ಯಾದಗಿರಿ: ಆರೋಗ್ಯ ಇಲಾಖೆಯ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ (ಆರ್ಬಿಎಸ್ಕೆ) ನಡೆಸಿದ ತಪಾಸಣೆಯಲ್ಲಿ ಜಿಲ್ಲೆಯ 23,105 ಮಕ್ಕಳಲ್ಲಿ ವಿವಿಧ ಅನಾರೋಗ್ಯ ಸಮಸ್ಯೆಗಳು ಪತ್ತೆಯಾಗಿವೆ. ಪತ್ತೆಯಾಗಿ ಚಿಕಿತ್ಸೆಗೆ ಶಿಫಾರಸು ಮಾಡಿದ 9,910 ಮಕ್ಕಳ ಪೈಕಿ ಕೇವಲ 1,189 ಮಕ್ಕಳಿಗಷ್ಟೇ ಚಿಕಿತ್ಸೆ ಸಿಕ್ಕಿದ್ದು, 8,721 ಮಕ್ಕಳಿಗೆ ಚಿಕಿತ್ಸೆಯೇ ಸಿಕ್ಕಿಲ್ಲ.

ಆರ್ಬಿಎಸ್ಕೆ ಅಡಿಯಲ್ಲಿ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಶಾಲಾ/ ಕಾಲೇಜು ಮತ್ತು ಅಂಗನವಾಡಿ ಕೇಂದ್ರಗಳಿಗೆ ಆರ್ಬಿಎಸ್ಕೆ ತಂಡವು ಭೇಟಿ ನೀಡಿ ನಿಯಮಿತವಾಗಿ ಮಕ್ಕಳ ಆರೋಗ್ಯವನ್ನು ತಪಸಾಣೆ ಮಾಡುತ್ತದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ (2025ರ ಏಪ್ರಿಲ್ನಿಂದ 2026ರ ಮೇ 16ರ ವರೆಗೆ) ತಪಾಸಣೆ ಮಾಡಲಾದ ಮಕ್ಕಳ ಪೈಕಿ 11,847 ಬಾಲಕ ಹಾಗೂ 11,254 ಬಾಲಕಿಯರಲ್ಲಿ ಅನಾರೋಗ್ಯ ಸಮಸ್ಯೆಗಳು ಕಂಡುಬಂದಿವೆ. ಅವುಗಳಲ್ಲಿ ಕೆಲವರಿಗೆ ಸಾಧಾರಣ ಸಮಸ್ಯೆ ಇದ್ದರೆ, ಮತ್ತೆ ಕೆಲವರಿಗೆ ಗಂಭೀರ ಸ್ವರೂಪದ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ತಪಾಸಣೆ ವೇಳೆ ಕಿವುಡುತನ, ದಂತ, ಚರ್ಮ, ವಿಟಮಿನ್ ಎ, ವಿಟಮಿನ್ ಬಿ ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಕೊರತೆ, ಅಪೌಷ್ಟಿಕತೆ, ರಕ್ತಹೀನತೆ, ಸೀಳು ತುಟಿ ಮೊದಲಾದ ಆರೋಗ್ಯ ಸಮಸ್ಯೆ ಹೊಂದಿರುವವರನ್ನು ಪತ್ತೆ ಹಚ್ಚಲಾಗಿದೆ. ಗಂಭೀರ ಕಾಯಿಲೆಗಳು ಪತ್ತೆಯಾದ ಮಕ್ಕಳಿಗೆ ಸರ್ಕಾರಿ ಹಾಗೂ ಸರ್ಕಾರಿ ಯೋಜನೆಗಳ ಸಂಯೋಜಿತ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಕೊಡಿಸಲಾಗುತ್ತದೆ.

ಆದರೆ, ಜಿಲ್ಲೆಯಲ್ಲಿ ಚಿಕಿತ್ಸೆಗೆ 5,102 ಬಾಲಕರು ಹಾಗೂ 4,806 ಬಾಲಕಿಯರಿ ಸೇರಿ ಒಟ್ಟು 9,910 ಮಕ್ಕಳು ಚಿಕಿತ್ಸೆಗೆ ಶಿಫಾರಸು ಮಾಡಲಾಗಿದೆ. ಅವರಲ್ಲಿ 631 ಬಾಲಕರು ಹಾಗೂ 558 ಬಾಲಕಿಯರು ಸೇರಿ 1,189 ಮಕ್ಕಳು ಮಾತ್ರವೇ ಚಿಕಿತ್ಸೆ ಪಡೆದುಕೊಂಡಿದ್ದಾರ. ಉಳಿದ 8,721 ಮಕ್ಕಳಿಗೆ ಚಿಕಿತ್ಸೆಯೇ ಲಭ್ಯವಾಗಿಲ್ಲ ಎನ್ನುತ್ತವೆ ಆರ್ಬಿಎಸ್ಕೆ ಅಂಕಿಅಂಶಗಳು.

