ಯಾದಗಿರಿ: ತಾಲ್ಲೂಕಿನ ಅರಕೇರಾ (ಕೆ) ಗ್ರಾಮ ಪಂಚಾಯಿತಿಯ ₹ 18.35 ಲಕ್ಷ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಂಡ ಆರೋಪದಡಿ ಕರ ವಸೂಲಿಗಾರನ ವಿರುದ್ಧ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿಡಿಒ ನೀಲಕಂಠ ನರಸಿಂಹರಾವ ನೀಡಿದ ದೂರಿನ ಅನ್ವಯ ಕರವಸೂಲಿಗಾರ ಯಂಕಪ್ಪ ಬಿ. ಗಡಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತೆರಿಗೆ ಹಣವನ್ನು ಬ್ಯಾಂಕ್ಗೆ ಸರಿಯಾಗಿ ಜಮೆಯಾಗದ ಬಗ್ಗೆ ಯಂಕಪ್ಪ ವಿರುದ್ಧ ದೂರು ಬಂದಿದ್ದವು. ತಾ.ಪಂ. ಇಒ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಕರ ವಸೂಲಿಯ ದಾಖಲೆಗಳನ್ನು ಪರಿಶೀಲಿಸಿದರು. 2023-24ರಲ್ಲಿ ಜಮೆಯಾದ ₹11.42 ಲಕ್ಷದಲ್ಲಿ ₹7.75 ಲಕ್ಷ ಬ್ಯಾಂಕ್ಗೆ ಜಮಾ ಮಾಡಿ, ₹3.66 ಲಕ್ಷ ಉಳಿಸಿಕೊಂಡಿದ್ದರು ಎಂಬುದು ಗೊತ್ತಾಗಿದೆ ಎಂದಿದ್ದಾರೆ.

2024-25ನೇ ಸಾಲಿನಲ್ಲಿ ₹15.41 ಲಕ್ಷ ಕರ ವಸೂಲಿಯಾಗಿದ್ದು, ಅದರಲ್ಲಿ ₹3.91 ಲಕ್ಷ ಮಾತ್ರ ಬ್ಯಾಂಕ್ಗೆ ಜಮೆ ಮಾಡಿದ್ದ. ಉಳಿದ ₹11.49 ಲಕ್ಷ ಜಮೆಯಾಗಿರಲಿಲ್ಲ. 2025-26ನೇ ಸಾಲಿನಲ್ಲಿ ಜಮೆಯಾದ ₹ 6.33 ಲಕ್ಷ ಪೈಕಿ, ಬ್ಯಾಂಕ್ಗೆ ₹ 3.14 ಜಮೆ ಮಾಡಿದ್ದ. ಉಳಿದ ₹3.19 ಲಕ್ಷ ಸೇರಿ ಒಟ್ಟು ₹ 18.35 ಲಕ್ಷ ತೆರಿಗೆ ಹಣ ದುರ್ಬಳಕೆ ಮಾಡಿಕೊಂಡಿದ್ದು ದಾಖಲೆಗಳ ಪರಿಶೀಲನೆಯಿಂದ ತಿಳಿದುಬಂದಿತ್ತು.

ಈ ಸಂಬಂಧ ಆರೋಪಿಗೆ ಹಲವು ನೋಟಿಸ್ ನೀಡಿದ್ದರೂ ಸಮರ್ಪಕವಾಗಿ ದಾಖಲೆಗಳು ಒದಗಿಸದೆ, ಹಣವೂ ಜಮೆ ಮಾಡದೆ ಬೇಜವಾಬ್ದಾರಿ ತೋರಿದ್ದರು. ತೆರಿಗೆ ಹಣವನ್ನು ನಿಯಮ ಅನುಸಾರ ಬ್ಯಾಂಕ್ಗೆ ಜಮೆ ಮಾಡದೆ ಅವ್ಯವಹಾರ ಮಾಡಿದ್ದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ, ಯಂಕಪ್ಪ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.