ಗುರುವಾರ , ಅಕ್ಟೋಬರ್ 17, 2019
24 °C
ಕಣ್ವ ಮಠದಲ್ಲಿ ಶುಕ್ರವಾರ ವಿಪ್ರರ ಸಭೆ, ರಾಮಮೂರ್ತಿ ನೇಮಕಕ್ಕೆ ವಿರೋಧ

ಕಣ್ವಮಠಕ್ಕೆ ಇಬ್ಬರ ಉತ್ತರಾಧಿಕಾರಿಗಳ ಹೆಸರು ಸೂಚನೆ

Published:
Updated:

ಯಾದಗಿರಿ: ಕಕ್ಕೇರಾ ಸಮೀಪದ ಹುಣಸಿಹೊಳೆ ಕಣ್ವ ಮಠದಲ್ಲಿ ಶುಕ್ರವಾರ ವಿಪ್ರರ ಸಭೆ ನಡೆದಿದ್ದು, ಮಠದ ಉತ್ತರಾಧಿಕಾರಿ ಸ್ಥಾನಕ್ಕೆ ಹೊಸಪೇಟೆ–ಮುಂಡರಗಿಯ ರಾಮಚಾರ್ಯ ಮತ್ತು ಯಲಹಂಕ ಮೂಲದ ರವೀಂದ್ರ ಆಚಾರ್ಯ ಇಳಕಲ್ ಅವರ ಹೆಸರನ್ನು ಸುರಪುರ ಸಂಸ್ಥಾನಕ್ಕೆ ಕಳುಹಿಸಲಾಗಿದೆ.

ಇದರ ಮೂಲಕ ರಾಯಚೂರು ಜಿಲ್ಲೆಯ ಮಸ್ಕಿ ಸಮೀಪದ ಬುದ್ದನ್ನಿ ಮಠದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಸಿರಗುಪ್ಪದ ರಾಮಮೂರ್ತಿ ಅವರ ನೇಮಕಕ್ಕೆ ವಿರೋಧ ವ್ಯಕ್ತವಾಗಿದೆ. ಅವರ ಹೆಸರನ್ನು ಕೈ ಬಿಡಲಾಗಿದೆ.

ಸುರಪುರ ಸಂಸ್ಥಾನದ ನಾಯಕರು ಕಣ್ವ ಮಠದ ಮಾರ್ಗದರ್ಶಕರಾಗಿದ್ದು ಅವರ ಸಲಹೆಯಂತೆ ಮುನ್ನಡೆಯಲು ತೀರ್ಮಾನಿಸಲಾಯಿತು. ಸುರಪುರ, ಸಿಂಧನೂರು, ಗಂಗಾವತಿ, ಲಿಂಗಸುಗೂಸೂರು ಸೇರಿದಂತೆ ವಿವಿಧ ಜಿಲ್ಲೆಗಳ ವಿಪ್ರರು ಭಾಗವಹಿಸಿದ್ದರು

Post Comments (+)