ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಏರುತ್ತಲೇ ಇದೆ ತರಕಾರಿ ದರ

ಚೌತಿ ಮುಗಿದರೂ ಇಳಿಕೆಯಾಗದ ಬೆಲೆ, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ
Last Updated 28 ಆಗಸ್ಟ್ 2020, 16:41 IST
ಅಕ್ಷರ ಗಾತ್ರ

ಯಾದಗಿರಿ: ಗಣೇಶ ಚೌತಿ ಮುಗಿದರೂ ತರಕಾರಿ ಬೆಲೆ ಇಳಿಕೆಯಾಗಿಲ್ಲ. ಇದರಿಂದ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಸೊಪ್ಪಗಳ ದರವೂ ಗಣನೀಯವಾಗಿ ಏರಿಕೆಯಾಗಿದ್ದು, ರಾಜಗಿರಿ, ಪುಂಡಿಪಲ್ಯೆ ₹ 10ಕ್ಕೆ ಒಂದು ಕಟ್ಟು ಮಾರಾಟವಾಗುತ್ತಿದೆ. ಇದಕ್ಕೂ ಮುಂಚೆ ₹ 5ಕ್ಕೆ ಒಂದರಂತೆ ಮಾರಾಟವಾಗುತ್ತಿತ್ತು.

ನಗರದ ಮಹಾತ್ಮಗಾಂಧಿ ಮಾರುಕಟ್ಟೆಯಲ್ಲಿ ಸೊಪ್ಪುಗಳೆ ಸಿಗುತ್ತಿಲ್ಲ. ನಗರದ ವಿವಿಧ ಮಾರುಕಟ್ಟೆಗಳಲ್ಲಿಯೂ ಸೊಪ್ಪುಗಳ ಅಭಾವ ಎದುರಾಗಿದೆ. ತರಕಾರಿ ದರದಂತೆ ಸೊಪ್ಪುಗಳ ಬೆಲೆಯೂ ಏರಿಕೆಯಾಗುತ್ತಿದೆ.

ಮೂರು ವಾರಗಳ ಹಿಂದೆ ₹5ಕ್ಕೆ ಮಾರಾಟವಾಗುತ್ತಿದ್ದ ಪುಂಡಿಪಲ್ಯೆ ಈಗ ₹10ಕ್ಕೆ ಒಂದು ಕಟ್ಟು ಬಿಕರಿಯಾಗುತ್ತಿದೆ. ಆದರಂತೆ ಮೆಂತ್ಯೆ ಸೊಪ್ಪು ಕೂಡ ₹20ರಿಂದ ₹30ಕ್ಕೆ ದರ ಜಿಗಿತ ಕಂಡಿದೆ. ಕೋತಂಬರಿ ಸೊಪ್ಪು ಒಂದು ಕಟ್ಟಿಗೆ ₹50ಕ್ಕೆ ಏರಿಕೆಯಾಗಿದೆ.

ಬದನೆಗೆ ಭಾರಿ ಡಿಮ್ಯಾಂಡ್‌: ಕಳೆದ ಒಂದು ತಿಂಗಳಿಂದಲೂ ಬದನೆಕಾಯಿಗೆ ಭಾರಿ ಬೇಡಿಕೆ ಬಂದಿದೆ. ಒಂದು ಕ್ಯಾನ್‌ 1,200ಕ್ಕೂ ಹೆಚ್ಚು ಮಾರಾಟವಾಗುತ್ತಿದೆ.ಇದರಿಂದ ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ.

ಸೊಪ್ಪುಗಳ ದರ: ‘ರಾಜಗಿರಿಸೊಪ್ಪು, ಪುಂಡಿಪಲ್ಯೆ ₹600ಕ್ಕೆ 100 ಕಟ್ಟುನಂತೆನಮಗೆ ನೀಡುತ್ತಿದ್ದಾರೆ. ಇದರಿಂದ ನಾವು ₹10ಕ್ಕೆ ಒಂದು ಕಟ್ಟು ಮಾರಾಟ ಮಾಡುತ್ತಿದ್ದೇವೆ. ಸೊಪ್ಪುಗಳು ಯಥೇಚ್ಛವಾಗಿ ಮಾರುಕಟ್ಟೆಗೆ ಬರುತ್ತಿಲ್ಲ’ ಎನ್ನುತ್ತಾರೆ ತರಕಾರಿ ವ್ಯಾಪಾರಿ ಮಹಮ್ಮದ್‌ ನವಾಜ್‌.

ಇನ್ನುಳಿದಂತೆಪಾಲಕ್₹10, ಮೆಂತ್ಯೆ₹30, ಸಬ್ಬಸಿಗಿ ₹10,ಕೋತಂಬರಿ ಒಂದು ಕಟ್ಟು ಕಳೆದ ವಾರ ₹30ಇತ್ತು. ಈ ವಾರ ₹50ಗೆ ಜಿಗಿದೆ.ಈರುಳ್ಳಿ ಸೊಪ್ಪು ಕೇಜಿ ₹60 ಇದೆ.ನುಗ್ಗೆಕಾಯಿದರ ಏರಿಕೆಯಾಗಿದೆ. ಕಳೆದ ವಾರ ₹80 ಕೇಜಿ ಇತ್ತು. ಈಗ ₹120ಕ್ಕೆ ತಲುಪಿದೆ.ಮೆಣಸಿನಕಾಯಿಕಳೆದ ವಾರ ₹60ಇದ್ದಿದ್ದು ₹80ಕ್ಕೆ ಏರಿಕೆಯಾಗಿದೆ. ಬಿಟ್ ರೂಟ್, ಮೂಲಂಗಿ ದರವೂ ಕಳೆದ ವಾರಕ್ಕಿಂತ ₹20 ಹೆಚ್ಚಳವಾಗಿದೆ. ಕಳೆದ ವಾರಬೀನ್ಸ್ ದರ ₹80ಇತ್ತು. ಈ ವಾರ ₹120ಗೆ ತಲುಪಿದೆ.

ಕೆಲ ತರಕಾರಿ ಬೆಲೆ ಏರಿಕೆಯಾಗುತ್ತಲೆಇದೆ. ಮಾರುಕಟ್ಟೆಗೆ ಹೆಚ್ಚಿನ ಆವಕ ಬರುತ್ತಿಲ್ಲ. ಒಂದು ಕ್ಯಾನ್‌ ಬದನೆಕಾಯಿ ₹1200ಕ್ಕೂ ಹೆಚ್ಚಾಗಿದೆ ಎನ್ನುತ್ತಾರೆ ವ್ಯಾಪಾರಿಚಂದಪ್ಪ ಬರ್ಚಿನಾಯಕ.

ತರಕಾರಿ ದರ ಹೆಚ್ಚಾದರೂಖರೀದಿಸಲೇಬೇಕಾಗಿದೆ. ಕಳೆದ 15 ದಿನಗಳಿಂದ ಬೆಲೆ ಏರಿಕೆಯಾಗುತ್ತಿದ್ದು, ಗ್ರಾಹಕರು ಕಂಗಾಲು ಆಗುವಂತೆ ಆಗಿದೆ ಎಂದು ಗ್ರಾಹಕರಾದದೇವೀಂದ್ರಮ್ಮ ಯಡ್ಡಳ್ಳಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT