ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಟುಂಬ ನಿರ್ವಹಿಸುವ ಮಹಿಳೆ ದೇಶವಾಳಬಲ್ಲಳು’

Last Updated 20 ಮಾರ್ಚ್ 2023, 6:17 IST
ಅಕ್ಷರ ಗಾತ್ರ

ಗುರುಮಠಕಲ್: ‘ವಿಭಿನ್ನ ಅಭಿರುಚಿ, ವ್ಯಕ್ತಿತ್ವ ಹಾಗೂ ಕಾರ್ಯಕ್ಷೇತ್ರದಲ್ಲಿರುವ ಸದಸ್ಯರನ್ನೊಳಗೊಂಡ ಕುಟುಂಬವನ್ನು ಸರಿಯಾಗಿ ನಿರ್ವಹಿಸಬಲ್ಲ ಮಹಿಳೆ ದೇಶದ ಆಡಳಿತವನ್ನೂ ಸುಸೂತ್ರವಾಗಿ ನಿರ್ವಹಿಸಬಲ್ಲಳು’ ಎಂದು ಮುಖ್ಯಶಿಕ್ಷಕಿ ಮಂಜುಳಾ ಕೆ. ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘ ಹಾಗೂ ತಾಲ್ಲೂಕಿನ ವೃಂಧ ಸಂಘಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾನತೆಯನ್ನು ನಾವಾಗಿ ಕಲ್ಪಿಸಿಕೊಳ್ಳಬೇಕಿದೆ, ಮಹಿಳೆಯರು ಅವಶ್ಯಕ ಸಮಯದಲ್ಲಿ ಶಸ್ತ್ರಗಳನ್ನು ಹಿಡಿದು ದೇಶದ ರಕ್ಷಣೆಗೂ, ರಾಜ್ಯದ ಉಳಿವಿಗೂ ಹೋರಾಟ ಮಾಡಿದ್ದನ್ನು ನಮ್ಮ ಇತಿಹಾಸದಲ್ಲಿ ಕಾಣಬಹುದು. ವೇದಕಾಲದಲ್ಲಿ ಮೈತ್ರೇಯಿ, ಗಾರ್ಗಿಯಂತವರು, 12ನೇ ಶತಮಾನದಲ್ಲಿ ಅಕ್ಕ ಮಹಾದೇವಿ, ಮುಕ್ತಾಯಕ್ಕನಂತವರು ಸಮಾಜದಲ್ಲಿ ತಮ್ಮ ಸ್ವಯಂ ಕೃಷಿಯಿಂದಲೇ ಶ್ರೇಷ್ಠ ಸ್ಥಾನ ಪಡೆದಿದ್ದರು ಎಂದು ಹೇಳಿದರು.

ಇಂದಿಗೂ ಅವಿಭಕ್ತ ಕುಟುಂಬ ಗಳನ್ನು ನೋಡಿದರೆ ಯಜಮಾನಿಕೆ ಮಹಿಳೆಯರದ್ದಾಗಿರುತ್ತದೆ. ಅಲ್ಲಲ್ಲಿ ಪುರುಷರ ಯಜಮಾನಿಕೆಯಿದ್ದರೂ ಸಹ ಇಡೀ ಕುಟುಂಬವನ್ನು ಒಂದಾಗಿ ಉಳಿಸಿಕೊಳ್ಳುವ ಶಕ್ತಿ ಪುರುಷರಿಗಿಂತ ಸ್ತ್ರೀಯಲ್ಲೇ ಹೆಚ್ಚು ಎಂದು ವಿವಿರಿಸಿದರು.

ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷಕುಮಾರ ನಿರೇಟಿ, ಶಿಕ್ಷಕಿ ಮಧುಮತಿ ಮಾತನಾಡಿದರು, ಖಾಸಾಮಠದ ಶಾಂತವಿರ ಗುರು ಮುರುಘರಾಜೇಮದ್ರ ಶ್ರೀಗಳು ಆಶೀರ್ವಚನ ನೀಡಿದರು.

ಸರ್ಕಾರಿ ನೌಕರರಾದ ಸಿಡಿಪಿಒ ಕಚೇರಿಯ ಮೇಲ್ವಿಚಾರಕಿ ಶರಣಮ್ಮ ಸಜ್ಜನ, ಸಮುದಾಯ ಆಸ್ಪತ್ರೆಯ ಸುರಕ್ಷತಾಧಿಕಾರಿ ದೇವಿಂದ್ರಮ್ಮ,ಶಿಕ್ಷಕಿ ಮಧುಮತಿ ಸಂಘೆ, ಪಿಡಿಒ ರಾಧಿಕಾ, ಪೊಲೀಸ್ ಇಲಾಖೆಯ ಪಿ.ಸಿ.ಶಿವಶರಣಮ್ಮ, ಕಂದಾಯ ಇಲಾಖೆಯ ಶಾರದಾ ಕಾಕಲವಾರ, ಅವರನ್ನು ಸನ್ಮಾನಿಸಲಾಯಿತು.

ಪುರಸಭೆ ಅಧ್ಯಕ್ಷ ಪಾಪಣ್ಣ ಮನ್ನೆ, ಉಪಾಧ್ಯಕ್ಷೆ ಭೀಮಮ್ಮ ಮುಕುಡಿ, ಮುಖ್ಯಾಧಿಕಾರಿ ಭಾರತಿ ಸಿ.ದಂಡೋತಿ, ತಾಲ್ಲೂಕು ಪಂಚಾಯಿತಿ ಸಹಾಯಕ ಯೋಜನಾಧಿಕಾರಿ ಭಾರತಿ ಸಜ್ಜನ, ಸಿಡಿಪಿಒ ವನಜಾಕ್ಷಿ ದಿಗ್ಗಾವಿ, ವೈದ್ಯಾಧಿಕಾರಿ ಡಾ.ಪ್ರಿಯಾಂಕ ಹೊಸಮನಿ, ಉಪನ್ಯಾಸಕ ಪದ್ಮಮ್ಮ ಕನ್ನಡೆ, ಮುಖ್ಯಶಿಕ್ಷಕಿಯರಾದ ಗುರುದೇವಿ, ಹೇಮಲತಾ ಶೆಟ್ಟಿ, ಉಷಾ, ಪಾರ್ವತಮ್ಮ, ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿಜಯಲಕ್ಷ್ಮೀ ನೆಲ್ಲೋಗಿ, ರಾದಾ ಸಾಕಾ, ಗಾಯತ್ರಿ ನಾಯ್ಕಿನ್, ಕುಮದ್ವತಿ, ಭಾರತಿ ಸೋಪೆಗಾರ, ಭಾರತಿ ಹಾಗೂ ಸಂಘದ ಪದಾಧಿಕಾರಿಗಳು
ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT