ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗತ್ಯಕ್ಕಿಂತ ಹೆಚ್ಚು ಮಾರುಕಟ್ಟೆಗೆ ತರಕಾರಿ ಆವಕ, ಗ್ರಾಹಕರಿಗೆ ಖುಷಿ

Last Updated 11 ಏಪ್ರಿಲ್ 2021, 4:02 IST
ಅಕ್ಷರ ಗಾತ್ರ

ಯಾದಗಿರಿ: ನಗರದ ವಿವಿಧ ತರಕಾರಿ ಮಾರುಕಟ್ಟೆಗಳಲ್ಲಿ ತರಕಾರಿ ದರ ಅಗ್ಗವಾಗಿದೆ. ಸೊಪ್ಪುಗಳ ಬೆಲೆಯೂ ಇಳಿಕೆಯಾಗಿದೆ.

ನುಗ್ಗೆಕಾಯಿ ಕೆ.ಜಿಗೆ ₹40, ಶುಂಠಿ ₹50, ದೊಡ್ಡ ಗಾತ್ರದ ಒಂದು ನಿಂಬೆ ಹಣ್ಣು ₹5, ಬಳ್ಳುಳ್ಳಿ ₹60 ಕೆ.ಜಿ ಇದೆ. ಇನ್ನುಳಿದ ತರಕಾರಿಗಳ ದರ ಕಡಿಮೆ ಇದ್ದು, ಗ್ರಾಹಕರಿಗೆ ಖುಷಿ ನೀಡಿದೆ.

ಸ್ಥಳೀಯ ಮಟ್ಟದಲ್ಲಿ ಹೆಚ್ಚಿನ ತರಕಾರಿ ಲಭ್ಯವಿದ್ದು, ಇದರಿಂದ ಮಾರುಕಟ್ಟೆಗಳಿಗೆ ಆವಕ ಜಾಸ್ತಿಯಾಗಿದೆ. ಇದು ಮಾರುಕಟ್ಟೆಗಳಲ್ಲಿ ದರ ಇಳಿಕೆಗೆ ಕಾರಣವಾಗಿದೆ. ಟೊಮೆಟೊ, ಬದನೆಕಾಯಿ ಅತಿ ಕಡಿಮೆ ದರದಲ್ಲಿ ಸಿಗುತ್ತಿವೆ.

ಸೊಪ್ಪುಗಳ ದರ: ಪಾಲಕ್‌ ಸೊಪ್ಪು ₹5ಗೆ ಒಂದು ಕಟ್ಟು, ಪುದೀನಾ ₹10, ಕೊತ್ತಂಬರಿ ₹10, ಸಬ್ಬಸಗಿ ₹10, ರಾಜಗಿರಿ ಸೊಪ್ಪು ₹5, ಮೆಂತ್ಯೆ ₹10 ಕಟ್ಟು ಮಾರುಕಟ್ಟೆಯಲ್ಲಿ ಸಿಗುತ್ತಿದೆ.

ಹಣ್ಣುಗಳ ದರ: ಒಂದು ಸೇಬು ಹಣ್ಣು ದೊಡ್ಡ ಗಾತ್ರದ್ದು ₹20, ಸಣ್ಣ ಗಾತ್ರದ್ದು ₹15 ಇದೆ. ಒಂದು ಮೂಸಂಬಿ ₹10–15, ದಾಳಿಂಬೆ ಹಣ್ಣು ಕೆ.ಜಿಗೆ ₹150–180ರ ತನಕ ದರ ಇದೆ. ದ್ರಾಕ್ಷಿ ₹80 ಕೆ.ಜಿ ಇದೆ. ಬಾಳೆ ಹಣ್ಣು ಡಜನ್‌ ₹40, ಮಾವಿನ ಹಣ್ಣು ₹40ರಿಂದ 50 ಕೆ.ಜಿ. ಇದೆ. ಕಾಯಿ ₹60 ಕೆ.ಜಿ. ಇದೆ.

ತರಕಾರಿ ದರ (₹ ಕೆ.ಜಿಗಳಲ್ಲಿ)
ಟೊಮೆಟೊ;10-15
ಬದನೆಕಾಯಿ;20-25
ಬೆಂಡೆಕಾಯಿ;20-25
ದೊಣ್ಣೆಮೆಣಸಿನಕಾಯಿ;30;35
ಆಲೂಗಡ್ಡೆ;20-25
ಈರುಳ್ಳಿ;20-25
ಎಲೆಕೋಸು;20–25
ಹೂಕೋಸು;30-35
ಚವಳೆಕಾಯಿ;35–40
ಬೀನ್ಸ್; 55-60
ಗಜ್ಜರಿ;35-40
ಸೌತೆಕಾಯಿ;20-25
ಮೂಲಂಗಿ;30-35
ಮೆಣಸಿನಕಾಯಿ;30-35
ಸೋರೆಕಾಯಿ;10–15
ಬೀಟ್ ರೂಟ್;40-45
ಹೀರೆಕಾಯಿ;40-45
ಹಾಗಲಕಾಯಿ;25-30
ತೊಂಡೆಕಾಯಿ;35-40
ಅವರೆಕಾಯಿ;20–25

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT