ಯಾದಗಿರಿ: ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 35 ಕುರಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

ತಾಲ್ಲೂಕಿನ ಬಂದಳ್ಳಿ ಗ್ರಾಮದ ಸಿದ್ದಪ್ಪ ಮಾಳಪ್ಪ ಅವರಿಗೆ ಸೇರಿದ 25 ಹಾಗೂ ಈಶಪ್ಪ ಗುಂಜಲಪ್ಪ ಅವರಿಗೆ ಸೇರಿದ 10 ಕುರಿಗಳು ಕುರಿಗಳು ಕಳುವಾಗಿವೆ.

ಈಶಪ್ಪ ಅವರು ಹೊಲದಲ್ಲಿನ ಶೆಡ್ನಲ್ಲಿ ಕುರಿಗಳನ್ನು ಇರಿಸಿದ್ದರು. ರಾತ್ರಿ ವೇಳೆ ಶೆಡ್ಗೆ ನುಗ್ಗಿದ ಕಳ್ಳರು ₹ 2.50 ಲಕ್ಷ ಮೌಲ್ಯದ 25 ಕುರಿಗಳನ್ನು ಕದ್ದೊಯ್ದಿದ್ದಾರೆ. ಇದೇ ಮಾದರಿಯಲ್ಲಿ ಈಶಪ್ಪ ಅವರಿಗೆ ಸೇರಿದ ₹ 1.20 ಲಕ್ಷ ಮೌಲ್ಯದ ಕುರಿಗಳನ್ನು ಕಳವು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ ಕುರಿಗಳ ಕಳವು ಹೆಚ್ಚಾಗುತ್ತಿದೆ. ಇದರಿಂದ ಕುರಿಗಾಹಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಕುರಿ ಕಳ್ಳರನ್ನು ಹಿಡಿದು ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡಬೇಕು’ ಎಂದು ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-30-977086

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.