ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ। ಕಾಲುವೆಗೆ ನೀರು; ಕೃಷಿ ಚಟುವಟಿಕೆ ಚುರುಕು

ಹಿಂಗಾರು ಹಂಗಾಮಿನ ಭತ್ತ ನಾಟಿ, ಹೊರ ರಾಜ್ಯಗಳಿಂದ ಆಗಮಿಸಿ ಕೂಲಿಕಾರರು
Last Updated 14 ಡಿಸೆಂಬರ್ 2022, 21:15 IST
ಅಕ್ಷರ ಗಾತ್ರ

ಯಾದಗಿರಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹಿಂಗಾರು ಹಂಗಾಮಿನ ಭತ್ತ ನಾಟಿ ಮಾಡುತ್ತಿದ್ದು, ದೇಶದ ವಿವಿಧ ರಾಜ್ಯಗಳಿಂದ ಕಾರ್ಮಿಕರನ್ನು ಕರೆ ತರಲಾಗಿದೆ.

ಕಾಲುವೆ ಜಾಲದಲ್ಲಿ ಈಗಾಗಲೇ ಭತ್ತದ ನಾರು ಮಾಡಿ ಬೆಳೆಸಿದ್ದು, ಈಗ ನಾಟಿ ಮಾಡಲಾಗುತ್ತದೆ. ಕಾಲುವೆಗೆ ನೀರು ಹರಿಸುತ್ತಿದ್ದರಿಂದ ಕೃಷಿ ಚಟುವಟಿಕೆಗಳು ವೇಗ ಪಡೆದುಕೊಂಡಿವೆ.

ಯಾದಗಿರಿ ಬಳಿಯ ಭೀಮಾ ಬ್ಯಾರೇಜ್ ಸುತ್ತಮುತ್ತಲಿನ ಜಮೀನುಗಳಲ್ಲಿ ರೈತರು ಭರದಿಂದ ಭತ್ತದ ನಾಟಿ ಮಾಡುತ್ತಿದ್ದಾರೆ. ಯಾದಗಿರಿ-ಶಹಾಪುರ ರಾಜ್ಯ ಹೆದ್ದಾರಿಯ ಗುರುಸುಣಿಗಿ ಕ್ರಾಸ್ ಸಮೀಪ ರೈತ ಭತ್ತ ನಾಟಿ ಮಾಡುತ್ತಿರುವ ದೃಶ್ಯ ಕಾಣ ಬರುತ್ತಿದೆ. ಇದರ ಜೊತೆಗೆ ಶಹಾಪುರ, ಸುರಪುರ ಮತ್ತಿತರ ಕಡೆ ಭತ್ತ ನಾಟಿ ಮಾಡಲಾಗುತ್ತಿದೆ.

ಡಿಸೆಂಬರ್ 12 ರಿಂದ ಡಿ.25ರ ವರೆಗೆ ಒಟ್ಟು 14 ದಿನ ಕಾಲುವೆಗೆ ನೀರು ಚಾಲೂ ಆಗಿರುತ್ತದೆ. ಡಿ.26 ರಿಂದ 2023ರ ಜ.4ರ ವರೆಗೆ ಒಟ್ಟು 10 ದಿನ ಕಾಲವೆಗೆ ನೀರು ಬಂದ್ ಆಗಿರುತ್ತದೆ. ಹೀಗಾಗಿ ಕಳೆದ ವಾರದಿಂದ ಕೃಷಿ ಚಟುವಟಿಕೆಗಳು ವೇಗ ಪಡೆದುಕೊಂಡಿದ್ದು, ಅಲ್ಲಲ್ಲಿ ನಾಟಿ ಮಾಡುವುದು ಕಂಡು ಬರುತ್ತಿದೆ.

ಕಾಲುವೆ ಚಾಲೂ ಒಟ್ಟು 69 ದಿನಗಳು ಆಗಿರುತ್ತದೆ. ಕಾಲುವೆಗೆ ಒಟ್ಟು 50 ದಿನಗಳ ನೀರು ಬಂದ್ ಆಗಿರುತ್ತದೆ.

ಹೊರ ರಾಜ್ಯಗಳಿಂದ ಕೂಲಿಕಾರರ ಆಗಮನ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ನಾಟಿ ಮಾಡಲು ವಿವಿಧ ಕಡೆಯಿಂದ ಕೂಲಿಕಾರರು ಆಗಮಿಸಿದ್ದಾರೆ. ಅದರಲ್ಲಿ ಪ್ರಮುಖವಾಗಿ ಪಶ್ವಿಮ ಬಂಗಾಳ, ಬಿಹಾರ, ಮಧ್ಯ ಪ್ರದೇಶ ಇನ್ನಿತರ ಕಡೆಯಿಂದ ಆಗಮಿಸಿದ್ದಾರೆ. ಗುತ್ತಿಗೆ ಮಾತಾಡಿಕೊಂಡಿದ್ದು, ನಾಟಿ ಮುಗಿದ ನಂತರ ತಮ್ಮ ಊರುಗಳಿಗೆ ತೆರಳುತ್ತಾರೆ.

