ಗುರುಮಠಕಲ್: ತಾಲ್ಲೂಕು ವ್ಯಾಪ್ತಿಯಲ್ಲಿ ಸೋಮವಾರ ಬಿರುಗಾಳಿ, ಮಿಂಚು, ಗುಡುಗು ಸಹಿತ ಮಳೆಯಾಗಿದ್ದು, ಸಿಡಿಲಿಗೆ 4 ಕುರಿ, 62 ಮೇಕೆ ಬಲಿಯಾಗಿವೆ.

ತಾಲ್ಲೂಕಿನ ಬೂದೂರು ಗ್ರಾಮದ ಜಲ್ಲಪ್ಪ ಲಕ್ಷ್ಮಪ್ಪ ಜಲ್ಲಪ್ಪೋಳ ಅವರ 21 ಮೇಕೆ ಮತ್ತು 1 ಕುರಿ, ಸಾಯಪ್ಪ ಮಲ್ಲಪ್ಪ ಕಂದಕೂರ ಅವರ 12 ಮೇಕೆ ಮತ್ತು 2 ಕುರಿ, ನರಸಪ್ಪ ಚಂದ್ರಪ್ಪ ಅವರ 12 ಮೇಕೆ ಮತ್ತು 1 ಕುರಿ ಹಾಗೂ ಸಾಬಣ್ಣ ದೇವಪ್ಪ ಲೋಕುರ್ತಿ ಅವರ 16 ಮೇಕೆ ಸೇರಿದಂತೆ ಒಟ್ಟು 66 ಜೀವಗಳು ಸಿಡಿಲಿಗೆ ತುತ್ತಾಗಿವೆ.

‘ಎಂದಿನಂತೆ ಸೋಮವಾರ ಬೂದೂರು ಗ್ರಾಮದ ಹೊರವಲಯದಲ್ಲಿ ತಮ್ಮ ಕುರಿ ಮತ್ತು ಮೇಕೆಗಳನ್ನು ಮೇಯಿಸುತ್ತಿದ್ದರು. ಸಂಜೆ ವೇಳೆ ಗಾಳಿ ಮತ್ತು ಗುಡುಗು ಪ್ರಾರಂಭವಾಗಿದೆ. ಜತೆಗೆ ಮಳೆ ಸುರಿಯುತ್ತಿದ್ದಂತೆ ಪಕ್ಕದಲ್ಲಿದ್ದ ಗಿಡದ ಕೆಳಗೆ ಹೋಗಿವೆ. ಮರಕ್ಕೆ ಸಿಡಿಲು ಅಪ್ಪಳಿಸುತ್ತಿದ್ದಂತೆ 66 ಜೀವಗಳೂ ಬಲಿಯಾದವು’ ಎಂದು ಸ್ಥಳೀಯರು ತಿಳಿಸಿದರು.

‘ತಮ್ಮ ಜೀವನಾಧಾರವಾಗಿದ್ದ ಲಕ್ಷಾಂತರ ಮೌಲ್ಯದ ಕುರಿ ಮತ್ತು ಮೇಕೆಗಳು ತಮ್ಮ ಕಣ್ಣೆದುರಿಗೆ ಸಿಡಿಲಿಗೆ ಬಲಿಯಾಗಿದ್ದು, ನೋಡಿದ ರೈತರು ಕಣ್ಣೀರಿಡುತ್ತಿದ್ದಾರೆ. ಪ್ರೀತಿಯಿಂದ ಸಾಕಿದ್ದ ಜೀವಗಳು ಸತ್ತಿದ್ದು ಮತ್ತು ಆದಾಯವನ್ನೂ ಕಳೆದುಕೊಂಡವರಿಗೆ ಶೀಘ್ರ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಂಬಂಧಿತ ಅಧಿಕಾರಿಗಳು ಕ್ರಮವಹಿಸಬೇಕು’ ಎಂದು ಬೂದೂರು ಗ್ರಾಮಸ್ಥರು ಮನವಿ ಮಾಡಿದರು.

ತಹಶೀಲ್ದಾರ್ ಚನ್ನಮಲ್ಲಪ್ಪ ಗಂಟಿ, ಗ್ರಾಮ ಆಡಳಿತಾಧಿಕಾರಿ ನವನಾಥ, ಶರತಕುಮಾರ, ಪೊಲೀಸ್ ಮತ್ತು ಪಶು ವೈದ್ಯಕೀಯ ಇಲಾಖೆಯ ಅಧಿಕಾರಿಗಳ ತಂಡ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-30-1204162495

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.