ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೃಷಿ ಆಧಾರಿತ ಉದ್ಯಮಗಳಿಗೆ ಉತ್ತೇಜಿಸಲು ತಾಲ್ಲೂಕಿನ ಬದ್ದೇಪಲಿ ಗ್ರಾಮದಲ್ಲಿ ನಿರ್ಮಿಸಲಾದ ಕೃಷಿ (ಶೇಂಗಾ ಸಂಸ್ಕರಣಾ ಘಟಕ) ಸಂಸ್ಕರಣೆಗಾಗಿ ತರಬೇತಿ ಕಮ್ ಸಾಮಾನ್ಯ ಸೌಲಭ್ಯ ಕೇಂದ್ರಕ್ಕೆ (ಸಿಎಫ್ಸಿ) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಚಾಲನೆ ನೀಡುವರು.

ರಾಜ್ಯ ಸರ್ಕಾರ ನೀಡಿದ ಒಂದು ಎಕರೆ ಭೂಮಿಯಲ್ಲಿ ₹2.19 ಕೋಟಿ ವೆಚ್ಚದ ಸಿಎಫ್ಸಿ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ (ಎಂಪಿಎಲ್ಎಡಿಎಸ್) ₹ 50 ಲಕ್ಷ ಹಾಗೂ ಉಳಿದ ಹಣವನ್ನು ನಬಾರ್ಡ್ ಅಭಿವೃದ್ಧಿ ಸಹಾಯಧನದ ರೂಪದಲ್ಲಿ ಒದಗಿಸಿದೆ. ಕಾರ್ಯನಿರತ ಬಂಡವಾಳವಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್ನಿಂದ ₹ 17 ಲಕ್ಷ ಸಾಲ ಪಡೆಯಲಾಗಿದೆ.

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳನ್ನು ಗುರಿಯಾಗಿಸಿಕೊಂಡು ಕೃಷಿ ಸಂಸ್ಕರಣಾ ತರಬೇತಿ ಕೇಂದ್ರ ಸ್ಥಾಪಿಸಲಾಗಿದೆ. ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಸೇರ್ಪಡೆ, ಮಾರುಕಟ್ಟೆ ಸಂಪರ್ಕ ಜಾಲವನ್ನು ವೃದ್ಧಿಸುವುದು, ರೈತರ ಆದಾಯ ಹೆಚ್ಚಿಸುವುದು, ರೈತ ಉತ್ಪಾದಕ ಸಂಸ್ಥೆಗಳು (ಎಫ್ಪಿಒ) ಸ್ವಸಹಾಯ ಸಂಘಗಳು (ಎಸ್ಎಚ್ಜಿ) ಹಾಗೂ ಗ್ರಾಮೀಣ ಉದ್ಯಮಿಗಳಿಗೆ ಸುಸ್ಥಿರ ಕೃಷಿ ವ್ಯವಹಾರ ಕಲ್ಪಿಸುವ ಗುರಿಯನ್ನೂ ಹಾಕಿಕೊಳ್ಳಲಾಗಿದೆ ಎಂದು ನಬಾರ್ಡ್ ಹೇಳಿದೆ.

ಯಾದಗಿರಿ ಜಿಲ್ಲೆಯಲ್ಲಿ 21,000 ಹೆಕ್ಟೇರ್ಗಿಂತಲೂ ಅಧಿಕ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗುತ್ತಿದ್ದು, ವಾರ್ಷಿಕ ಸುಮಾರು 22,500 ಮೆಟ್ರಿಕ್ ಟನ್ ಶೇಂಗಾ ಉತ್ಪಾದನೆಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ-150 ಮತ್ತು ಮುಂಬೈ-ಚೆನ್ನೈ ರೈಲ್ವೆ ಕಾರಿಡಾರ್ ಹಾದು ಹೋಗಿದ್ದು, ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೂ ಹತ್ತಿರವಾಗಿದೆ. ಹೀಗಾಗಿ, ಬದ್ದೇಪಲಿಯಲಿ ಕೃಷಿ ಉತ್ಪನ್ನಗಳ ಸಂಗ್ರಹಣೆ, ಸಂಸ್ಕರಣೆ ಮತ್ತು ವಿತರಣೆಯ ಕೇಂದ್ರ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದೆ.

ಈ ಘಟಕವು ವಾರ್ಷಿಕವಾಗಿ ಸುಮಾರು 480 ರಿಂದ 648 ಮೆಟ್ರಿಕ್ ಟನ್ ಶೇಂಗಾ ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ಕಾರ್ಮಿಕರಿಗೆ ವರ್ಷದಲ್ಲಿ 250 ದಿನಗಳ ಕೆಲಸ ನೀಡಲಿದ್ದು, ಶೇಂಗಾವನ್ನು ಸಂಸ್ಕರಿಸಿ ಬಿತ್ತನೆ ಬೀಜ, ಹುರಿದ ಮತ್ತು ಉಪ್ಪು ಬೆರೆಸಿದ ಶೇಂಗಾ, ಪೀನಟ್ ಬಟರ್, ಶೇಂಗಾ ಎಣ್ಣೆ, ಹಿಂಡಿಯಂತಹ ಉತ್ಪನ್ನಗಳನ್ನಾಗಿ ಮಾಡಿ ಮಾರಾಟ ಮಾಡುವ ಉದ್ದೇಶವೂ ಇದೆ. ಬದ್ದೇಪಲಿ, ಸೈದಾಪುರ, ಬಳಿಚಕ್ರ, ರಾಮಸಮುದ್ರ ಸೇರಿದಂತೆ ತಾಲ್ಲೂಕಿನ ಮತ್ತಿತರ ಗ್ರಾಮಗಳಿಂದ ಶೇಂಗಾ ಖರೀದಿಸಿ ಮೌಲ್ಯ ವರ್ಧನೆ ಮಾಡಲಾಗುವುದು ಎಂದು ಹೇಳಿದೆ.

ಉತ್ಪನ್ನಗಳ ಗುಣಮಟ್ಟದ ತಪಾಸಣೆಗಾಗಿ ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಎನ್ಎಬಿಎಲ್ ಮಾನ್ಯತೆಯ ಪ್ರಯೋಗಾಲಯದ ನೆರವು ಪಡೆಯಲಾಗುತ್ತಿದೆ. ಆಂತರಿಕ ಗುಣಮಟ್ಟ ತಪಾಸಣೆಯೂ ಹೊಂದಲಾಗಿದೆ. ತಯಾರಿಸಲಾದ ಉತ್ಪನ್ನಗಳನ್ನು ಕಿರಾಣಿ ಅಂಗಡಿ, ಸೂಪರ್ಮಾರ್ಕೆಟ್, ಸ್ವಸಹಾಯ ಸಂಘಗಳು, ಹೋಟೆಲ್ ಹಾಗೂ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳ ಮೂಲಕ ಮಾರಾಟ ಮಾಡುವ ಯೋಜನೆ ಹಾಕಿಕೊಂಡಿದೆ.

ಡಿಸಿ, ಎಸ್ಪಿ ಭೇಟಿ ಪರಿಶೀಲನೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೇಟಿ ನೀಡುವ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ, ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಹಾಗೂ ಎಸ್ಪಿ ಪೃಥ್ವಿಕ್ ಶಂಕರ್ ಅವರು ಬದ್ದೇಪಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-30-703556566

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.