ಶನಿವಾರ, ಜುಲೈ 24, 2021
23 °C
ಕೋವಿಡ್‌ ಗುಣಮುಖರ ಸಂಖ್ಯೆ 218ಕ್ಕೆ ಏರಿಕೆ, ಒಂದೇ 99 ಜನ ಆಸ್ಪತ್ರೆಯಿಂದ ಬಿಡುಗಡೆ

ಯಾದಗಿರಿ: ಮತ್ತೆ 66 ಜನರಿಗೆ ಕೋವಿಡ್‌

ಪ್ರಜಾವಾಣಿ ವಾರ್ತ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಗೆ ಕೊರೊನಾ ಸೋಂಕು ಕಾಲಿಟ್ಟು ಜೂನ್‌ 12ಕ್ಕೆ ಒಂದು ತಿಂಗಳು ಕಳೆದಿದ್ದು, 735 ಜನರಿಗೆ ಕೋವಿಡ್‌ ದೃಢಪಟ್ಟಿದೆ. ಗುರುವಾರ ಮತ್ತೆ 66 ಜನರಲ್ಲಿ ಸೋಂಕು ಪತ್ತೆಯಾಗಿದೆ. ಜೊತೆಗೆ ಗುಣಮುಖರ ಸಂಖ್ಯೆಯೂ 218ಕ್ಕೆ ಏರಿಕೆಯಾಗಿದ್ದು, ಗುರುವಾರ ಒಂದೇ ದಿನ 99 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 

ಗುರುವಾರ ಸೋಂಕು ದೃಢಪಟ್ಟ ಪ್ರಕರಣಗಳಲ್ಲಿ 10 ವರ್ಷದೊಳಗಿನ 10 ಮಕ್ಕಳು ಸೇರಿದ್ದಾರೆ. 66 ಜನರಲ್ಲಿ 37 ಮಹಿಳೆಯರು, 29 ಪುರುಷರಿದ್ದಾರೆ. ಪ್ರಕರಣ ಸಂಖ್ಯೆ ಪಿ-6111, ಪಿ-6112ರ ವ್ಯಕ್ತಿಗಳ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಉಳಿದ 64 ಜನ ಸೋಂಕಿತರು ಮಹಾರಾಷ್ಟ್ರದ ಮುಂಬೈಯಿಂದ ಜಿಲ್ಲೆಗೆ ಹಿಂದಿರುಗಿದವರಾಗಿದ್ದಾರೆ.

ಗುರುಮಠಕಲ್ ತಾಲ್ಲೂಕಿನ ತೊಟ್ಲೂರು ಗ್ರಾಮದ 17 ವರ್ಷದ ಯುವಕ, ಯಲಸತ್ತಿ ಗ್ರಾಮದ 32 ವರ್ಷದ ಪುರುಷ, 38 ವರ್ಷದ ಮಹಿಳೆ, ಯಲಸತ್ತಿ ಗ್ರಾಮದ 65 ವರ್ಷದ ಮಹಿಳೆ, 30 ವರ್ಷದ ಮಹಿಳೆ, ವಡವಟಿ ಗ್ರಾಮದ 7 ವರ್ಷದ ಬಾಲಕಿ, 10 ವರ್ಷದ ಬಾಲಕ, 9 ವರ್ಷದ ಬಾಲಕಿ, 35 ವರ್ಷದ ಪುರುಷ, 5 ವರ್ಷದ ಬಾಲಕಿ, ಅಜಲಾಪುರ ಗ್ರಾಮದ 25 ವರ್ಷದ ಪುರುಷ, ಟಿ.ದೊಡ್ಡಿಯ 6 ವರ್ಷದ ಬಾಲಕಿ,  24 ವರ್ಷದ ಮಹಿಳೆ, ಇಡ್ಲೂರು ಗ್ರಾಮದ 24 ವರ್ಷದ ಮಹಿಳೆ, 7 ವರ್ಷದ ಬಾಲಕ, ಸಂಕ್ಲಾಪುರದ 38 ವರ್ಷದ ಮಹಿಳೆ,  ಜೈಗ್ರಾಮದ 42 ವರ್ಷದ ಮಹಿಳೆ, ಯಾದಗಿರಿ ತಾಲ್ಲೂಕಿನ ಭೀಮನಗರದ 20 ವರ್ಷದ ಯುವ, 15 ವರ್ಷದ ಯುವತಿ, ಮುದ್ನಾಳ ತಾಂಡಾದ 50 ವರ್ಷದ ಮಹಿಳೆ ಸೇರಿದಂತೆ 66 ಜನರಿಗೆ ಸೋಂಕು ದೃಢಪಟ್ಟಿದೆ.

ಸೋಂಕಿತರ ಬಿಡುಗಡೆಯೂ ಹೆಚ್ಚು

ಗುಜರಾತ್‌ನಿಂದ ಬಂದ ದಂಪತಿಗೆ ಜಿಲ್ಲೆಯಲ್ಲಿ ಮೇ 12ರಂದು ಕೋವಿಡ್‌ ದೃಢಪಟ್ಟಿತ್ತು. ಅಂದಿನಿಂದ ಇಲ್ಲಿಯವರೆಗೆ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಪಕ್ಕದ ಕಲಬುರ್ಗಿ ಜಿಲ್ಲೆಯಲ್ಲಿ 3 ತಿಂಗಳಲ್ಲಿ 796 ಪ್ರಕರಗಳು ಪತ್ತೆಯಾಗಿವೆ. ಆದರೆ, ಯಾದಗಿರಿ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ 735 ಜನರಿಗೆ ದೃಢಪಟ್ಟಿದೆ. ಆದರೆ, ದಿನ ಕಳೆದಂತೆ ಆಸ್ಪತ್ರೆಯಿಂದ ಬಿಡುಗಡೆಯಾಗುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದು ಜಿಲ್ಲೆಯ ಜನರಿಗೆ ಆಶಾ ಭಾವನೆಯಾಗಿದೆ. 2 ವರ್ಷದ ಮಗು ಸೇರಿದಂತೆ 60 ವರ್ಷದ ವೃದ್ಧರವರೆಗೂ ಗುಣಮುಖರಾಗುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು