅಜೀಮ್ ಸಾಬ, ಶಖಿಲ್ ಹೋಟಲ್, ಖಾಜಾಸಾಬ ಬೇಕರಿ, ನಯುಮ್ ಚನ್ನೂರು, ಅಜ್ಮೀರಬಾಷಾ ನೂರಬಾಯಿ, ಹಾಗೂ ಇನ್ನಿತರರು ಹಾಜರಿದ್ದರು. ಈದ್ಗಾ ಆವರಣದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ವಡಗೇರಾ ಪಿಎಸ್ಐ ಮಹೇಬೂಬ ಅಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-30-711207094

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.