ಯಾದಗಿರಿ: ‘ನಗರದ ಗಂಜ್ ವೃತ್ತದಲ್ಲಿ ಪ್ರತಿಷ್ಠಾಪಿಸಲು ಉದ್ದೇಶಿಸಿರುವ ನಿಜ ಶರಣ ಅಂಬಿಗರ ಚೌಡಯ್ಯ ಪಂಚಲೋಹದ ಮೂರ್ತಿ ಸಿದ್ಧವಾಗಿದ್ದು ಮೇ 22ರಂದು ನಗರಕ್ಕೆ ಬರಲಿದ್ದು, ಪೂಜಾ ವಿಧಿವಿಧಾನಗಳ ಮೂಲಕ ಬರಮಾಡಿಕೊಳ್ಳಲಾಗುವುದು’ ಎಂದು ಜಿಲ್ಲಾ ಕೋಲಿ ಕಬ್ಬಲಿಗ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಗೋಸಿ ತಿಳಿಸಿದರು.

‘ಜಿಲ್ಲಾಧಿಕಾರಿ ಕಚೇರಿ ಸಮೀಪದ ಮುದ್ನಾಳ ವೃತ್ತದಲ್ಲಿ ಮಧ್ಯಾಹ್ನ 2ರ ಸುಮಾರಿಗೆ ಗಂಗಾ ಸ್ನಾನ, ಪೂಜೆ ಕಾರ್ಯಗಳನ್ನು ನೆರವೇರಿಸಲಾಗುವುದು. ಬಳಿಕ ಅಲ್ಲಿಂದ ಗಂಜ್ ವೃತ್ತದವರೆಗೆ ಮೂರ್ತಿಯನ್ನು ಮೆರವಣಿಗೆ ಮೂಲಕ ತರಲಾಗುವುದು’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಮೂರ್ತಿ ಪ್ರತಿಷ್ಠಾಪನೆಯ ಸ್ಥಳದಲ್ಲಿ ಕಾಮಗಾರಿ ಮುಗಿದ ಬಳಿಕ ದಿನಾಂಕ ನಿಗದಿ ಮಾಡಿ 10 ಅಡಿ ಎತ್ತರದ ಮೂರ್ತಿ ಅನಾವರಣದ ಬೃಹತ್ ಕಾರ್ಯಕ್ರಮ ನಡೆಸಲಾಗುವುದು’ ಎಂದರು.

ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷರೂ ಆಗಿರುವ ನಗರಸಭೆ ಮಾಜಿ ಅಧ್ಯಕ್ಷೆ ನಾಗರತ್ನ ಅನಪುರ ಮಾತನಾಡಿ, ‘ನಗರಸಭೆಯ ನನ್ನ ಅಧ್ಯಕ್ಷತೆಯ ಅವಧಿಯಲ್ಲಿ ನಾಲ್ಕು ಕಡೆಗಳಲ್ಲಿ ಮೂರ್ತಿಗಳ ಪ್ರತಿಷ್ಠಾನೆಗೆ ಅನುದಾನ ಮೀಸಲಿಡಲಾಗಿತ್ತು. ಆಗ ಚೌಡಯ್ಯನ ಮೂರ್ತಿಗೂ ₹10 ಲಕ್ಷ ಕೊಡಲಾಗಿತ್ತು’ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಾಜದ ತಾಲ್ಲೂಕು ಅಧ್ಯಕ್ಷ ನಿಂಗಪ್ಪ ಜಾಲಗಾರ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಲ್ಲು ಪೂಜಾರಿ, ಮುಖಂಡರಾದ ಆಶಪ್ಪ ಗಾಜರಕೋಟ್, ಬಸವರಾಜ, ದೇವೇಂದ್ರಪ್ಪ ಪಸಪುಲ್, ಮುದಕಪ್ಪ ಚಾಮನಾಳ, ಮಹೇಶಕುಮಾರ ಬಾಡಿಯಾಳ, ಖಂಡಪ್ಪ ಹೊಸೂರು, ಶರಣು ಪಟ್ಟೇದಾರ, ಅಯ್ಯಪ್ಪ, ಮಲ್ಲಿಕಾರ್ಜುನ, ಶಾಂತಪ್ಪ ಚಾಮನಾಳ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-30-1055377905

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.