ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಧಿಸುವ ಛಲ ಇರಲಿ: ವಿದ್ಯಾರ್ಥಿಗಳಿಗೆ ವೇಣುಗೋಪಾಲ್ ಸಲಹೆ

Last Updated 28 ನವೆಂಬರ್ 2021, 14:29 IST
ಅಕ್ಷರ ಗಾತ್ರ

ಯಾದಗಿರಿ: ವಿದ್ಯಾರ್ಥಿ ಜೀವನದಲ್ಲಿ ವೈಯಕ್ತಿಕ ಒತ್ತಡಗಳು ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರದಿರಲಿ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕಲಿಯಬೇಕಾಗಿರುವುದು ವಿದ್ಯೆಯೇ ಹೊರತು, ಬೇರೆನೂ ಅಲ್ಲ ಎಂದು ಶ್ರೀರಾಮಕೃಷ್ಣ ಆಶ್ರಮದ ಸಂಚಾಲಕ ವೇಣುಗೋಪಾಲ್ ಹೇಳಿದರು.

ನಗರದ ರಾಚೋಟಿ ವೀರಣ್ಣ ವಿದ್ಯಾ ಸಂಸ್ಥೆಯಲ್ಲಿ ಪ್ರಸಕ್ತ ಸಾಲಿನ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯು ವಿದ್ಯಾರ್ಥಿಗಳಿಂದ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ನಿಮ್ಮ ಮುಂದಿನ ಭವಿಷ್ಯದ ಮಾರ್ಗವನ್ನು ಮೊದಲೇ ನಿರ್ಧರಿಸಿರಬೇಕು. ಅಂದಾಗ ಮಾತ್ರ ಮುಂದಿನ ಜೀವನ ಉಜ್ವಲವಾಗಿರುತ್ತದೆ. ಸಮಯದ ಪರಿಪಾಲನೆ ಅನುಸರಿಸುತ್ತ, ಉತ್ತಮ ಗುಣಗಳನ್ನು ರೂಢಿಸಿಕೊಳ್ಳಬೇಕು. ಮೊದಲು ಗುರಿ ಸ್ಪಷ್ಟವಿರಬೇಕು. ಸಾಧಿಸುವ ಛಲ ಮತ್ತು ಮುಟ್ಟಬೇಕಾದ ಗುರಿ ನಿಮ್ಮಲ್ಲಿದ್ದರೆ ನಿಮ್ಮ ಯಶಸ್ಸು ಇತಿಹಾಸವಾಗುತ್ತದೆ ಎಂದು ತಿಳಿಸಿದರು.

ಸಂಸ್ಥೆಯ ಪ್ರಾಂಶುಪಾಲ ಸುರೇಶ ಹವಲ್ದಾರ್‌ ಮಾತನಾಡಿ, ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ ಎಂಬಂತೆ ನಿಮ್ಮ ನಡೆ, ನುಡಿ, ಸಂಸ್ಕಾರ ನೀವು ಕಲಿಯುತ್ತಿರುವ ವಿದ್ಯೆ ಮತ್ತು ಕುಟುಂಬದ ಪರಿಸರವನ್ನು ಬಿಂಬಿಸುತ್ತದೆ. ಛಲ ಬಿಡದೆ ಸಾಧಿಸುವ ಸಾಧಕರು ನಿವಾಗಬೇಕೆಂದು ಹೇಳಿದರು.

ಎಸ್.ವಿ.ಡಿ ಕಾಲೇಜ್ ಆಫ್‌ ಫಾರ್ಮಸಿಯ ಪ್ರಾಂಶುಪಾಲ ಯಲ್ಲಪ್ಪ ಮಹಾರಾಜ ಹುಂಡೇಕರ್, ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಸಮಯ ಮೀಸಲಿರಿಸಿ ಉತ್ತಮ ಜ್ಞಾನ ಪಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಸಂಸ್ಥೆಯ ಮತ್ತೊರ್ವ ಪ್ರಾಂಶುಪಾಲ ವೆಂಕಟ ಸುಬ್ರಹ್ಮಣ್ಯಂ ಮಾತನಾಡಿ, ಸತತವಾದ ಅಧ್ಯಯನ ಉತ್ತುಂಗಕ್ಕೆರಲು ಸಾಧ್ಯವಾಗುತ್ತದೆ ಎಂದು ನುಡಿದರು.

ಆರ್.ವಿ.ವಿದ್ಯಾ ಸಂಸ್ಥೆಯ ಅಧ್ಯಕ್ಷೆ ಕಮಲಾ ಎನ್.ದೇವರಕಲ್ ಮಾತನಾಡಿ, ವಿದ್ಯಾರ್ಥಿಗಳು ದೇಶಕ್ಕೆ ಉತ್ತಮ ನಾಗರಿಕನಾಗಿ, ಪ್ರಜೆಯಾಗಿ ಹೊರಹೊಮ್ಮಬೇಕು. ಅಂದಾಗ ಮಾತ್ರ ನಮ್ಮ ಪರಿಶ್ರಮ ಸಾರ್ಥವಾಗುತ್ತದೆ. ಉನ್ನತ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಕೊಂಡಾಗ ಶ್ರೇಷ್ಠ ವ್ಯಕ್ತಿಗಳಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಈ ವೇಳೆ ಸಂಸ್ಥೆಯ ಖಜಾಂಚಿ ಸುರೇಶ ನೀಲಂಗಿ, ಉಪನ್ಯಾಸಕರು ಇದ್ದರು. ಸುನಿಲ್ ಸ್ವಾಗತಿಸಿದರೆ, ರಕ್ಷಿತಾ ವಂದಿಸಿದರು. ಅಕ್ಷತಾ ಮತ್ತು ಸಂಜನಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT