ಯಾದಗಿರಿ: ‘ಕಾಂಗ್ರೆಸ್ ಎಲ್ಲಾ ಜಾತಿಗಳಿಗೂ ಸಂಬಂಧಪಟ್ಟಂತಹ ಪಕ್ಷವಾಗಿದ್ದು, ಸರ್ವ ಧರ್ಮಗಳು, ಎಲ್ಲ ಪ್ರಾಂತ್ಯ ಹಾಗೂ ಭಾಷಿಕರಿಗೂ ಸಮಾನವಾದಂತಹ ಅವಕಾಶಗಳನ್ನು ನೀಡುವಂತಹ ತತ್ವ– ಸಿದ್ಧಾಂತವನ್ನು ಹೊಂದಿರುವಂತಹ ಪಕ್ಷ’ ಎಂದು ವಿಧಾನ ಪರಿಷತ್ ಸದಸ್ಯ ಎ.ವಸಂತಕುಮಾರ ಹೇಳಿದರು.

ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಮುಖಂಡರು ಹಾಗೂ ಕಾರ್ಯಕರ್ತರನ್ನು ಬರಮಾಡಿಕೊಂಡು ಅವರು ಮಾತನಾಡಿದರು.

‘ಕಾಂಗ್ರೆಸ್ ಯಾವುದೇ ಒಂದು ಸೀಮಿತವಾದಂತಹ ಧರ್ಮ, ಜಾತಿಗೆ ಅಂಟಿಕೊಂಡಿಲ್ಲ. ಎಲ್ಲಾ ಧರ್ಮೀಯರು ಹಾಗೂ ಜಾತಿಯವರನ್ನು ಒಳಗೊಂಡ ಪಕ್ಷ. ಸ್ವಾಭಿಮಾನ, ಸೌಹಾರ್ದತೆಯಿಂದ ಎಲ್ಲರಿಗೂ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ನೀಡುತ್ತದೆ’ ಎಂದರು.

‘ಜೆಡಿಎಸ್ನಲ್ಲಿ ವ್ಯಕ್ತಿಯ ನಾಯಕತ್ವ ಬೆಳೆಸಿ ಉಸಿರುಗಟ್ಟುವಂತಹ ವಾತಾವರಣದಿಂದ ಈಗ ಸ್ವತಂತ್ರರಾಗಿದ್ದೀರಿ. ಅಹಂಕಾರ, ದೌರ್ಜನ್ಯ, ದಬ್ಬಾಳಿಕೆಯಿಂದ ಹೊರಬಂದಿದ್ದು, ಇನ್ನು ಮುಂದೆ ದೌರ್ಜನ್ಯದ ವಿರುದ್ಧ ಹೋರಾಟ ಮಾಡೋಣ. ಕಾಂಗ್ರೆಸ್ನಲ್ಲಿ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾದ ಸ್ಥಾನಮಾನಗಳನ್ನು ನೀಡಲಾಗುವುದು’ ಎಂದು ಹೇಳಿದರು.

ಜಿಲ್ಲಾ ಘಟಕದ ಅಧ್ಯಕ್ಷ ಬಸರೆಡ್ಡಿ ಅನಪುರ ಮಾತನಾಡಿ, ‘ಗುರುಮಠಕಲ್ ಕ್ಷೇತ್ರದ ಜನರು ನೀಡಿದ್ದ ಅವಕಾಶವನ್ನು ಶಾಸಕರು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಕ್ಷೇತ್ರವನ್ನು ಅಭಿವೃದ್ಧಿ ಮಾಡದೆ ತಾವೊಬ್ಬರೇ ಅಭಿವೃದ್ಧಿಯಾಗಿದ್ದಾರೆ’ ಎಂದು ಆರೋಪಿಸಿದರು.

‘ಅಧಿವೇಶನದಲ್ಲಿ ಕ್ಷೇತ್ರದ ಸಮಸ್ಯೆ ಬಗ್ಗೆ ಮಾತನಾಡದೆ ಅಧಿಕಾರಿಗಳ ಬಗ್ಗೆ ಪ್ರಸ್ತಾಪಿಸಿ ಅವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಸರಿಯಾದ ರಸ್ತೆಗಳಿಲ್ಲ, ಮಳೆಯಿಂದ ರೈತರಿಗೆ ತೊಂದರೆ ಆದಾಗಲೂ ಅಧಿವೇಶನದಲ್ಲಿ ಆ ಬಗ್ಗೆ ಮಾತನಾಡಲಿಲ್ಲ’ ಎಂದು ಹೇಳಿದರು.

ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ಮಾತನಾಡಿ, ‘ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದವರಿಗೆ ಉಜ್ವಲ ಭವಿಷ್ಯವಿದೆ. ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದು, ನಿಮಗೆ ಬೆಂಬಲವಾಗಿ ನಿಲ್ಲಲಿದೆ’ ಎಂದರು.

ಬಳಿಚಕ್ರ, ಸೈದಾಪುರ ಜೆಡಿಎಸ್ನ ಹಲವು ಮುಖಂಡರು ಹಾಗೂ ಕಾರ್ಯಕರ್ತರಿಗೆ ಪಕ್ಷದ ಬಾವುಟ ನೀಡಿ ಬರಮಾಡಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ರಾಜಗೋಪಾಲರೆಡ್ಡಿ, ಕೆಪಿಸಿಸಿ ಸದಸ್ಯ ಶರಣಪ್ಪ ಮಾನೇಗಾರ, ಜಿಲ್ಲಾ ಖಜಾಂಚಿ ಚಿದಾನಂದಪ್ಪ ಕಾಳಬೆಳಗುಂದಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೇಣಿಕ್ ಕುಮಾರ್ ದೋಖಾ, ಮುಖಂಡರಾದ ಸಾಯಿಬಣ್ಣ ಬೋರಬಂಡ, ರಾಘವೇಂದ್ರ ಮಾನಸಗಲ್, ಭೀಮರಾಯ, ಶರಣಪ್ಪ, ಅಸ್ಲಾಂ ಪಾಷಾ, ಆಶಪ್ಪ, ಹಣಮಂತ, ಶರಣಪ್ಪ ಚಟಗೇರಾ, ಬಸವರಾಜ ಬಾಚವಾರ ಸೇರಿ ಹಲವರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-30-1705403186

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.