ಮತದಾನ ಜಾಗೃತಿ: ವಸ್ತುಪ್ರದರ್ಶನ ವೀಕ್ಷಣೆ

ಬುಧವಾರ, ಏಪ್ರಿಲ್ 24, 2019
34 °C

ಮತದಾನ ಜಾಗೃತಿ: ವಸ್ತುಪ್ರದರ್ಶನ ವೀಕ್ಷಣೆ

Published:
Updated:
Prajavani

ಯಾದಗಿರಿ: ಲೋಕಸಭಾ ಚುನಾವಣೆ ಪ್ರಯುಕ್ತ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿಕಚೇರಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದೊಂದಿಗೆ ಏ. 10ರಿಂದ 12ರವರೆಗೆ ಏರ್ಪಡಿಸಿರುವ ಮತದಾನ ಜಾಗೃತಿ ಅಭಿಯಾನದ ವಸ್ತುಪ್ರದರ್ಶನವನ್ನು ಗುರುವಾರ ಚುನಾವಣಾ ವೀಕ್ಷಕರು ವೀಕ್ಷಿಸಿದರು.

‘ರಾಯಚೂರು ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕಿ ಎ.ಶೈಲಾ ಚುನಾವಣಾ ವೆಚ್ಚ ವೀಕ್ಷಕರಾದ ರೋಹಿತ್ ಆನಂದ್, ವಿ.ಕೆ.ಚಕ್ರವರ್ತಿ ವಸ್ತುಪ್ರದರ್ಶನವನ್ನು ವೀಕ್ಷಿಸಿದರು.

‘ವಸ್ತುಪ್ರದರ್ಶನದಲ್ಲಿ ಸಿ-ವಿಜಿಲ್ ಆಪ್, ಚುನಾವಣಾ ಆಪ್, ಸಹಾಯವಾಣಿ-1050, ಮತದಾನದ ದಿನ ಅಶಕ್ತರಿಗೆ ಮತ್ತು ಮಹಿಳೆಯರಿಗೆ ಮೊದಲ ಆದ್ಯತೆ ಕುರಿತ ಚಿತ್ರಸಮೇತ ಮಾಹಿತಿಗಳು, ಮತದಾನ ಜಾಗೃತಿಗಾಗಿ ಗಣ್ಯರು ನೀಡಿದ ಹೇಳಿಕೆಗಳು ಚೆನ್ನಾಗಿ ಮೂಡಿಬಂದಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಉಪ ವಿಭಾಗಾಧಿಕಾರಿ ಶಂಕರಗೌಡ ಸೋಮನಾಳ, ಜಂಟಿ ಕೃಷಿ ನಿರ್ದೇಶಕಿ. ಆರ್.ದೇವಿಕಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !