ಸೋಮವಾರ, ಸೆಪ್ಟೆಂಬರ್ 20, 2021
29 °C
ಶ್ರಾವಣ ಮಾಸದಲ್ಲೂ ಏರಿಕೆಯಾಗದ ತರಕಾರಿ ದರ, ಗ್ರಾಹಕರಿಗೆ ಖುಷಿ

ಯಾದಗಿರಿ: ವಾರದ ಮಾರುಕಟ್ಟೆ ನೋಟ; ಟೊಮೆಟೊ ಅಗ್ಗ, ಸೊಪ್ಪುಗಳ ದರವೂ ಸ್ಥಿರ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರದ ವಿವಿಧ ಮಾರುಕಟ್ಟೆಯಲ್ಲಿ ತರಕಾರಿ ದರಗಳು ಸ್ಥಿರವಾಗಿದ್ದು, ಟೊಮೆಟೊ ಬೆಲೆ ಮಾತ್ರ ಅಗ್ಗವಾಗಿದೆ.

ಪ‍್ರತಿ ವರ್ಷ ಶ್ರಾವಣ ಮಾಸದಲ್ಲಿ ತರಕಾರಿ ದರ ಹೆಚ್ಚಳವಾಗುತ್ತಿತ್ತು. ಆದರೆ, ಈ ಬಾರಿ ಮಾತ್ರ ಮಾರುಕಟ್ಟೆಯಲ್ಲಿ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿವೆ.

ಸೋರೆಕಾಯಿ ಕೆ.ಜಿ. ₹25–30, ಆಲೂಗಡ್ಡೆ ₹25-30, ಈರುಳ್ಳಿ ₹ 30–35, ಬೆಂಡೆಕಾಯಿ ₹35–40, ಎಲೆಕೋಸು ₹30–35, ಮೂಲಂಗಿ ₹40-35 ಕೆಜಿಗೆ ಸಿಗುತ್ತಿದೆ. ಈ ಎಲ್ಲ ತರಕಾರಿ ₹40ಕ್ಕಿಂತ ಹೆಚ್ಚಿಲ್ಲ.

ಬದನೆಕಾಯಿ ₹55–60, ದೊಣ್ಣೆಮೆಣಸಿನಕಾಯಿ ₹40–50, ಹೂಕೋಸು ₹60–50, ಚವಳೆಕಾಯಿ ₹40–35, ಬೀನ್ಸ್ ₹ 70–60, ಗಜ್ಜರಿ ₹70-80, ಸೌತೆಕಾಯಿ ₹40–50, ಮೆಣಸಿನಕಾಯಿ ₹60-55, ಬಿಟ್‌ರೂಟ್ ₹60-55 ಕೆ.ಜಿ.ಗೆ ₹40ರಿಂದ 80 ರ ತನಕ ದರ ಇದೆ.

ಹಣ್ಣುಗಳ ದರ: ಕಳೆದ ವಾರದಂತೆ ಈ ವಾರವೂ ಹಣ್ಣುಗಳ ಬೆಲೆಯಲ್ಲಿ ಹೆಚ್ಚಿನ ವ್ಯಾತ್ಯಾಸವಾಗಿಲ್ಲ. ಸಣ್ಣ ಗಾತ್ರದ ಒಂದು ಸೇಬು ₹10, ಮಧ್ಯಮ ಗಾತ್ರ ₹15, ದೊಡ್ಡ ಗಾತ್ರದ ₹20 ದರ ಇದೆ. ಬಾಳೆಹಣ್ಣು ಡಜನ್‌ಗೆ ಸಣ್ಣ ಗಾತ್ರದ್ದು ₹30, ಮಧ್ಯಮ ಗಾತ್ರ ₹40, ದೊಡ್ಡ ಗಾತ್ರ ₹50 ದರ ಇದೆ. ಪೇರಲ ₹40 ಕೆ.ಜಿ. ಇದೆ. ಮೊಸಂಬಿ ₹10–15, ದಾಳಿಂಬೆ ₹10-15 ದರ ಇದೆ. ದ್ರಾಕ್ಷಿ ಕೆ.ಜಿ.ಗೆ ₹200 ದರ ಇದೆ.

ಸೊಪ್ಪುಗಳ ದರ: ಮೆಂತೆ ಸೊಪ್ಪು ದೊಡ್ಡ ಗಾತ್ರದು ₹20–25, ಪಾಲಕ್‌ ಸೊಪ್ಪು ಒಂದು ಕಟ್ಟು ₹5, ಪುಂಡಿಪಲ್ಯೆ ಒಂದು ಕಟ್ಟು ₹5, ರಾಜಗಿರಿ ಒಂದು ಕಟ್ಟು ₹5, ಸಬ್ಬಸಿಗಿ ಒಂದು ಕಟ್ಟು ₹10, ಕೋತಂಬರಿ ಸೊಪ್ಪು ಒಂದು ಕಟ್ಟು ₹20–25 ದೊಡ್ಡ ಗಾತ್ರದು, ಪುದೀನಾ ಒಂದು ಕಟ್ಟು ₹20 ದರ ಕಳೆದ ವಾರ ಇದ್ದಂತೆ ಇದೆ.

ತರಕಾರಿ ದರ (ಪ್ರತಿ ಕೆ.ಜಿಗೆ ₹ಗಳಲ್ಲಿ)
ಟೊಮೆಟೊ
; 15-20
ಬದನೆಕಾಯಿ; 55–60
ಬೆಂಡೆಕಾಯಿ; 35–40
ದೊಣ್ಣೆಮೆಣಸಿನಕಾಯಿ; 40–50
ಆಲೂಗಡ್ಡೆ; 25-30
ಈರುಳ್ಳಿ; 30–35
ಎಲೆಕೋಸು; 30–35
ಹೂಕೋಸು; 60–50
ಚವಳೆಕಾಯಿ; 40–35
ಬೀನ್ಸ್; 70–60
ಗಜ್ಜರಿ; 70-80
ಸೌತೆಕಾಯಿ; 40–50
ಮೂಲಂಗಿ; 40-35
ಮೆಣಸಿನಕಾಯಿ; 60-55
ಸೋರೆಕಾಯಿ; 25–30
ಬಿಟ್‌ರೂಟ್; 60-55
ಹೀರೆಕಾಯಿ; 55-60
ಹಾಗಲಕಾಯಿ; 50-55
ತೊಂಡೆಕಾಯಿ; 35-40
ಅವರೆಕಾಯಿ; 50–45

*** 

ತರಕಾರಿ ದರದಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ಸೊಪ್ಪುಗಳು ಕಡಿಮೆ ಬೆಲೆಗೆ ಸಿಗುತ್ತಿವೆ. ಹಳ್ಳಿಗಳಿಂದ ತರಕಾರಿ ಆವಕ ಚೆನ್ನಾಗಿದೆ.
-ಮೆಹಬೂಬ್‌, ವ್ಯಾಪಾರಿ

***

ನಗರದ ವಿವಿಧ ಮಾರುಕಟ್ಟೆಗಳಲ್ಲಿ ತರಕಾರಿ ಬೆಲೆ ಸ್ಥಿರವಾಗಿದ್ದು, ಇದು ಗ್ರಾಹಕರಿಗೆ ಖುಷಿ ಕೊಡುವ ವಿಚಾರವಾಗಿದೆ.
-ಜಾವೀದ್‌, ಗ್ರಾಹಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.