ಯಾದಗಿರಿ: ಕಳೆದ ಒಂದು ವಾರದಿಂದ ಬಿಡುವು ಕೊಟ್ಟು ಆಗಾಗ ಸಾಧಾರಣ ಮಳೆಯಾಗುತ್ತಿತ್ತು. ಬುಧವಾರ ನಸುಕಿನ ಜಾವದಲ್ಲಿ ಗುಡುಗು, ಮಿಂಚಿನೊಂದಿಗೆ ಜೋರು ಮಳೆಯಾಗಿ ಜಿಲ್ಲೆಯಲ್ಲಿ ಅತ್ಯಧಿಕ ವಡಗೇರಾ ತಾಲ್ಲೂಕಿನ ಬಿಳ್ಹಾರದಲ್ಲಿ 75.5 ಮಿ.ಮೀ. ಬಿದ್ದಿದೆ. ರೈತರ ಕೃಷಿ ಚಟುವಟಿಕೆಗಳನ್ನು ಚುರುಕುಗೊಳ್ಳುವಂತೆಯೂ ಮಾಡಿದೆ.

ಬೆಳಿಗ್ಗೆ 5ರ ಸುಮಾರಿಗೆ ಆರಂಭವಾದ ಮಳೆ ಒಂದು ಗಂಟೆ ಕಾಲ ಜೋರಾಗಿ ಬಿತ್ತು. 10ಗಂಟೆಯ ವರೆಗೆ ತುಂತುರು, ಕೆಲವೊಮ್ಮೆ ಜೋರಾಗಿ ಸುರಿದು ವಾತಾವರಣವನ್ನು ತಂಪಾಗಿಸಿತು.

ಉದ್ಯೋಗಿಗಳಿಗೂ ಮಳೆಯಲ್ಲಿ ನೆನೆಯುತ್ತಾ ನಿತ್ಯ ಕೆಲಸಗಳಿಗೆ ಹಾಜರಾದರು. ಮಧ್ಯಾಹ್ನ ಬಳಿಕ ಇಡೀ ದಿನ ಬೀಸಲು ಆವರಿಸಿದ್ದರೂ ಧಗೆಯನ್ನು ಮಳೆ ದೂರ ಮಾಡಿತ್ತು.

ಉತ್ತಮವಾಗಿ ಮಳೆಯಾಗಿದ್ದರಿಂದ ಮುಂಗಾರು ಹಂಗಾಮಿನ ಆರಂಭಿಕ ಮಳೆಗೆ ಹಲವು ಗ್ರಾಮಗಳಲ್ಲಿ ಜಮೀನುಗಳ ಹದ ಹಾಗೂ ಸ್ವಚ್ಛಗೊಳಿಸುವ ಕಾರ್ಯ ಬರದಿಂದ ಆರಂಭವಾಗಿದೆ. ಬಿತ್ತನೆ ಕಾರ್ಯಗಳಿಗೆ ಅಗತ್ಯವಾದ ರಂಟೆ, ಕುಂಟೆ, ಕೂರಿಗೆ, ನೊಗ, ಬುಕ್ಕಾದಂತಹ ಸಲಕರಣೆಗಳ ದುರಸ್ತಿ ಕೆಲಸವೂ ಜೋರಾಗಿ ಶುರುವಾಗಿದೆ.

ಬಿಳ್ಹಾರ ಬಳಿಕ ಅತ್ಯಧಿಕ ಮಳೆಯು ಅರಕೇರಾ (ಕೆ) ಗ್ರಾಮದಲ್ಲಿ 74 ಮಿ.ಮೀ. ಬಂದಳ್ಳಿ ಹಾಗೂ ಜೈಗ್ರಾಮದಲ್ಲಿ ತಲಾ 70.5 ಮತ್ತು ಬೆಳಗುಂದಿಯಲ್ಲಿ 67 ಮಿ.ಮೀ. ಮಳೆ ಸುರಿದಿದೆ. ಶಹಾಪುರ ತಾಲ್ಲೂಕಿನಲ್ಲಿ 23.2, ಸುರಪುರದಲ್ಲಿ 17.8, ಯಾದಗಿರಿಯಲ್ಲಿ 37.3, ಗುರುಮಠಕಲ್ನಲ್ಲಿ 47.5, ವಡಗೇರಾದಲ್ಲಿ 42.5 ಹಾಗೂ ಹುಣಸಗಿ ತಾಲ್ಲೂಕಿನಲ್ಲಿ 12.5 ಮಿ.ಮೀ.ನಷ್ಟು ಮಳೆಯಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-30-488974606

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.