ಯಾದಗಿರಿ: ನಗರ ಸಮೀಪದ ಭೀಮಾ ನದಿಯ ಒಡಲು ಸೇರುವ ಹಳ್ಳದ ತುಂಬೆಲ್ಲ ರಾಶಿ–ರಾಶಿ ತ್ಯಾಜ್ಯ ಬಿದ್ದು ಗಬ್ಬೆದ್ದು ನಾರುತ್ತಿದೆ. ಹಳ್ಳದಲ್ಲಿ ಸಾರ್ವಜನಿಕರು ತ್ಯಾಜ್ಯ ಎಸೆಯುತ್ತಿರುವ ಬಗ್ಗೆ ನಗರಸಭೆಯು ಮೃದು ಧೋರಣೆ ತೋರುತ್ತಿದ್ದು, ತ್ಯಾಜ್ಯ ಹಾಕುವುದಕ್ಕೆ ಕಡಿವಾಣವೇ ಇಲ್ಲದಂತಾಗಿದೆ.

ಚಿತ್ತಾಪುರ– ಕಲಬುರಗಿ ರಸ್ತೆ ಹಾಗೂ ಹತ್ತಿಕುಣಿ ರಸ್ತೆಯ ಸೇತುವೆಗಳ ಉದ್ದಕ್ಕೂ ಹಳ್ಳಗಳಲ್ಲಿ ಪರಿಸರಕ್ಕೆ ಮಾರಕವಾದ ಕ್ಯಾರಿಬ್ಯಾಗ್, ಪೇಪರ್ ಬ್ಯಾಗ್, ಪ್ಲಾಸ್ಟಿಕ್ ಚೀಲಗಳು, ನೀರಿನ ಬಾಟಲ್, ಗಾಜಿನ ತ್ಯಾಜ್ಯಗಳು, ಲೋಹದ ವಸ್ತುಗಳು, ಪ್ಯಾಕಿಂಗ್ ಡಬ್ಬಿ, ಥರ್ಮಾಕೋಲ್ನಂತಹ ಕಸವೇ ಆವರಿಸಿಕೊಂಡಿದೆ. ವಾಹನಗಳಲ್ಲಿ ಬಂದು ಹಳ್ಳದಲ್ಲಿ ಕಸ ಎಸೆದು ಹೋಗುವುದು ಸಾಮಾನ್ಯವಾಗಿದೆ. ಇದೇ ಮಾರ್ಗದಲ್ಲಿ ನಿತ್ಯ ಅಧಿಕಾರಿಗಳು ಸಂಚರಿಸುತ್ತಿದ್ದರೂ ಕಡಿವಾಣ ಹಾಕಲು ಮುಂದಾಗುತ್ತಿಲ್ಲ.

ಜೀವಕ್ಕೆ ಹಾನಿಕಾರಕವಾದ ಪ್ಲಾಸ್ಟಿಕ್ಗಳು ಬಿಡಾಡಿ ಜಾನುವಾರುಗಳ ಹೊಟ್ಟೆ ಸೇರುತ್ತಿದ್ದರೆ, ಹಳ್ಳದಲ್ಲಿನ ಜಲಚರಗಳ ಜೀವಕ್ಕೂ ಆಪತ್ತು ಬಂದಿದೆ. ಹಳ್ಳದ ಕೊಳಚೆ ನೀರು ನದಿಯನ್ನು ಸೇರಿ ಜಲಮೂಲವನ್ನು ಮಲಿನ ಮಾಡುತ್ತಿದೆ. ಹಳ್ಳ ಮಾತ್ರವಲ್ಲದೆ ನಗರದ ಪ್ರಮುಖ ಪ್ರದೇಶಗಳಲ್ಲಿನ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ.

ನಗರದಲ್ಲಿನ ನೈರ್ಮಲ್ಯದ ಅವ್ಯವಸ್ಥೆಯು ‘ಪ್ರಜಾವಾಣಿ’ಯ ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ...

ಪ್ರಜಾವಾಣಿ ಚಿತ್ರಗಳು: ರಾಜಕುಮಾರ ನಳ್ಳಿಕರ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-30-1548726565

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.