ಯಾದಗಿರಿ: ‘ಇನ್ನೆರಡು ವರ್ಷಗಳಲ್ಲಿ ಚುನಾವಣೆ ಸಮೀಪಿಸುತ್ತಿದೆ. ಪಕ್ಷದ ಟಿಕೆಟ್ಗಾಗಿ ಮುಂಚೂಣಿಯಲ್ಲಿ ಇದ್ದೇವೆ ಎಂಬುದನ್ನು ತೋರಿಸಿಕೊಂಡು, ಪಕ್ಷದಲ್ಲಿ ಜೀವಂತವಾಗಿ ಇರುವುದನ್ನು ಸಾಬೀತು ಮಾಡಲು ಕಾಂಗ್ರೆಸ್ ಸರ್ಕಾರ ಮತ್ತು ಶಾಸಕರ ವಿರುದ್ಧ ಅನಗತ್ಯವಾಗಿ ಆರೋಪಿಸಿ ಬಿಜೆಪಿಗರು ಪ್ರತಿಭಟನೆ ಮಾಡಿದ್ದಾರೆ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಭೀಮಣ್ಣ ಮೇಟಿ ಹೇಳಿದರು.

ಯಾದಗಿರಿ ಮತ ಕ್ಷೇತ್ರದ ಶಾಸಕ ಹಾಗೂ ಸರ್ಕಾರದ ವಿರುದ್ಧ ಬಿಜೆಪಿಗರ ಪ್ರತಿಭಟನೆಗೆ ಪ್ರತಿಯಾಗಿ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಚುನಾವಣೆ ಬರುತ್ತಿದ್ದಂತೆ ಹಿರಿಯ ಟಿಕೆಟ್ ಆಕಾಂಕ್ಷಿಗಳನ್ನು ಹಿಂದಕ್ಕೆ ತಳ್ಳಿ ಸಣ್ಣ ಪುಟ್ಟ ಸಮಸ್ಯೆಗಳನ್ನು ಮುಂದಿಟ್ಟುಕೊಂಡು, ದುಡ್ಡು ಕೊಟ್ಟು ಜನರನ್ನು ಕರೆಯಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದರ ಬದಲು ತಾವು ಮಾಡಿದ್ದ ಆರೋಪಿಗಳಿಗೆ ಸಾಕ್ಷಿಗಳನ್ನು ತಂದು ಸಾಬೀತುಪಡಿಸಲಿ’ ಎಂದರು.

‘ಬಿಜೆಪಿ ಶಾಸಕರು ಇದ್ದಾಗ ಇದ್ದಂತವರೇ ಅಧಿಕಾರದಲ್ಲಿದ್ದರು. ಇಲ್ಲಿಯವರೆಗೆ ನಗರಸಭೆಯಲ್ಲಿ ಬಿಜೆಪಿ ಪಕ್ಷದ ಮೂವರು ಅಧ್ಯಕ್ಷರಾಗಿದ್ದರು. ಹಾಗಿದ್ದರೆ ಅವರದ್ದೇ ಪಕ್ಷದವರ ದುರಾಡಳಿತ, ಅನುದಾನ ಲಪಟಾಯಿಸಿದ್ದರ ವಿರುದ್ಧ ಪ್ರತಿಭಟನೆ ಮಾಡಿದ್ದಾರಾ? ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಯಾವ ಉದ್ದೇಶ ಇಟ್ಟುಕೊಂಡು ಪ್ರತಿಭಟಿಸಿದ್ದಾರೆ ಎಂಬುದೂ ಗೊತ್ತಾಗಬೇಕು’ ಎಂದು ಹೇಳಿದರು.

‘ಗ್ರಾಮೀಣ ಭಾಗದಲ್ಲಿ ಹಾಳಾಗಿರುವ ರಸ್ತೆಗಳು ಬಿಜೆಪಿ ಅಧಿಕಾರ ಅವಧಿಯಲ್ಲಿ ನಿರ್ಮಾಣ ಆಗಿರುವಂತಹವು. ಕಳಪೆ ಗುಣಮಟ್ಟದಿಂದಾಗಿ ಕನಿಷ್ಠ ಐದು ವರ್ಷಗಳೂ ಬಾಳಿಕೆ ಬಾರದೆ ಹಾಳಾಗಿವೆ. ಕಳಪೆ ರಸ್ತೆಗಳನ್ನು ನಿರ್ಮಾಣ ಮಾಡಿ, ಅವುಗಳ ಕಮಿಷನ್ ದುಡ್ಡಲ್ಲಿ ಚುನಾವಣೆ ಮಾಡಿದರೂ ಗೆಲ್ಲಲು ಆಗಲಿಲ್ಲ. ಮುಂದೆಯೂ ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವುದಿಲ್ಲ. ಒಂದು ವೇಳೆ ಗೆದ್ದರೆ ನಾನು ರಾಜಕೀಯ ಸನ್ಯಾಸತ್ವ ಸ್ವೀಕರಿಸುತ್ತೇವೆ’ ಎಂದರು.

‘ಬಿಜೆಪಿಗರು ನಮ್ಮ ಶಾಸಕರ ಮೇಲೆ ಮಾಡಿರುವ ಆರೋಪವನ್ನು ನಿರಾಕರಣೆ ಮಾಡುತ್ತೇನೆ. ನಗರಸಭೆಯಲ್ಲಿ ಅವ್ಯವಹಾರ ನಡೆದಿದ್ದರೆ ಅಧಿಕಾರಿಗಳು ಹಾಗೂ ಶಾಸಕರನ್ನು ಮಂಪರು ಪರೀಕ್ಷೆಗೆ ಒಳಪಡಿಸಲಿ. ಭೂಮಿ ಸಂಬಂಧಿತ ದಾಖಲಾತಿಗಳ ತಿದ್ದುಪಡಿಗೆ ₹25 ಸಾವಿರ, ₹50 ಸಾವಿರ ಹಣ ಕೊಟ್ಟವರು ಮತ್ತು ತೆಗೆದುಕೊಂಡ ಅಧಿಕಾರಿಗಳನ್ನು ಮುಖಾಮುಖಿಯಾಗಿ ಕೂರಿಸಿ ಸಾಬೀತು ಮಾಡಲಿ. ನಾವೂ ಸಹಕಾರ ಕೊಡುತ್ತೇವೆ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ವಕ್ತಾರ ಸ್ಯಾಮ್ಸನ್ ಮಾಳಿಕೇರಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಣುಮೇಗೌಡ ಮರಕಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ್ ರೆಡ್ಡಿ, ಒಬಿಸಿ ಘಟಕದ ಜಿಲ್ಲಾಧ್ಯಕ್ಷ ಸಾಹೇಬಣ್ಣ ಕೆಂಗುರಿ, ಸೇವಾದಳದ ಅಧ್ಯಕ್ಷ ಲಕ್ಷ್ಮಣ್ ರಾಠೋಡ್, ತಿಮ್ಮಣ್ಣ ನಾಯಕ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-30-407800621

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.