ಭತ್ತ ನಾಟಿ ಮಾಡುವ ಸ್ಥಳದಲ್ಲಿಯೇ ಮಧ್ಯಾಹ್ನದ ಅಡುಗೆ ತಯಾರಿಸಿಕೊಂಡು ಭೋಜನ ಮಾಡುವುದು ಕಂಡು ಬರುತ್ತಿದೆ.

ಹೆಸರಿಗೆ ಮಾತ್ರ ನಿಷೇಧಿತ ಬೆಳೆ: ಕೃಷ್ಣಾ ಮೇಲ್ದಂಡೆ ಯೋಜನೆಯ ಬೆಳೆ ಪದ್ಧತಿ ಅನುಸಾರವಾಗಿ (ಹಿಂಗಾರು ಶೇ 35 ರಷ್ಟು, ದ್ವಿಋತು ಶೇ 15 ರಷ್ಟು) ಅಚ್ಚುಕಟ್ಟು ಪ್ರದೇಶದ ಶೇ 50 ರಷ್ಟು ಕ್ಷೇತ್ರಕ್ಕೆ ನೀರನ್ನು ಹಿಂಗಾರು ಹಂಗಾಮಿಗೆ ಲಘು ನೀರಾವರಿ ಬೆಳೆಗಳಿಗೆ ಮಾತ್ರ ಪೂರೈಸಲಾಗುತ್ತಿದೆ ಎಂದು ಐಸಿಸಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತಿದೆ.

ನಿಷೇಧಿತ ಬೆಳೆಗಳಾದ ಭತ್ತ, ಕಬ್ಬು, ಬಾಳೆ ಇತ್ಯಾದಿ ಬೆಳೆಯದಿರಲು ಹಾಗೂ ಲಘು ನೀರಾವರಿ ಬೆಳೆಗಳಾದ ಜೋಳ, ಮೆಕ್ಕೆ ಜೋಳ, ಗೋಧಿ, ಸೂರ್ಯಕಾಂತಿ, ಸಾಸಿವೆ, ಕಡಲೆ, ಶೇಂಗಾ, ಕುಸುಬಿ, ಸಜ್ಜೆ, ಸೊಪ್ಪು, ತರಕಾರಿ ಇತ್ಯಾದಿಗಳನ್ನು ಮಾತ್ರ ಬೆಳೆಯಲು ಅನುಮತಿ ಇದೆ ಎಂದು ತಿಳಿಸಲಾಗುತ್ತಿದೆ. ಆದರೆ, ಭತ್ತ ನಾಟಿ ಮಾಡುವುದು ಮಾತ್ರ ತಪ್ಪಿಲ್ಲ.

***

ಕಾಲುವೆಗೆ ನೀರು, ಚಾಲೂ ಬಂದ್‌ ವಿವರ

ತಿಂಗಳು;ಚಾಲೂ; ಬಂದ್‌

ಜನವರಿ; 5 ರಿಂದ ಜ.18; ಜ.19 ರಿಂದ ಜ. 28

ಜನವರಿ; 29 ರಿಂದ ಫೆ.11; ಫೆ.12 ರಿಂದ ಫೆ.21

ಫೆಬ್ರುವರಿ; 22 ರಿಂದ ಮಾ 7;ಮಾ. 8 ರಿಂದ ಮಾ.17

ಮಾರ್ಚ್; 18 ರಿಂದ ಮಾ.30; ಮಾ 31 ರಿಂದ ಏ.9

***

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಈಗ ಹಿಂಗಾರು ಹಂಗಾಮಿನ ಭತ್ತ ನಾಟಿ ನಡೆಯುತ್ತಿದ್ದು, ದೇಶದ ವಿವಿಧ ರಾಜ್ಯಗಳ ಕೂಲಿ ಕಾರ್ಮಿಕರು ನಾಟಿ ಮಾಡಲು ಬಂದಿದ್ದಾರೆ. ಅವರನ್ನು ಕರೆ ತರುವ ತಂಡವೇ ಇದೆ
ಮಲ್ಲಿಕಾರ್ಜುನ ಸತ್ಯಂಪೇಟ, ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಉಪಾಧ್ಯಕ್ಷ

***

ಭತ್ತ ನಾಟಿ ಮಾಡಲು ವಿವಿಧ ಕಡೆಯಿಂದ ನಮ್ಮ ಕುಟುಂಬದವರು ಬಂದಿದ್ದೇವೆ. ಒಬ್ಬ ಕೂಲಿಯಾಳುಗೆ ಇತಿಂಷ್ಟು ಎಂದು ನಿಗದಿ ಪಡಿಸಲಾಗಿದೆ
ರಣದೀಪ್‌, ಕೂಲಿಕಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT