ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಮತ್ತೆ 14 ಜನರಿಗೆ ಕೋವಿಡ್‌–19

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 970ಕ್ಕೆ ಏರಿಕೆ
Last Updated 3 ಜುಲೈ 2020, 16:55 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಶುಕ್ರವಾರಮತ್ತೆ7 ವರ್ಷದ ಬಾಲಕ ಸೇರಿ 14 ಜನರಿಗೆ ಕೋವಿಡ್‌ ಪತ್ತೆಯಾಗಿದೆ.ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 970ಕ್ಕೆ ಏರಿಕೆಯಾಗಿದೆ.

ಹುಣಸಗಿ ತಾಲ್ಲೂಕಿನ ಬ್ಯಾಲದಗಿಡ ತಾಂಡಾದ 90 ವರ್ಷದ ಪುರುಷ, 19 ವರ್ಷದ ಯುವತಿ, ಯಾದಗಿರಿ ತಾಲ್ಲೂಕಿನ ಅಚ್ಚೋಲಾ ಗ್ರಾಮದ 25 ವರ್ಷದ ಪುರುಷ, 22 ವರ್ಷದ ಮಹಿಳೆ, ಅಬ್ಬೆತುಮಕೂರ ಗ್ರಾಮದ 35 ವರ್ಷದ ಪುರುಷ, 70 ವರ್ಷದ ಪುರುಷ, ಗುರುಮಠಕಲ್ ತಾಲ್ಲೂಕಿನ ಅನಪುರ ಗ್ರಾಮದ 32 ವರ್ಷದ ಪುರುಷ,40 ವರ್ಷದ ಪುರುಷ, 28 ವರ್ಷದ ಮಹಿಳೆ, ಶಹಾಪುರ ತಾಲ್ಲೂಕಿನ ಕರಣಗಿ ಗ್ರಾಮದ 7 ವರ್ಷದ ಬಾಲಕ, 60 ವರ್ಷದ ಪುರುಷ, ಸುರಪುರ ತಾಲ್ಲೂಕಿನ ದಿವಳಗುಡ್ಡದ 37 ವರ್ಷದ ಮಹಿಳೆ (ಪಿ-18403), 19 ವರ್ಷದ ಯುವಕ (ಪಿ-18404), ಸುರಪುರ ಬಸ್ ಡಿಪೋದ 44 ವರ್ಷದ ಪುರುಷನಿಗೆ (ಪಿ-18405) ಕೊರೊನಾ ಸೋಂಕು ತಗುಲಿದೆ.

ಬ್ಯಾಲದಗಿಡ ತಾಂಡಾದ ವೃದ್ಧ ಮತ್ತು ಯುವತಿಯು ಪಿ-11,265ರ ಸಂಪರ್ಕದ ಹಿನ್ನೆಲೆ ಹೊಂದಿದ್ದಾರೆ.

ದಿವಳಗುಡ್ಡದ ವ್ಯಕ್ತಿಗಳು ಪಿ–10,659ರ ಸಂಪರ್ಕದ ಹಿನ್ನೆಲೆ ಹೊಂದಿದ್ದಾರೆ. ಸುರಪುರ ಬಸ್ ಡಿಪೋದ ವ್ಯಕ್ತಿ ಪಿ–10,660ರ ಸಂಪರ್ಕ ಹೊಂದಿದ್ದಾರೆ. ಅಚ್ಚೋಲಾ ಮತ್ತು ಅಬ್ಬೆತುಮಕೂರ ಗ್ರಾಮದ ವ್ಯಕ್ತಿಗಳ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಉಳಿದ 5 ಜನ ತೆಲಂಗಾಣದ ಹೈದರಾಬಾದ್ ಹಾಗೂ ಗುಜರಾತ್ ರಾಜ್ಯದಿಂದ ಬಂದಿದ್ದಾರೆ.

855 ಜನ ಗುಣಮುಖ: ಜಿಲ್ಲೆನಲ್ಲಿ ಕೋವಿಡ್-19 ದೃಢಪಟ್ಟ 970 ವ್ಯಕ್ತಿಗಳ ಪೈಕಿ ಶುಕ್ರವಾರ ಮತ್ತೆ ಒಬ್ಬರು ಗುಣಮುಖರಾಗಿದ್ದಾರೆ.ಜುಲೈ 3ರವರೆಗೆ 855 ಜನ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಉಳಿದ 114 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ 1,852 ಜನ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ 3,145 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ.

ಶುಕ್ರವಾರದ 156 ನೆಗೆಟಿವ್ ವರದಿ ಸೇರಿ ಈವರೆಗೆ 24,573 ಮಾದರಿಗಳ ವರದಿ ನೆಗೆಟಿವ್ ಬಂದಿವೆ. ಹೊಸದಾಗಿ ಕಳುಹಿಸಲಾದ 249 ಮಾದರಿಗಳು ಸೇರಿದಂತೆ 1,046 ಮಾದರಿಗಳ ವರದಿ ಬರಬೇಕಿದೆ ಎಂದುಹೆಚ್ಚುವರಿಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT