ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ಆನ್‌ಲೈನ್‌ ವ್ಯವಹಾರ: ₹17 ಲಕ್ಷ ವಂಚನೆ

35 ಅರ್ಜಿಗಳ ₹10 ಲಕ್ಷ ಮಾತ್ರ ಹಿಂದುರಿಗಿದ ಹಣ, ಜಿಲ್ಲಾ ಕೇಂದ್ರದಲ್ಲೇ ಹೆಚ್ಚು ಪ್ರಕರಣ
Last Updated 3 ಮೇ 2022, 5:05 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ನಾಲ್ಕು ತಿಂಗಳ ಅವಧಿಯಲ್ಲಿ ಸೈಬರ್‌, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್‌ ಠಾಣೆಯಲ್ಲಿ (ಸಿಇಎನ್) ದಾಖಲಾಗಿದ್ದ ಪ್ರಕರಣಗಳ ಪೈಕಿ ಕೆಲವು ಮುಕ್ತಿ ಪಡೆದಿದ್ದರೆ, ಇನ್ನೂ ಕೆಲವು ಬಗೆಹರಿದಿಲ್ಲ.

‘ಇತ್ತೀಚೆಗೆ ಆನ್‌ಲೈನ್‌ನಲ್ಲಿ ವ್ಯವಹಾರ ಹೆಚ್ಚುತ್ತಿದ್ದು, ಇದರ ಜೊತೆಗೆ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಆನ್‌ಲೈನ್‌ನಲ್ಲಿ ವ್ಯವಹಾರ ಮಾಡುವಾಗ ಯಾವುದೋ ಲಿಂಕ್‌ ಕ್ಲಿಕ್ಕಿಸಿ ವಂಚನೆಗೆ ಒಳಗಾಗಬಾರದು’ ಎಂದು ಪೊಲೀಸರು ಹೇಳುತ್ತಾರೆ.

ಹಣ ಮೊರೆ ಹೋದಪ್ರಕರಣಕ್ಕೆ ಸಂಬಂಧಿಸಿದಂತೆ2022ರ ಜನವರಿಯಿಂದ ಏಪ್ರಿಲ್‌ ತಿಂಗಳವರೆಗೆ ಎನ್‌ಸಿಸಿಆರ್‌ಪಿ ಪೊರ್ಟಲ್‌ನಲ್ಲಿ 31 ಅರ್ಜಿಗಳು ಸಲ್ಲಿಕೆಯಾಗಿದ್ದರೆ, 4 ಅರ್ಜಿಗಳು ನೇರವಾಗಿ ಸಲ್ಲಿಕೆಯಾಗಿವೆ. ಒಟ್ಟು ₹17,34,610 ವಂಚನೆಯಾಗಿದೆ.

ಯಾವ ಅರ್ಜಿ ಎಷ್ಟು?: ಯುಪಿಐ ವಂಚನೆ, ಇಂಟರ್‌ನೆಟ್‌ ಬ್ಯಾಂಕಿಂಗ್‌, ಒಟಿಪಿ ಹಂಚಿಕೆ, ಡೆಬಿಟ್‌ ಕಾರ್ಡ್‌, ತಪ್ಪು ಫೋನ್ ಪಾವತಿ, ಕೋರಿಯರ್‌ ಕಡೆಯಿಂದ ಕರೆ ಮಾಡಿ ನಂಬಿಸಿ ವಂಚನೆ, ಗ್ಯಾಸ್‌ ಏಜೆನ್ಸಿ, ಸಾಲ ಕೊಡಿಸುವುದಾಗ ವಂಚನೆ, ಎಸ್‌ಬಿಐ ಯುನೋ ಆ್ಯಪ್ ಅವಧಿ ಮುಗಿದಿದೆ ಎಂದು ಲಿಂಕ್‌ ಕಳುಹಿಸಿ ಮಾಹಿತಿ ಪಡೆದು ಮೋಸ ಮಾಡಿದ್ದು, ಗೂಗಲ್‌ ಕ್ರೋಮ್‌ ಸ್ಕ್ರಾಚ್‌ ಕಾರ್ಡ್‌, ಇನ್ಟಾಗ್ರಾಂ ಆ್ಯಪ್‌, ಬ್ಯಾಂಕ್ ಖಾತೆ ಅವಧಿ ಮುಗಿದಿದೆ ಎಂದು ಕರೆ ಮಾಡಿ ವಂಚನೆ ಹೀಗೆ ಅಂತರ್ಜಾಲ ಮೂಲಕ ಮಾಹಿತಿ ಪಡೆದು ಮೋಸ ಮಾಡಿರುವ ಪ್ರಕರಣಗಳು ದಾಖಲಾಗಿವೆ.

ಜಿಲ್ಲಾ ಕೇಂದ್ರದಲ್ಲೇ ಹೆಚ್ಚು ಪ್ರಕರಣಗಳು: ಯಾದಗಿರಿಯಲ್ಲಿ ಆನ್‌ಲೈನ್‌ ವಂಚನೆ ಪ್ರಕರಣಗಳು ಹೆಚ್ಚು ದಾಖಲಾಗಿವೆ. 13 ಪ್ರಕರಣಗಳು ನಗರದಲ್ಲೇ ನಮೂದಾಗಿವೆ. ಉಳಿದಂತೆ ಕೆಂಭಾವಿ, ಸುರಪುರ, ಶಹಾಪುರ, ಕೋಡೆಕಲ್‌, ಯಾಡಿಯಾಪುರ, ಕ್ಯಾತನಾಳ, ದೋರನಹಳ್ಳಿ, ಹೊಸಕೇರ, ಕನ್ಯಾಕೊಳ್ಳೂರ, ಸೈದಾಪುರ, ಶಿರವಾಳ, ಹುಣಸಗಿ ತಾಂಡಾ, ಬಮ್ಮನಳ್ಳಿ, ಭೀಮರಾಯನಗುಡಿ, ವರ್ಕನಳ್ಳಿ, ಹೊಸಳ್ಳಿ, ರುಕ್ಮಾಪುರ, ಹಂಚಿನಾಳ, ಬೆಂಡೆಬೆಂಬಳಿ ಗ್ರಾಮಗಳಲ್ಲಿ ಮೋಸ ಹೋದ ಪ್ರಕರಣಗಳು ದಾಖಲಾಗಿವೆ.

ಹಣ ಹಿಂದುರುಗಿಸಿದ ಪ್ರಕರಣಗಳು: ಕೆಂಭಾವಿ ನಿವಾಸಿಯೊಬ್ಬರಿಗೆ ಎಸ್‌ಬಿಐ ಯುನೋ ಆ್ಯಪ್ ಅವಧಿ ಮುಗಿದಿದೆ ಎಂದು ಲಿಂಕ್‌ ಕಳುಹಿಸಿ ₹7,12,975 ಹಣ ದೋಚಿದ್ದು, ₹5,97,966 ಹಿಂದುರುಗಿಸಲಾಗಿದೆ. ₹90, 000 ಹಣ ಪ್ಲಿಪ್‌ಕಾರ್ಟ್‌ನಿಂದ ಮರಳಿ ಬರುವುದು ಬಾಕಿ ಇದೆ.

ಯಾದಗಿರಿ ನಿವಾಸಿಯೊಬ್ಬರು ತಪ್ಪಿ ಫೋನ್‌ ಪೇ ಮಾಡಿದ್ದು, ಮರಳಿ ₹10,000 ಸಾವಿರ ಹಿಂದಿರುಗಿಸಲಾಗಿದೆ. ಶಹಾಪುರ ನಿವಾಸಿಯೊಬ್ಬರಿಗೆ ಬ್ಯಾಂಕ್ ಖಾತೆ ಅವಧಿ ಮುಗಿದಿದೆ ಎಂದು ಕರೆ ಮಾಡಿ ವಂಚನೆ ಮಾಡಿದ್ದು, ₹23,7396 ಹಣ ಅರ್ಜಿದಾರರಿಗೆ ಹಿಂದಿರುಗಿಸಲಾಗಿದೆ. ಒಟ್ಟಾರೆ ₹10,01,862 ಹಣ ಹಿಂದುರುಗಿಸಲಾಗಿದೆ.

ಮೋಸ ಹೋದವರು ಏನು ಮಾಡಬೇಕು?: ಜಿಲ್ಲೆಯಲ್ಲಿ ನಾಲ್ಕು ತಿಂಗಳಲ್ಲಿ ಕೇವಲ 35 ಪ್ರಕರಣಗಳು ಮಾತ್ರ ಬೆಳಕಿಗೆ ಬಂದಿವೆ. ಬೆಳಕಿಗೆ ಬಾರದೆ ಎಷ್ಟೊ ಪ್ರಕರಣಗಳು ಮುಚ್ಚಿ ಹೋಗಿವೆ. ಹೀಗಾಗಿಆನ್‌ಲೈನ್‌ ಹಣಕಾಸು ವ್ಯವಹಾರದಲ್ಲಿ ಮೋಸಹೋದವರು ತಕ್ಷಣವೇ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (ಎನ್‌ಸಿಸಿಆರ್‌ಪಿ) ಗೆ ದೂರು ದಾಖಲು ಮಾಡಬಹುದು ಅಥವಾ ಹತ್ತಿರದ ಪೊಲೀಸ್‌ ಠಾಣೆಗಾಗಲಿ ದೂರು ನೀಡಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸುತ್ತಾರೆ.

*

ಆನ್‌ಲೈನ್‌ ವ್ಯವಹಾರ ಮಾಡುವವರು ಮೋಸ ಹೋದ ತಕ್ಷಣ 1930 ಸಂಖ್ಯೆಗೆ ಕರೆ ಮಾಡಿ ದೂರು ದಾಖಲು ಮಾಡಬಹುದು. ಎನ್‌ಸಿಸಿಆರ್‌ ಪೋರ್ಟಲ್‌ನಲ್ಲಿ ಕೇಸ್‌ ದಾಖಲಿಸಬಹುದು. ವಿಳಂಬ ಮಾಡಿದರೆ ವಂಚಕರು ಹಣ ಡ್ರಾ ಮಾಡಿಕೊಳ್ಳುತ್ತಾರೆ
-ಡಾ.ಸಿ.ಬಿ.ವೇದಮೂರ್ತಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT