ಯಾದಗಿರಿ: ಆಟವಾಡುತ್ತಾ ಮನೆಯಿಂದ ಹೊರ ಬಂದು ರೈಲು ನಿಲ್ದಾಣ ಸಮೀಪದಲ್ಲಿ ಸೋಮವಾರ ಅಳುತ್ತಿದ್ದ ಎರಡೂವರೆ ವರ್ಷದ ಮಗುವನ್ನು ಆಟೊ ಚಾಲಕರು ಮತ್ತು ಪೊಲೀಸ್ ಇಲಾಖೆಯ ಅಕ್ಕ ಪಡೆ ಸಿಬ್ಬಂದಿ ರಕ್ಷಿಸಿ ಆಕೆಯ ಪೋಷಕರ ಮಡಿಲಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಉತ್ತರ ಪ್ರದೇಶ ಮೂಲದ ನಗರದ ಲಾಡಸ್ ಗಲ್ಲಿಯಲ್ಲಿ ವಾಸವಿರುವ ಸಗೀರ್ ಮತ್ತ ಫಾತಿಮಾ ದಂಪತಿ ಪುತ್ರಿ ಆಯಿಷಾ ತಾಯಿ ಮಡಿಲು ಸೇರಿದ್ದಾಳೆ. ಸಮಯಪ್ರಜ್ಞೆ ತೋರಿ ಮಗುವನ್ನು ಪೊಲೀಸರ ಸುರ್ಪದಿಗೆ ಒಪ್ಪಿಸಿದ ಆಟೊ ಚಾಲಕ ಕೃಷ್ಣ ಪವಾರ್ ನಡೆಗೆ ಮೆಚ್ಚಿಗೆ ವ್ಯಕ್ತವಾಗಿದೆ.

‘ಮಗುವಿನ ತಂದೆ ಎಂದಿನಂತೆ ಪಿಒಪಿ ಕೆಲಸಕ್ಕಾಗಿ ಮನೆಯಿಂದ ಹೊರ ಹೋಗಿದ್ದರು. ಆಯಿಷಾ ಮನೆಯ ಮುಂದೆ ಆಟವಾಡುತ್ತಿದ್ದಳು. ಕರೆಂಟ್ ಬಿಲ್ ಕಟ್ಟುವ ಆತುರದಲ್ಲಿ ಮಗುವನ್ನು ಅಲ್ಲಿಯೇ ಬಿಟ್ಟು ತಾಯಿ ಮನೆಯತ್ತ ತೆರಳಿದ್ದರು. ಅಲ್ಲಿಂದ ಆಟವಾಡುತ್ತಾ ದಾರಿ ತಪ್ಪಿ, ರೈಲು ನಿಲ್ದಾಣ ಸಮೀಪ ಬಂದು ಅಳುತ್ತಾ ನಿಂತಿದ್ದಳು. ಆಟೊ ಚಾಲಕ ಕೃಷ್ಣ ಪವರ್ ಅವರು ಮಗುವನ್ನು ಸಮಾಧಾನ ಮಾಡಿ, ಸುತ್ತಲೂ ಪೋಷಕರ ಇರುವ ಬಗ್ಗೆ ವಿಚಾರಿಸಿದರೂ ಪತ್ತೆಯಾಗಲಿಲ್ಲ. ಕೊನೆಗೆ ಅಕ್ಕ ಪೊಲೀಸ್ ಪಡೆಗೆ ಮಗುವನ್ನು ಒಪ್ಪಿಸಿದರು’ ಎಂದು ಪೊಲೀಸ್ ಕಾನ್ಸ್ಟೆಬಲ್ ಅನಿಲ್ ಚವ್ಹಾಣ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಗುವನ್ನು ಬಸ್ ನಿಲ್ದಾಣಕ್ಕೆ ಕರೆದೊಯ್ದು ಮೈಕ್ನಲ್ಲಿ ಅನೌನ್ಸ್ ಮಾಡಿದರೂ ಯಾರೂ ಬರಲಿಲ್ಲ. ಬಳಿಕ ನಿಯಮಗಳ ಅನುಸಾರ ಮಗುವನ್ನು ಬಾಲಕಿಯರ ಬಾಲಮಂದಿರದಲ್ಲಿ ಬಿಡಲಾಯಿತು. ಮನೆಯಿಂದ ತಪ್ಪಿಸಿಕೊಂಡ ಮಗುವಿನ ಫೋಟೊ ಸಾಮಾಜಿಕ ಜಾಲತಾಣ, ಪೊಲೀಸ್ ಠಾಣೆಗಳ ನಡುವೆ ಮಾಹಿತಿ ಹಂಚಿಕೆಯಾಗಿತ್ತು. ಆಕೆಯ ಪೋಷಕರು ನಗರ ಪೊಲೀಸ್ ಠಾಣೆಗೆ ಬಂದು ಮಗುವಿಗೆ ಸಂಬಂಧಿಸಿದ ದಾಖಲೆಗಳು, ಫೋಟೊಗಳನ್ನು ನೀಡಿದರು. ವಿಳಾಸ, ಪೋಷಕರು ದಾಖಲೆಗಳನ್ನು ಪಡೆದುಕೊಂಡು ಮಗುವನ್ನು ಪೋಷಕರಿಗೆ ಒಪ್ಪಿಸಲಾಗಿದೆ’ ಎಂದು ಮಾಹಿತಿ ಹಂಚಿಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-30-1692524995

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.