ಕೆಂಭಾವಿ: ‘ಡಾ.ಬಾಬಾ ಸಾಹೇಬ ಅಂಬೇಡ್ಕರ್ ಎಂದರೆ ಕೇವಲ ಆಡಂಬರದ ಆಚರಣೆಯಲ್ಲ. ಅವರು ಜ್ಞಾನದ ಸಾಗರ’ ಎಂದು ಡಿಎಸ್ಎಸ್ ಜಿಲ್ಲಾ ಸಂಚಾಲಕ ಶ್ರೀನಿವಾಸ ನಾಯಕ ಪ್ಯಾಪ್ಲಿ ಹೇಳಿದರು.

ಸಮೀಪದ ಮಾಲಗತ್ತಿ ಗ್ರಾಮದಲ್ಲಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ 135ನೇ ಜಯಂತ್ಯುತ್ಸವದ ನಿಮಿತ್ತ ಆಯೋಜಿಸಲಾಗಿದ್ದ ‘ಮಹಾನಾಯಕ ಪ್ರೀಮಿಯರ್ ಲೀಗ್-2’ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಂದಿ ಶಿಕ್ಷಣ ಸಂಸ್ಥೆಯ ಡಿ.ಸಿ.ಪಾಟೀಲ ಅವರು, ‘ಯುವಕರು ದುಶ್ಚಟಗಳಿಗೆ ಬಲಿಯಾಗದೆ ಕ್ರೀಡಾಸಕ್ತಿ ಮೈಗೂಡಿಸಿಕೊಂಡು ಸೃಜನಶೀಲ ವ್ಯಕ್ಯಿತ್ವ ರೂಪಿಸಿಕೊಳ್ಳಬೇಕು. ಬಾಬಾ ಸಾಹೇಬರು ತಾವು ಪಟ್ಟ ಕಷ್ಟವನ್ನು ಬೇರೆ ಯಾರು ಪಡಬಾರದು ಎಂದು ಸಂವಿಧಾನದ ತರುವ ಮೂಲಕ ಸಮಾನತೆಗಾಗಿ ಹೋರಾಡಿದರು. ನಮ್ಮ ಮಕ್ಕಳು ಮುಂದುವರಿಯಬೇಕಾದರೆ ಶಿಕ್ಷಣ ಅತ್ಯಗತ್ಯ’ ಎಂದು ಪ್ರತಿಪಾದಿಸಿದರು.

ಮುಖ್ಯ ಶಿಕ್ಷಕ ಬಸವರಾಜ ಮಲ್ಲೆ ಮಾತನಾಡಿದರು. ಸಣ್ಣಕ್ಕೆಪ್ಪ ಸಾಹುಕಾರ, ಭೀಮಣ್ಣ ದೊರೆ, ಮಹಾರಾಯ ಸಾಹುಕಾರ, ಮಡಿವಾಳಪ್ಪ ಕಟ್ಟಿಮನಿ, ಆರ್.ಎಸ್.ಮಾಲಗತ್ತಿ, ಹುಸೇನ್ ಪಟೇಲ್, ಪರಶುರಾಮ ಗಡ್ಡದ, ಮುತ್ತುರಾಜ ಬಡಿಗೆರ, ಗೊಲ್ಲಾಳಪ್ಪ ದೊರೆ, ರಾಜು ದೊಡ್ಮನಿ, ಹಳ್ಳೆಪ್ಪ ಕವಾಲ್ದಾರ್, ಮಂಜು ತುಂಬಗಿ, ಕಾಶಿಪತಿ ಕಂಬಾರ, ಎಂ.ಎಸ್.ಮಳ್ಳಿ, ಶ್ರೀಶೈಲ ಮ್ಯಾಗೇರಿ, ಭೀಮರಾಯ ಬಡಿಗೇರ, ರಾಜು ಸಾಹುಕಾರ, ರುದ್ರಯ್ಯ ಸ್ವಾಮಿ, ಅಬ್ದುಲ್ ಪಟೇಲ, ಅಬ್ಬಾಸಲಿ ಮಕ್ಕಾಂದಾರ, ಬಾಬು ಕಂಬಾರ, ಮಲ್ಲಪ್ಪ ಬಡಿಗೇರ ಸೇರಿದಂತೆ ಹಲವರಿದ್ದರು.

ಶಿಕ್ಷಕ ಮಲ್ಲು ಸಜ್ಜನ ನಿರೂಪಿಸಿದರು. ಮುಖ್ಯ ಶಿಕ್ಷಕ ಬಸವರಾಜ ಮಲ್ಲೆ ಪ್ರಥಮ ಬಹುಮಾನ ಹಾಗೂ ಚಾಲಕರ ಸಂಘದ ಅಧ್ಯಕ್ಷ ಹುಸೇನ ಪಟೇಲ ದ್ವಿತೀಯ ಬಹುಮಾನವನ್ನು ವಿತರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-30-1223912620

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.