ವಡಗೇರಾ: ‘ವ್ಯಕ್ತಿಗಿಂತ ದೇಶವೇ ಮುಖ್ಯ ಎಂಬುದು ಬಿಜೆಪಿ ಪಕ್ಷದ ಮೂಲ ಧ್ಯೇಯವಾಗಿದೆ. ಬಿಜೆಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಸರಿಯಾದ ಸಮಯದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುತ್ತದೆ’ ಎಂದು ಸೇಡಂ ಮತಕ್ಷೇತ್ರದ ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹೇಳಿದರು.

ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಯಾದಗಿರಿ ವಿಧಾನಸಭಾ ಕ್ಷೇತ್ರದ ವಡಗೇರಾ, ತುಮಕೂರು ಹಾಗೂ ಹಯ್ಯಾಳ (ಬಿ) ಬಿಜೆಪಿ ಮಹಾಶಕ್ತಿ ಕೇಂದ್ರಗಳ ಕಾರ್ಯಕರ್ತರಿಗಾಗಿ ಆಯೋಜಿಸಲಾಗಿದ್ದ ‘ಪಂಡಿತ್ ದೀನ್ ದಯಾಳ್ ಪ್ರಶಿಕ್ಷಣ ಮಹಾ ಅಭಿಯಾನ – 2026ನೇ ಸಾಲಿನ ಬಿಜೆಪಿ ಪ್ರಶಿಕ್ಷಣ ಮಹಾಭಿಯಾನ’ವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ ಮಾತನಾಡಿ, ‘ಭಾರತೀಯ ಜನತಾ ಪಕ್ಷವು ರಾಷ್ಟ್ರಪ್ರೇಮ ಮತ್ತು ಸೇವಾ ಮನೋಭಾವದ ತಳಹದಿಯ ಮೇಲೆ ಸ್ಥಾಪನೆಯಾಗಿದೆ. ಅಂತ್ಯೋದಯ ಕಲ್ಪನೆ, ಸಂಘಟನೆಯ ಶಕ್ತಿ, ಶಿಸ್ತಿನ ಜೀವನ ಕಾರ್ಯಕರ್ತರ ಮಂತ್ರವಾಗಿದೆ’ ಎಂದರು.

‘ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಜನಸೇವೆಗೆ ಮಹತ್ವ ಕೊಡಬೇಕು. ರಾಜ್ಯದಲ್ಲಿ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಾಧನೆಗಳು ಮತ್ತು ಯೋಜನೆಗಳನ್ನು ಗ್ರಾಮೀಣ ಭಾಗದ ಮನೆ ಮನೆಗೂ ತಲುಪಿಸಬೇಕು’ ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಮುಖಂಡರಾದ ರಾಚನಗೌಡ ಮುದ್ನಾಳ, ಶರಣಭೂಪಾಲರಡ್ಡಿ, ಸಿದ್ದಣ್ಣಗೌಡ ಕಾಡಂನೋರ, ದೇವರಾಜ ನಾಯಕ ಉಳ್ಳೆಸೂಗೂರ, ಸದಾಶಿವರಡ್ಡಿಗೌಡ ರೊಟ್ನಡಗಿ, ವೇಣುಗೋಪಾಲ ನಾಯಕ ಸುರಪುರ, ಮೌನೇಶ ಹೈಯ್ಯಾಳ್ಕರ ಶಹಾಪುರ, ಮೇಲಪ್ಪ ಗುಳಗಿ, ಪರಶುರಾಮ ಕುರಕುಂದ, ದೇವಿಂದ್ರ ಕೋನೇರ, ಬಸವರಾಜ ಸೊನ್ನದ, ಗುರುಪಾಟೀಲ ಯಕ್ಷಿಂತಿ, ರಾಜಶೇಖರ ಕಾಡಂನೋರ, ಮೌನೇಶ ಬೆಳಿಗೇರಾ, ಶಿವಕುಮಾರ ಕೊಂಕಲ್, ನಾಗರಡ್ಡಿಇಬ್ರಾಹಿಂಪೂರ, ಪರ್ವತರಡ್ಡಿ ಬೆಂಡೆಬೆಂಬಳಿ, ಶರಣಗೌಡ ಐಕೂರ, ನಿಂಗಮ್ಮ ನಾಟೇಕಾರ, ಶಂಕ್ರಪ್ಪಗೌಡ ಗೋನಾಲ್, ವೀರುಪಾಕ್ಷಪ್ಪಗೌಡ, ಮೋಹನರಡ್ಡಿ, ವಾಲ್ಮೀಕಿ ನಾಯಕ ಸೇರಿದಂತೆ ಇತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-30-968346381

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.