ಯಾದಗಿರಿ: ‘ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆದ ಕಳಪೆ ಕಾಮಗಾರಿ ಮತ್ತು ಭ್ರಷ್ಟಾಚಾರ ಆರೋಪದ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಸಲ್ಲಿಸಲಾದ ದೂರಿಗಳನ್ನು ಸರಿಯಾಗಿ ಪರಿಶೀಲನೆ ಮಾಡದೆ ದೂರುದಾರರಿಗೆ ವಸೂಲಾತಿ ನೋಟಿಸ್ ನೀಡಿದ್ದು ಖಂಡನೀಯ’ ಎಂದು ಪತ್ರಕರ್ತ ಈರಣ್ಣ ಹಾದಿಮನಿ ಹೇಳಿದರು.

‘ಜಿಲ್ಲೆಯ 24 ದೂರುದಾರರಿಗೆ ವಸೂಲಾತಿ ದಂಡ ಕಟ್ಟುವ ನಿಟ್ಟಿನಲ್ಲಿ ನೋಟಿಸ್ ಜಾರಿ ಮಾಡಲಾಗಿದೆ. ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ಜಿಲ್ಲಾ ಪಂಚಾಯಿತಿ ಸಿಇಒ ನಿಂತಿದ್ದಾರೆ. ಇಲಾಖೆಗಳಲ್ಲಿ ನಡೆಯುವ ಅನ್ಯಾಯ ಬಗ್ಗೆ ಪ್ರಶ್ನಿಸದಂತೆ ಅಡ್ಡಿ ಮಾಡಿದ್ದಾರೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಹುಸಿ ಆರೋಪ ಮಾಡಿ ಇಲಾಖೆಗಳಿಗೆ ಅರ್ಜಿ ಹಾಕಿ ನಂತರ ವಾಪಸ್ ಪಡೆಯುವ ಮೂಲಕ ಇಲಾಖೆಗಳಿಗೆ ನಷ್ಟ ಮಾಡಿದ್ದಾಗಿ ದಂಡ ವಸೂಲಾತಿ ನೋಟಿಸ್ ನೀಡಿದ್ದಾರೆ. ಅಲ್ಲದೆ ಆಯಾ ತಾಲ್ಲೂಕುಗಳ ಪೊಲೀಸ್ರಿಂದ ನಮಗೆ ದೂರವಾಣಿ ಕರೆ ಮಾಡಿಸಿ ದಂಡ ಕಟ್ಟಿದ್ದಾರೆ ಇಲ್ಲವೆ ಎಂಬುದನ್ನು ಪರಿಶೀಲನೆ ನಡೆಸಿದ್ದಾರೆ’ ಎಂದು ದೂರಿದರು.

‘ತಪ್ಪು ಮಾಡಿದ್ದರೆ ಪರಿಶೀಲನೆ ಮಾಡಿ ತನಿಖೆ ನಡೆಸಿ ಸಂಬಂಧಪಟ್ಟವರಿಗೆ ಕಾರಣ ಕೇಳಿ ನೋಟಿಸ್ ನೀಡಿ ಕ್ರಮ ಜರುಗಿಸಿದರೆ ಅಭ್ಯಂತರವಿಲ್ಲ. ಏಕಾಏಕಿ ದಂಡ ಕಟ್ಟುವ ನೋಟಿಸ್ ನೀಡಿದ್ದು ಸರಿಯಲ್ಲ. ಇದನ್ನು ಇಲ್ಲಿಗೆ ನಿಲ್ಲಿಸಬೇಕು. ಇಲ್ಲದಿದ್ದರೆ ಜಿ.ಪಂ ಕಚೇರಿ ಮುಂದೆ ಹೋರಾಟ ಮಾಡಲಾಗುವುದು’ ಎಂದರು.

ವಿವಿಧ ಸಂಘಟನೆಗಳ ಮುಖಂಡರಾದ ಹಣಮಂತರಾಯ, ಭೀಮಾಶಂಕರ ನಾಟೀಕಾರ, ಬಸವರಾಜ ಹಾದಿಮನಿ, ಪ್ರಭುಗೌಡ ಪೊತರೆಡ್ಡಿ, ಹುಸೇನ್ ದೊಡ್ಡಮನಿ, ವಿಶ್ವಾರಾಧ್ಯ ಬರನೂರ, ಮರಪ್ಪ ಕ್ರಾಂತಿ, ಲಕ್ಷ್ಮಣ ಹಳಿಸಗರ, ಬಲಭೀಮಪ್ಪ ದೊಡ್ಡಮನಿ, ಯಂಕಪ್ಪ ಮಕಾಶಿ, ಲಕ್ಷ್ಮಿ, ಕಾಂತ ನಾಯಕ, ವಿಶ್ವರಾಜ ಛಲವಾದಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-30-1359698289

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.