ವಿಟಮಿನ್ ಎ ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಕೊರತೆಯಿಂದ 1,392 ಮಕ್ಕಳು ಬಳಲುತ್ತಿದ್ದಾರೆ. ಅವರಲ್ಲಿ 128 ಮಕ್ಕಳಿಗಷ್ಟೇ ಚಿಕಿತ್ಸೆ ಪಡೆಯಲು ಸಾಧ್ಯವಾಗಿದೆ. ತುರಿಕಜ್ಜಿಗೆ ತುತ್ತಾಗಿರುವ 1,736 ಮಕ್ಕಳಲ್ಲಿ 1,666 ಮಕ್ಕಳನ್ನು ಚಿಕಿತ್ಸೆಗೆ ಶಿಫಾರಸು ಮಾಡಲಾಗಿದೆ. ಅವರಲ್ಲಿ 228 ಮಕ್ಕಳು ಚಿಕಿತ್ಸೆಗೆ ಒಳಗಾಗಿದ್ದು, ಉಳಿದ 1,438 ಮೈ ತುರಿಸಿಕೊಳ್ಳುತ್ತಾ ಚರ್ಮ ರೋಗದಿಂದ ಬಳಲುತ್ತಿದ್ದಾರೆ.

ಕಿವಿಯ ಉರಿಯೂತಕ್ಕೆ 786 ಹಾಗೂ ದಂತ ಕ್ಷಯ, ದಂತ ಸಂಬಂಧಿತ ಇತರೆ ಅನಾರೋಗ್ಯಕ್ಕೆ 1,784 ಮಕ್ಕಳು ತುತ್ತಾಗಿದ್ದಾರೆ. ಕಿವಿಯ ಉರಿಯೂತಕ್ಕೆ ಶಿಫಾರಸಾದ 555 ಮಕ್ಕಳಲ್ಲಿ 88 ಮಕ್ಕಳು ಮಾತ್ರವೇ ಚಿಕಿತ್ಸೆಗೆ ಒಳಗಾಗಿದ್ದಾರೆ. ಉಳಿದವರಿಗೆ ಚಿಕಿತ್ಸೆಯ ಭಾಗ್ಯ ಲಭಿಸಿಲ್ಲ. ದಂತ ಸಂಬಂಧಿತ ಚಿಕಿತ್ಸೆಗೆ ಶಿಫಾರಸಾದ 1,692 ಮಕ್ಕಳಲ್ಲಿ 241 ಮಕ್ಕಳಷ್ಟೇ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಸೀಳು ತುಟಿಗೂ ಸಿಗದ ಚಿಕಿತ್ಸೆ: ಜಿಲ್ಲೆಯಲ್ಲಿ ಸೀಳು ತುಟಿ ಸಮಸ್ಯೆಯಿಂದ ಬಳಲುತ್ತಿರುವ 13 ಮಕ್ಕಳು ಪತ್ತೆಯಾಗಿದ್ದು, ಅವರಲ್ಲಿ ಇಬ್ಬರನ್ನು ಮಾತ್ರವೇ ಚಿಕಿತ್ಸೆಗೆ ಶಿಫಾರಸು ಮಾಡಲಾಗಿದೆ. ಆದರೆ, ಒಬ್ಬರಿಗೂ ಚಿಕಿತ್ಸೆಯ ಭಾಗ್ಯ ದೊರಕಿಲ್ಲ. ದೃಷ್ಟಿ ದೋಷ ಹೊಂದಿರುವುದು 15 ಮಕ್ಕಳಲ್ಲಿ ಕಂಡುಬಂದಿದ್ದು, ಒಬ್ಬರನ್ನೂ ಚಿಕಿತ್ಸೆಗೆ ಶಿಫಾರಸು ಮಾಡಿಲ್ಲ ಎನ್ನುತ್ತವೆ ಆರ್ಬಿಎಸ್ಕೆ ಅಂಕಿಅಂಶಗಳು.

