ವಾಡಿ: ಬೇಸಿಗೆಯ ಕೆಂಡಕಾರುವ ಬಿಸಿಲು ಇಲ್ಲಿನ ಜನರ ಸಂಕಷ್ಟ ಹೆಚ್ಚಿಸುತ್ತಿದೆ. ಇದರ ಮಧ್ಯೆ ಪ್ರತಿ ಹಳ್ಳಿಗಳಲ್ಲಿ ನೂರಾರು ಜನರು ಕಡು ಬಿಸಿಲು ಲೆಕ್ಕಿಸದೇ ಬಸ್ಗಳಿಗಾಗಿ ಕಾದು ನಿಲ್ಲುತ್ತಿರುವುದು ದೃಶ್ಯ ಸಾಮಾನ್ಯವಾಗಿದೆ.

ಮದುವೆಗಳು ಹೆಚ್ಚಿರುವ ಕಾರಣ ಪ್ರತಿದಿನ ಓಡಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದು ಗೊತ್ತಿದ್ದರೂ ಅಗತ್ಯ ಬಸ್ ಬಿಡದೇ ಸಾರಿಗೆ ಇಲಾಖೆ ನಿರ್ಲಕ್ಷ ವಹಿಸುತ್ತಿದೆ.

ಯಾದಗಿರಿ–ಕಲಬುರಗಿ ನಡುವಿನ ರಾಷ್ಟ್ರೀಯ ಹೆದ್ದಾರಿ 150ರ ಮೇಲಿನ ಪ್ರತಿ ಹಳ್ಳಿಗಳ ಜನರು ಬಸ್ಗಾಗಿ ಕಾಯುತ್ತ ನಿಂತಿರುವುದು, ಬಸ್ ಬಾರದೇ ಇದ್ದಾಗ ಬೇಸತ್ತು ಮನೆಗೆ ಮರಳುವುದು ನಿತ್ಯದ ಸಂಗತಿಯಾಗುತ್ತಿದೆ. ಬಿಸಿಲಿನ ರುದ್ರಾವತಾರ ನಡುವೆ ಮಕ್ಕಳು, ವಯೋವೃದ್ಧರು ಬಸ್ಗಳಿಗೆ ‘ಕಾಯುವ ಶಿಕ್ಷೆ’ಗೆ ತುತ್ತಾಗುತ್ತಿದ್ದಾರೆ. ತಮ್ಮ ಸಮಸ್ಯೆಗಳತ್ತ ಗಮನಹರಿಸದ ಅಧಿಕಾರಿಗಳು, ಜನಪ್ರತಿನಿಧಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಾಡಿ, ನಾಲವಾರ, ಲಾಡ್ಲಾಪುರ, ಹಲಕರ್ಟಿ, ರಾವೂರು, ಮಾಲಗತ್ತಿ, ಶಹಾಬಾದ್ ಹೀಗೆ ಹೆದ್ದಾರಿ ಮೇಲಿನ ಗ್ರಾಮದ ಜನರು ತಾಸುಗಟ್ಟಲೆ ಬಸ್ಗಾಗಿ ಕಾಯುವುದು ಅನಿವಾರ್ಯವಾಗಿದೆ.

‘ನನ್ನ ಮಗಳ ಕಾಲೇಜು ದಾಖಲಾತಿ ಮಾಡಿಸಲು ಕಲಬುರಗಿ ಹೊರಟಿದ್ದೆ. ಕುಂಬಾರಹಳ್ಳಿಯಲ್ಲಿ ಸುಮಾರು 2 ಗಂಟೆಗೂ ಅಧಿಕ ಕಾಲ ನಿಂತು ಅನಿವಾರ್ಯವಾಗಿ ಸುಡುಬಿಸಿಲಲ್ಲೇ ಮಗಳನ್ನು ಕೂಡಿಸಿಕೊಂಡು ಬೈಕ್ ಮೇಲೆ ಕಲಬುರಗಿಗೆ ಹೋದೆ’ ಎಂದು ನಾಲವಾರ ನಿವಾಸಿ ಶರಣಪ್ಪ ಬೇಸರ ವ್ಯಕ್ತಪಡಿಸಿದರು.

ಬಸ್ ಹತ್ತಿಸಿಕೊಳ್ಳಲು ಸಂಕಟ: ತಾಸಿಗೊಮ್ಮೆ ಬರುವ ಬಸ್ಗಳು ಸಂಪೂರ್ಣ ಪ್ರಯಾಣಿಕರಿಂದ ಭರ್ತಿಯಾಗಿರುತ್ತದೆ. ಕೆಲವೊಮ್ಮೆ ಬಸ್ ನಿಲ್ಲಿಸದೇ ಮುಂದಕ್ಕೆ ಹೋಗುತ್ತಿವೆ ಎನ್ನುವುದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಕೂಡಲೇ ಅಗತ್ಯ ಬಸ್ಗಳ ಸೌಲಭ್ಯ ಒದಗಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-31-26782269

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.