ವಡಗೇರಾ: ಕಳೆದ ಮೂರು ದಿನಗಳ ಹಿಂದೆ ಸುರಿದ ಆಲಿಕಲ್ಲು ಮಳೆಗೆ ವಡಗೇರಾ ತಾಲ್ಲೂಕಿನ ಚೆನ್ನೂರ.ಜೆ, ಗೊಂದೆನೂರ, ಐಕೂರು, ಕುರಿಹಾಳ ಹಾಗೂ ಇನ್ನಿತರ ಗ್ರಾಮಗಳ ರೈತರ ಸುಮಾರು 300 ಎಕರೆಗೂ ಅಧಿಕ ಭತ್ತ, ಜೋಳ, ಸಜ್ಜೆ, ಹತ್ತಿ ಬೆಳೆಗಳು ಹಾನಿಯಾಗಿದ್ದು, ಶುಕ್ರವಾರ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಅಧಿಕಾರಿಗಳೊಂದಿಗೆ ಬೆಳೆ ಹಾನಿಯಾದ ಜಮೀನುಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಅಕಾಲಿಕವಾಗಿ ಸುರಿದ ಆಲಿಕಲ್ಲು ಮಳೆಗೆ ಭತ್ತ ಇನ್ನಿತರ ಬೆಳೆಗಳು ಸಂಪೂರ್ಣ ನಾಶವಾಗಿವೆ. ಮುಂಗಾರು ಸಮಯದಲ್ಲಿ ಅತಿವೃಷ್ಟಿ ಪ್ರವಾಹದಿಂದ ಪ್ರತಿವರ್ಷ ನಮ್ಮ ಬೆಳೆ ನೀರಿನಲ್ಲಿ ಮುಳುಗಿ ಆರ್ಥಿಕ ನಷ್ಟ ಅನುಭವಿಸಿ ಸಾಲಕ್ಕೆ ಗುರಿಯಾಗಿದ್ದೇವೆ. ಹೀಗಾದರೇ ನಾವು ಬದುಕುವದು ಹೇಗೆ ಎಂದು ರೈತರು ಶಾಸಕರ ಮುಂದೆ ತಮ್ಮ ಅಳಲು ತೋಡಿಕೊಂಡರು.

‘ರೈತರ ಸಮಸ್ಯೆ ಆಲಿಸಿದ ಶಾಸಕ ತುನ್ನೂರು ಹಾನಿಯಾದ ಬೆಳೆಗಳ ಸಂಪೂರ್ಣ ವಿವರವನ್ನು ಜಿಲ್ಲಾಡಳಿತದಿಂದ ಪಡೆದು. ಸಚಿವರನ್ನು ಹಾಗೂ ಮುಖ್ಯಮಂತ್ರಿಗಳನ್ನು ಭೇಟಿಯಾಗಿ, ನಿಮಗೆ ಸರ್ಕಾರದಿಂದ ಪರಿಹಾರ ದೊರಕಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

ಸ್ಥಳದಲ್ಲಿದ್ದ ತಹಶೀಲ್ದಾರ್ ಮಂಗಳ. ಎಂ, ಕೃಷಿ ಅಧಿಕಾರಿ ಗಣಪತಿ ಅವರ ಜೊತೆ ಚರ್ಚಿಸಿದ ಶಾಸಕರು ವಡಗೇರಾ ತಾಲ್ಲೂಕಿನ ಬೇರೆ-ಬೇರೆ ಗ್ರಾಮಗಳಲ್ಲಿ ರೈತರ ಬೆಳೆ ನಾಶವಾಗಿರುವ ಸಮಗ್ರ ಮಾಹಿತಿ ಸಂಗ್ರಹಿಸಿ, ನನ್ನ ಗಮನಕ್ಕೆ ತನ್ನಿ ಎಂದು ಸೂಚಿಸಿದರು.

‘ನೂತನ ತಾಲ್ಲೂಕು ಕೇಂದ್ರವಾಗಿರುವ ವಡಗೇರಾ ಭಾಗದ ಜನರಿಗೆ ಅನುಕೂಲ ಮಾಡಿಕೊಡಲು ಯತ್ನಿಸುತ್ತಿದ್ದೇನೆ, ಬರುವ ದಿನಗಳಲ್ಲಿ ಹಂತ-ಹಂತವಾಗಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಶ್ರೀನಿವಾಸರಡ್ಡಿ ಪಾಟೀಲ್ ಚೆನ್ನೂರ, ಸಾಬಣ್ಣ ಗೊಂದೆನೂರ, ಅಶೋಕರಡ್ಡಿ ಕುರಿಹಾಳ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಚಮರಡ್ಡಿ, ನಿಂಗಣಗೌಡ ಚನ್ನೂರ, ನಜೀರ ಅಹ್ಮದ ತುಮಕೂರ, ಶರಣಗೌಡ ಬಲಕಲ, ಅಮೀನರಡ್ಡಿ ಕೊಂಕಲ, ಹೊನ್ನಪ್ಪ ದಾಳಿ, ಪಿಡ್ಡೆಪ್ಪ ನಾಯಕ ಗೊಂದೆನೂರ, ಶಂಕ್ರಪ್ಪ ಮರೆಟ್ಟಿ, ಭೀಮು ದೊರೆ, ಉಪ ತಹಶೀಲ್ದಾರ್ ಸಂಗಮೇಶ, ಕೃಷಿ ಅಧಿಕಾರಿ ಗಣಪತಿ, ಕಂದಾಯ ಅಧಿಕಾರಿ ಬಸಯ್ಯಸ್ವಾಮಿ, ಗ್ರಾಮ ಆಡಳಿತಧಿಕಾರಿ ಹಣಮಂತ, ರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.