ಯಾದಗಿರಿ: ವಡಗೇರಾ ತಾಲ್ಲೂಕಿನ ಕಂದಳ್ಳಿ ಗ್ರಾಮ ಸಮೀಪದ ಭೀಮಾ ನದಿಯ ಬ್ರಿಡ್ಜ್ ಕಂ ಬ್ಯಾರೇಜ್ನ ಎರಡೂ ಬದಿಯಲ್ಲಿ ಸುಮಾರು 1 ಕಿ.ಮೀ. ರಸ್ತೆ ತೀರ ಹದಗೆಟ್ಟಿದ್ದು, ತಕ್ಷಣವೇ ದುರಸ್ತಿ ಮಾಡಬೇಕು ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಕಂದಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್ನ ಎರಡು ಬದಿಯ ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಹರಸಾಹಸ ಮಾಡುವಂತಾಗಿದೆ. ಯಾದಗಿರಿ, ವಡಗೇರಾ, ಗುರುಮಠಕಲ್, ಸೈದಾಪುರದ ಜನರು ಇದೇ ಮಾರ್ಗದಲ್ಲಿ ಪ್ರಯಾಣಿಸುತ್ತಾರೆ ಎಂದು ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಶ್ರೀಧರ ಸಾಹುಕಾರ ಹೇಳಿದ್ದಾರೆ.

ಭೀಮಾ ನದಿ ಪ್ರವಾಹದ ವೇಳೆ ಅಧಿಕಾರಿಗಳು ಬ್ಯಾರೇಜ್ನ ಗೇಟ್ಗಳನ್ನು ತೆರೆಯಲಿಲ್ಲ. ಇದರಿಂದ ಉಕ್ಕೇರಿದ ಪ್ರವಾಹವು ಬ್ಯಾರೇಜ್ನ ಎರಡೂ ಬದಿಯಲ್ಲಿ ಒಂದು ವಾರಕ್ಕೂ ಹೆಚ್ಚು ನೀರು ಹರಿಯಿತು. ಇದರಿಂದ ರಸ್ತೆಯು ಕೊಚ್ಚಿಕೊಂಡು ಹೋಗಿದ್ದು, ಪ್ರಯಾಣಕ್ಕೆ ತೀವ್ರ ಅಡ್ಡಿಯಾಗುತ್ತಿದೆ ಎಂದಿದ್ದಾರೆ.

ನೆರೆ ಹಾವಳಿ ಕಡಿಮೆಯಾಗಿ ಹಲವರು ವಾರಗಳು ಕಳೆದಿವೆ. ರಸ್ತೆ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತಿಲ್ಲ. ಕಂದಳ್ಳಿ, ವಡಗೇರಿ, ಬಿಳ್ಳಾರ, ಹಿರೆನೂರ, ಮಾಚನೂರು, ಬೆಂಡೆಬೆಂಬಳ್ಳಿ, ಕೋನಳ್ಳಿ, ತುಮಕೂರು, ಗೋನಾಳ ಸೇರಿದಂತೆ ಸುಮಾರು 30ಕ್ಕೂ ಗ್ರಾಮಗಳ ಜನರಿಗೆ ತೊಂದರೆಯಾಗಿದೆ ಎಂದು ಹೇಳಿದ್ದಾರೆ.

ರಸ್ತೆ ಸಂಪರ್ಕ ಕಡಿತವಾಗುವ ಮೊದಲು 12 ಕಿ.ಮೀ. ಕ್ರಮಿಸಿ ಸೈದಾಪುರಕ್ಕೆ ತಲುಪುತ್ತಿದ್ದರು. ಈಗ 60 ಕಿ.ಮೀ. ಸುತ್ತಿ ಬಳಸಿ ಯಾದಗಿರಿಗೆ ಬಂದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು, ವರ್ತಕರು, ಉದ್ಯೋಗಸ್ಥರು, ಆಸ್ಪತ್ರೆ ತೆರಳುವ ರೋಗಿಗಳು ಪರದಾಡುವಂತೆ ಆಗಿದೆ ಎಂದಿದ್ದಾರೆ.

ಬ್ಯಾರೇಜ್ನ ಎರಡು ಬದಿಯಲ್ಲಿ ಹಾಳಾಗಿರುವ ರಸ್ತೆಯನ್ನು ತಕ್ಷಣವೇ ದುರಸ್ತಿ ಮಾಡಬೇಕು. ವಿಳಂಬ ಮಾಡಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಕಂದಳ್ಳಿ ಗ್ರಾಮದ ಮುಖಂಡರಾದ ಬಸವಂತರಾಯ ಗೌಡ, ವೆಂಕಟರೆಡ್ಡಿ ಮಾಲಿ ಪಾಟೀಲ, ಶಂಕರ್ ಸೋನರ್, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರಾದ ಮಂಜುನಾಥ ಗುತ್ತೇದಾರ, ಸಿ. ಮಲ್ಲು ಕೋಲಿವಾಡ, ವಿಕಾಸ್ ಚವ್ಹಾಣ, ಸಾಬರೆಡ್ಡಿ ನಾಯಕ, ಸುನಿಲ್ ಕಡೇಚೂರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.