ಯಾದಗಿರಿ: ನಗರದ ಗಂಜ್ ವೃತ್ತದಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಿರುವ ಪಂಚಲೋಹದ ನಿಜ ಶರಣ ಅಂಬಿಗರ ಚೌಡಯ್ಯನ ಮೂರ್ತಿಯನ್ನು ಕೋಲಿ, ಕಬ್ಬಲಿಗ ಸಮಾಜದ ಮುಖಂಡರು, ಚೌಡಯ್ಯನವರ ಅಭಿಮಾನಿಗಳು ಶುಕ್ರವಾರ ಅದ್ದೂರಿಯಾಗಿ ಮೆರವಣಿಗೆಯೊಂದಿಗೆ ಬರಮಾಡಿಕೊಂಡರು.

ಕಲಬುರಗಿ ಯಲ್ಲಿ ಪಂಚಲೋಹದಿಂದ ನಿರ್ಮಿಸಲಾದ 11 ಅಡಿ ಎತ್ತರದ ದೋಣಿ ನಡೆಸುವ ಶೈಲಿಯಲ್ಲಿರುವ ಅಂಬಿಗರ ಚೌಡಯ್ಯ ಮೂರ್ತಿಯನ್ನು ಲಾರಿಯಲ್ಲಿ ತರಲಾಯಿತು. ಮುದ್ನಾಳ ವೃತ್ತದಲ್ಲಿ ಮುಖಂಡರು ಗಂಗಾಸ್ನಾನ ಮಾಡಿಸಿ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಮೂರ್ತಿಗೆ ಪೂಜೆ ಸಲ್ಲಿಕೆ ಆಗುತ್ತಿದ್ದಂತೆ ನೆರೆದಿದ್ದವರು ಜೈಕಾರ ಹಾಕಿದರು.

ಅಂಬಿಗರ ಚೌಡಯ್ಯ ಭಾವಚಿತ್ರ ಇರುವ ಬಾವುಟಗಳನ್ನು ಹಿಡಿದ ಯುವಕರು ಸಂಭ್ರಮಿಸಿದರು. ಮೆರವಣಿಗೆ ಆರಂಭಕ್ಕೂ ಮುನ್ನ ಪಟಾಕಿ ಹಚ್ಚಿದರು. ಡೊಳ್ಳು, ಹಲಗೆಯ ವಾದನದೊಂದಿಗೆ ಮೆರವಣಿಗೆಯ ಮುದ್ನಾಳ ವೃತ್ತದಿಂದ ಸಾಗಿತು. ಬೈಕ್, ಕಾರು, ಆಟೊಗಳಲ್ಲಿ ಕುಳಿತವರು ಸಮಾಜದ ಬಾವುಟಗಳನ್ನು ಹಿಡಿದು ಜೈಕಾರ ಹಾಕುತ್ತಾ ಸಾಗಿದರು. ಕೆಲವು ಕಾಲ್ನಡಿಗೆಯಲ್ಲಿ ತೆರಳಿದರು.

ಮೆರವಣಿಗೆಯು ಜಿಲ್ಲಾಧಿಕಾರಿ ಕಚೇರಿ, ಸರ್ಕಾರಿ ಮಹಾವಿದ್ಯಾಲಯ ಸರ್ಕಲ್, ಕನಕ ವೃತ್ತ, ಹಳೇ ಅಗಸಿ, ಗಾಂಧಿ ವೃತ್ತ, ಮೈಲಾಪುರ ಅಗಸಿ ಮೂಲಕ ಮೆರವಣಿಗೆ ಗಂಜ್ ವೃತ್ತ ತಲುಪಿತು. ಮಾರ್ಗ ಮಧ್ಯದಲ್ಲಿಯೂ ಮುಖಂಡರು ಮೂರ್ತಿಗೆ ಪೂಜೆ, ಗೌರವ ಸಲ್ಲಿಸಿದರು. ಕೆಲವರು ದಾರಿಯುದ್ದಕ್ಕೂ ಮೂರ್ತಿ ಹೊತ್ತ ವಾಹನಕ್ಕೆ ನೀರು ಎರೆದು ಭಕ್ತಿ ಮೆರೆದರು.

ಮೆರವಣಿಗೆಯು ಗಂಜ್ ವೃತ್ತ ತಲುಪುವ ವೇಳೆಗೆ ಸಂಜೆಯಾಯಿತು. ಕ್ರೇನ್ ಮೂಲಕ ಮೂರ್ತಿಯನ್ನು ಎತ್ತಿ ಪ್ರತಿಷ್ಠಾಪಿಸುವ ಬೃಹತ್ ಕಟ್ಟೆ ಮೇಲೆ ಇರಿಸಲಾಯಿತು. ಈ ವೇಳೆ ವೇದಮೂರ್ತಿ ಪೂಜಾರಿಯಿಂದ ಸ್ಥಾಪನೆ ಕಟ್ಟೆ ಮತ್ತು ಮೂರ್ತಿಯ ಪೂಜೆ ಆರಂಭವಾಗಿ ಮಂತ್ರ ಘೋಷಣೆಗಳು ಮೊಳಗಿದವು.

ಈ ವೇಳೆ ಜಿಲ್ಲಾ ಕೋಲಿ ಕಬ್ಬಲಿಗ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಗೋಸಿ, ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷೆ ನಾಗರತ್ನ ಅನಪುರ, ನಗರಸಭೆ ಮಾಜಿ ಅಧ್ಯಕ್ಷೆ ಲಲಿತಾ ಅನಪುರ, ಮುಖಂಡರಾದ ಮೌಲಾಲಿ ಅನಪುರ, ಮಲ್ಲು ಪೂಜಾರಿ, ಆಶಪ್ಪ ಮಾಸ್ಟರ್, ಹಣಮಂತಪ್ಪ ಬಳಿಚಕ್ರ, ಚಂದ್ರಶೇಖರ ಕಾವಲಿ ಬಾಡಿಯಾಳ, ದೇವು ಬಳಿಚಕ್ರ, ಸುಭಾಷಚಂದ್ರ ಕಟಕಟಿ, ಬಸವರಾಜಪ್ಪ ವಡಗೇರಿ, ಅಯ್ಯಪ್ಪ ನಾಲ್ನೋಡಿ, ಭೀಮರೆಡ್ಡಿ ಯರಗೋಳ, ಮಹಾದೇವಪ್ಪ ಗಣಪುರ, ಮಲ್ಲಯ್ಯ ಕಡ್ಡಿ, ಭೀಮಣ್ಣ ಮುಂಡರಗಿ, ಬಸವರಾಜಪ್ಪ ಬಾಗ್ಲಿ, ಸಣ್ಣ ಹಣಮಂತಪ್ಪ ಬಳಿಚಕ್ರ, ಮಲ್ಲಣ್ಣ ಕೊಯಮುತ್ತೂರು, ಶರಣಪ್ಪ ಮೊಟನಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-30-1345288482

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.