ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಜಿಲ್ಲೆಯಾದ್ಯಂತ ವರಮಹಾಲಕ್ಷ್ಮಿ ವ್ರತಚಾರಣೆ

ಸುಖ, ಸಮೃದ್ಧಿಗಾಗಿ ಮಹಿಳೆಯರಿಂದ ವಿಶೇಷ ಪೂಜೆ, ಕೊರೊನಾ ನಿವಾರಣೆಗೆ ಪ್ರಾರ್ಥನೆ
Last Updated 31 ಜುಲೈ 2020, 16:25 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಾದ್ಯಂತ ವರಮಹಾಲಕ್ಷ್ಮಿಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ದೇವಿಯನ್ನು ಪ್ರತಿಷ್ಠಾಪಿಸಿ ವಿವಿಧ ಹೂ, ಸೀರೆಯಿಂದ ಅಲಂಕರಿಸಲಾಗಿತ್ತು.

ವಿವಿಧ ಹಣ್ಣು, ಹೋಳಿಗೆ,ಹಪ್ಪಳ, ಸಂಡಿಗೆ, ಬದನೆಕಾಯಿ, ಕೋಸಂಬರಿ ಪಲ್ಯೆನೈವೇದ್ಯವಾಗಿ ಇಡಲಾಗಿತ್ತು.ಲಕ್ಷ್ಮಿ ದೇವಿಯ ಬೆಳ್ಳಿಯ ಗಟ್ಟಿ ಇಟ್ಟು ಪೂಜೆ ಸಲ್ಲಿಸಲಾಯಿತು.

ಕೊರೊನಾ ಕಾರಣದಿಂದ ಬೇರೆ ಊರಿನ ಬಂಧು ಬಳಗವನ್ನು ಆಹ್ವಾನಿಸಿರಿರಲಿಲ್ಲ. ಅಕ್ಕಪಕ್ಕದ ಮನೆಯವರು ಸೇರಿ ವ್ರತಾಚರಣೆ ಮಾಡಿದ್ದಾರೆ. ಪೂಜೆ ವೇಳೆ ಕುಟುಂದವರು ಸೇರಿ ದೇವಿಯ ಸ್ತೋತ್ರ ಪಠಿಸಿದರು. ಕೆಲವರು ಐದು ಮಂದಿ ಮುತ್ತೈದೆಯರನ್ನು ಪೂಜೆಗೆ ಆಹ್ವಾನಿಸಿಉಡಿಯಕ್ಕಿ ತುಂಬಿಸಿ ಸಂಭ್ರಮಿಸಿದರು. ನಂತರ ಉಪವಾಸ ವ್ರತ ಬಿಟ್ಟು, ಸಿಹಿಯೂಟ ಮಾಡಿ ಮನೆಗೆ ತೆರಳಿದರು.

ಬೆಳ್ಳಿ, ಬಂಗಾರದ ವಸ್ತುಗಳಿಂದ ದೇವಿಗೆ ಅಲಂಕಾರ ಮಾಡಲಾಗಿತ್ತು. ಚಿಕ್ಕಮಕ್ಕಳು, ಮಹಿಳೆಯರು ಹೊಸ ಬಟ್ಟೆ ತೊಟ್ಟು ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು. ತಾಮ್ರದಕೊಡಕ್ಕೆ ನೀರು ಹಾಕಿ ಅದರ ಮೇಲೆ ಕಾಯಿ ಇಟ್ಟು ವರ ಮಹಾಲಕ್ಷ್ಮಿಗೆ ಹೂ, ಕುಂಕುಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡಿದರು.

‘ವರಮಹಾಲಕ್ಷ್ಮಿ ದೇವಿ ವರಗಳನ್ನು ದಯಪಾಲಿಸುವುದರಿಂದಮಹಿಳೆಯರು ತಮ್ಮಇಷ್ಟಾರ್ಥಿ ಸಿದ್ಧಿಗಾಗಿ ಬೇಡಿಕೊಳ್ಳುವುದು ಸಾಮಾನ್ಯ.ವರಮಹಾಲಕ್ಷ್ಮಿ ಹಬ್ಬದಂದು ವ್ರತ ಕೈಗೊಳ್ಳುವುದು ಅಷ್ಟ ಲಕ್ಷ್ಮಿಯರ ವ್ರತಕ್ಕೆ ಸಮ ಎಂಬ ನಂಬಿಕೆ ಈ ಮೊದಲಿನಿಂದಲೂ ಇದೆ’ ಎಂದು ಪರಮೇಶ ರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT