ಯಾದಗಿರಿ: ‘ಟೆಂಡರ್ ಮೂಲಕ ಮೊಟ್ಟೆಗಳನ್ನು ಖರೀದಿಸಿ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಬಾರದು’ ಎಂದು ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ಮುಖಂಡರು ಸಿಡಿಪಿಒಗೆ ಈಚೆಗೆ ಮನವಿ ಪತ್ರ ಸಲ್ಲಿಸಿದರು.

‘ಅಂಗನವಾಡಿ ಕೇಂದ್ರಗಳ ಫಲಾನುಭವಿಗಳಿಗೆ ವಿತರಣೆ ಮಾಡುವ ಮೊಟ್ಟೆಗಳನ್ನು ಬಾಲ ವಿಕಾಸ ಯೋಜನೆಯ ಮೂಲಕ ಖರೀದಿಸಿ ಅಂಗನವಾಡಿ ಕಾರ್ಯಕರ್ತೆಯರು ವಿತರಿಸುತ್ತಿದ್ದಾರೆ. ಹೊರಗಿನ ಏಜೆನ್ಸಿ ಮೂಲಕ ಟೆಂಡರ್ ಕರೆದು ಸರಬರಾಜು ಮಾಡಲು ಇಲಾಖೆಯು ಚರ್ಚಿಸುತ್ತಿರುವುದು ಗೊತ್ತಾಗಿದೆ. ಇಂತಹ ಏಕಪಕ್ಷೀಯ ನಿರ್ಧಾರದಿಂದ ಹಿಂದೆ ಸರಿದು, ಟೆಂಡರ್ ಮೂಲಕ ಖರೀದಿ ಮಾಡಬಾರದು’ ಎಂದು ಕೋರಿದ್ದಾರೆ.

‘ಏಪ್ರಿಲ್ ಮತ್ತು ಮೇ ತಿಂಗಳ ಮೊಟ್ಟೆ ಬಿಲ್ ಹಾಗೂ ಕಳೆದ ತಿಂಗಳ ಗೌರವಧನ ಪಾವತಿ ಮಾಡಬೇಕು. ಪ್ರತಿ ತಿಂಗಳ 5ನೇ ತಾರೀಖಿನ ಒಳಗೆ ಮಾಸಿಕ ಗೌರವ ಧನ ಕೊಡಬೇಕು. ನಿಯಮ ಅನುಸಾರ ಒಂದು ತಿಂಗಳು ಮುಂಚಿತವಾಗಿ ಮೊಟ್ಟೆ ಹಣ ನೀಡಬೇಕು. ಪ್ರತಿ ತಿಂಗಳು ಕುಂದುಕೊರತೆ ಸಭೆ ಕರೆಯಬೇಕು’ ಎಂದು ಹೇಳಿದ್ದಾರೆ.

ಸಂಘದ ಜಿಲ್ಲಾ ಅಧ್ಯಕ್ಷೆ ಡಿ.ಉಮಾದೇವಿ. ತಾಲ್ಲೂಕು ಸಂಚಾಲಕಿ ನಿರ್ಮಾಲ, ಪದಾಧಿಕಾರಿಗಳಾದ ಬಸಮ್ಮ, ವಿಜಯಲಕ್ಷ್ಮಿ, ಮಂಜುಳಾ, ನಿರ್ಮಾಲ, ಶ್ರೀದೇವಿ, ಎಲಿಜಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-30-1532030169

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.