ಯಾದಗಿರಿ: ‘ಗೋಮಾತೆಯನ್ನು ವಧೆ ಮಾಡಬೇಡಿ. ಬಸವಣ್ಣ, ಬಸವೇಶ್ವರ, ನಂದಿ, ಕಾಮಧೇನು ಎಂದೇ ಪೂಜನೀಯವಾದ ಗೋವನ್ನು ಯಾರೂ ಮಾಂಸಾಹಾರಕ್ಕಾಗಿ ಬಳಸಬಾರದು’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಂಚಾಟೆ ಸಂಜೀವ್ಕುಮಾರ್ ಮನವಿ ಮಾಡಿದರು.

ಇಲ್ಲಿನ ಭಗವಾನ ಮಹಾವೀರ ಜೈನ್ ಗೋಶಾಲೆಗೆ ಸೋಮವಾರ ಭೇಟಿ ನೀಡಿ, ಗೋವುಗಳಿಗೆ ಪೂಜೆ ಸಲ್ಲಿಸಿ ಗೋಶಾಲೆ ವೀಕ್ಷಣೆ ಮಾಡಿ ಅವರು ಮಾತನಾಡಿದರು.

‘ಗೋಮಾತೆ ಪ್ರತ್ಯಕ್ಷ ದೇವತೆಯಾಗಿದೆ. ಹಿಂದೂ ಧರ್ಮದಲ್ಲಿ ಗೋಮಾತೆಗೆ ಬಹಳ ಪೂಜನೀಯ ಸ್ಥಾನವಿದೆ. ಎಲ್ಲಿ ಗೋಮಾತೆ ಸಂತೋಷವಾಗಿ ಇರುತ್ತಾಳೋ ಆ ನಾಡು ಸಮೃದ್ಧವಾಗಿರುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ದೇವಸ್ಥಾನದಲ್ಲಿ ದೇವರನ್ನು ಮೂರ್ತಿ ರೂಪದಲ್ಲಿ ಕಾಣುತ್ತೇವೆ ಹೊರತು ಪ್ರತ್ಯಕ್ಷವಾಗಿ ಕಾಣುವುದಿಲ್ಲ. ಆದರೆ, ಜೀವಂತ ದೇವರಾಗಿ ಗೋಮಾತೆಯನ್ನು ಕಾಣುತ್ತೇವೆ. ಬಕ್ರೀದ್ ಹಬ್ಬ ಸಮೀಪಿಸುತ್ತಿದೆ. ಮುಸಲ್ಮಾನ ಸಮಾಜದಲ್ಲಿ ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ, ಗೋಮಾತೆ ಹತ್ಯೆ ಮಾಡುವುದನ್ನು ಕೈಬಿಡಬೇಕು. ಮನಸ್ಸನ್ನು ಪರಿವರ್ತನೆ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ಮಹಾಭಾರತ ಕಾಲದಲ್ಲಿಯೂ ಗೋವುಗಳಿಗೆ ಮಹತ್ವ ನೀಡಲಾಗಿತ್ತು. ಆ ಕಾಲದಲ್ಲಿ ಗೋವು ಚಿನ್ನಕ್ಕೆ ಸಮಾನವಾಗಿದ್ದು, ಚಿನ್ನ ವಿನಿಮಯದಂತೆ ಗೋವುಗಳು ವಿನಿಮಯ ಆಗುತ್ತಿದ್ದವು. ಗೋವು ಅಷ್ಟೊಂದು ಮೌಲ್ಯಯುತ ಸಂಪತ್ತಾಗಿದೆ. ಗೋಮಾತೆಯ ಸಂಪತ್ತನ್ನು ಉಳಿಸಿ ಬೆಳೆಸಿಕೊಂಡು ಅಭಿವೃದ್ಧಿ ಮಾಡಿದರೆ ಭಾರತ ಸಂಪದ್ಭರಿತ ಸಮೃದ್ಧ ದೇಶವಾಗುತ್ತದೆ’ ಎಂದು ಪ್ರತಿಪಾದಿಸಿದರು.

‘ಗೋಮಾತೆ ನಮಗೆ ಹಾಲು ಕೊಡುವ ತಾಯಿ. ನಾವು ಚಿಕ್ಕವರಿದ್ದಾಗ ತಾಯಿ ಹಾಲು ಕೊಟ್ಟರೆ, ದೊಡ್ಡವರಾದ ನಂತರ ಸಾಯುವವರೆಗೂ ನಮಗೆ ಹಾಲು ಕೊಡುವುದು ಗೋಮಾತೆ. ಹೀಗಾಗಿ, ಹಾಲು ಕೊಡುವಂತವರನ್ನು ನಾವು ಮಾತೆ ಎಂದು ಪೂಜಿಸುತ್ತೇವೆ. ಅಂತಹ ಗೋಮಾತೆಯನ್ನು ಹೊಡೆದು ತಿನ್ನುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ನ್ಯಾಯಾಧೀಶ ಮರಿಯಪ್ಪ, ಪಶು ವೈದ್ಯಾಧಿಕಾರಿ ಡಾ.ಷಣ್ಮುಖಸ್ವಾಮಿ, ಗೋಶಾಲಾ ಅಧ್ಯಕ್ಷ ಗೌತಮಚಂದ ಜೈನ್, ಪ್ರಮುಖರಾದ ಬಾಬು ದೋಖಾ, ಜಂಬು ಸೋಲಂಕಿ, ದಿನೇಶಕುಮಾರ ಜೈನ್, ಅಜೀತ್ ಜೈನ್, ಸುಭಾಷ ಸೋಲಂಕಿ, ರಾಜೇಶ ದೋಖಾ, ವಕೀಲರಾದ ಖುಷಿ, ನಾಗರತ್ನಾ ದೋಖಾ, ಮಹಮದ್ ಮುಸ್ತಾಕ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-30-1873960822

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.