ಯಾದಗಿರಿಯಲ್ಲಿ ಇಬ್ಬರಿಗೆ ಮಾತ್ರವೇ ಚಿಕಿತ್ಸೆ!

ಅವಿಭಜಿತ ಯಾದಗಿರಿ ತಾಲ್ಲೂಕಿನಲ್ಲಿ 2,430 ಬಾಲಕರು ಹಾಗೂ 4,863 ಬಾಲಕಿಯರು ಸೇರಿ ಒಟ್ಟು 4,863 ಮಕ್ಕಳು ನಾನಾ ಬಗೆಯ ಅನಾರೋಗ್ಯದಿಂದ ಬಳಲುತ್ತಿರುವುದು ಆರ್ಬಿಎಸ್ಕೆಯಿಂದ ಗೊತ್ತಾಗಿದೆ. ಅವರಲ್ಲಿ 3,723 ಮಕ್ಕಳಿಗೆ ಚಿಕಿತ್ಸೆಗೆ ಶಿಫಾರಸು ಮಾಡಲಾಗಿದ್ದು, ಚಿಕಿತ್ಸೆಗೆ ಒಳಗಾದವರು ಕೇವಲ ನಾಲ್ವರು ಮಕ್ಕಳು ಮಾತ್ರವೇ.

ಈ ನಾಲ್ಕು ಮಕ್ಕಳು ಹಿಮೋಗ್ಲೋಬಿನ್ ಸಂಬಂಧ ಚಿಕಿತ್ಸೆಗೆ ಒಳಗಾಗಿದ್ದಾರೆ. ಚರ್ಮ, ದೃಷ್ಟಿ ದೋಷ, ದಂತ, ವಿಟಮಿನ್ ಎ ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಕೊರತೆ, ಅಪೌಷ್ಟಿಕತೆ, ಸೀಳು ತುಟಿ ಮೊದಲಾದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ 3,719 ಮಕ್ಕಳು ಚಿಕಿತ್ಸೆಯೇ ಪಡೆದುಕೊಂಡಿಲ್ಲ ಎನ್ನುತ್ತವೆ ಅಂಕಿಅಂಶಗಳು.

‘ಪ್ರತಿ ತಿಂಗಳು ಶಿಬಿರ ನಡೆಸಿ ಚಿಕಿತ್ಸೆ’

‘ನಮ್ಮ ಸಿಬ್ಬಂದಿ ಶಾಲೆಗಳಿಗೆ ತೆರಳಿ ತಪಾಸಣೆ ಮಾಡಿ ಆಸ್ಪತ್ರೆಗೆ ತೆರಳುವಂತೆ ಶಿಫಾರಸು ಮಾಡುತ್ತಾರೆ. ಆದರೆ, ಪೋಷಕರು ಮಕ್ಕಳನ್ನು ಪಿಎಚ್ಸಿಗಳಿಗೆ ಕರೆದೊಯ್ದು ಚಿಕಿತ್ಸೆ ಕೊಡಸದೆ ಇರುವುದರಿಂದ ಸಾಕಷ್ಟು ಅಂತರವಿದೆ. ಮುಂದಿನ ದಿನಗಳಲ್ಲಿ ಪ್ರತಿ ತಿಂಗಳ 13 ಅಥವಾ 14ನೇ ತಾರೀಖು ಆರೋಗ್ಯ ತಪಾಸಣೆ ಶಿಬಿರ ನಡೆಸಲಾಗುವುದು’ ಎಂದು ಆರ್ಸಿಎಚ್ಒ ಡಾ. ಮಲ್ಲಪ್ಪ ನಾಯಕ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರೋಗ್ಯ ಶಿಬಿರಗಳಲ್ಲಿ ವೈದ್ಯರನ್ನು ಕರೆದೊಯ್ದು ಚಿಕಿತ್ಸೆ ಕೊಡಲಾಗುವುದು. ತಪಾಸಣೆಗೆ ಸೂಚಿಸಲಾದ ಮಕ್ಕಳು ಹಾಗೂ ಚಿಕಿತ್ಸೆ ಪಡೆದವರ ನಡುವಿನ ಅಂತರವನ್ನು ತಗ್ಗಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.