ಯಾದಗಿರಿ: ಶಿಕ್ಷಣ ಸಂಸ್ಥೆಯ ಟ್ರಸ್ಟ್ನ ಟ್ರಸ್ಟಿಯೊಬ್ಬರಿಗೆ ವಿದೇಶದಿಂದ ದೇಣಿಗೆ ಕೊಡಿಸುವ ಆಮಿಷ ತೋರಿಸಿ, ಅವರಿಂದ ಬ್ಯಾಂಕ್ ಖಾತೆಯನ್ನು ತೆರೆಯಿಸಿ ಆ ಖಾತೆಯನ್ನು ₹ 96.86 ಲಕ್ಷ ಸೈಬರ್ ಅಪರಾಧಕ್ಕೆ ಬಳಸಿಕೊಂಡು ಆರೋಪದಡಿ ಹೊರ ರಾಜ್ಯದ ಮೂವರ ವಿರುದ್ಧ ಯಾದಗಿರಿ ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ (ಸೆನ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಹಾಪುರದ ಶಿಕ್ಷಣ ಸಂಸ್ಥೆ ಹಾಗೂ ಟ್ರಸ್ಟ್ ಒಂದರ ಟ್ರಸ್ಟಿಯಾಗಿರುವ ದೇವಪ್ಪ ಹಣಮಂತ ಅವರು ನೀಡಿದ ದೂರಿನ ಅನ್ವಯ ಹೊರ ರಾಜ್ಯದ ಸುನಿಲ್ ಮಹೇಶ ಗೋಯಾ, ದಾದಾಸಾಬ್ ಬಾಬುರಾವ್ ಹಾಗೂ ಗುರಿ ಪಂಜಾಬ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಡಿಸೆಂಬರ್ ತಿಂಗಳಲ್ಲಿ ದೇವಪ್ಪ ಅವರ ಮೊಬೈಲ್ಗೆ ಕರೆ ಮಾಡಿದ ಸುನಿಲ್, ‘ವಿದೇಶಗಳಿಂದ ಶಿಕ್ಷಣ ಸಂಸ್ಥೆ, ಟ್ರಸ್ಟ್ಗೆ ಅನುದಾನ ಕೊಡಿಸುತ್ತೇನೆ’ ಎಂದು ಹೇಳಿ ನಂಬಿಸಿದ. ಅವನ ಮಾತು ನಂಬಿದ ದೇವಪ್ಪ, ಸೋಲಾಪುರಕ್ಕೆ ತೆರಳಿ ಆತನನ್ನು ಭೇಟಿಯಾದರು. ಹಣ ಜಮೆಗಾಗಿ ಶಹಾಪುರದಲ್ಲಿ ಖಾಸಗಿ ಬ್ಯಾಂಕ್ ಒಂದರಲ್ಲಿ ಹೊಸ ಖಾತೆಯೂ ತೆರೆದರು.

ಖಾತೆ ಆರಂಭವಾದ ಬಳಿಕ ದೇವಪ್ಪ ಅವರು ಆರೋಪಿಗಳ ಸೂಚನೆಯಂತೆ ಸೋಲಾಪುರಕ್ಕೆ ತೆರಳಿದರು. ಅವರ ಜೊತೆಗೆ ಆತನ ಮಾವ ನೀಲಕಂಠ ಸಹ ಇದ್ದರು. ಸೋಲಾಪುರದಿಂದ ಸುನಿಲ್ ಜೊತೆಯಲ್ಲಿ ಪುಣೆವರೆಗೆ ರೈಲಿನಲ್ಲಿ, ಅಲ್ಲಿಂದ ಮಹೇಶನೊಂದಿಗೆ ಕಾರಿನಲ್ಲಿ ಮುಂಬೈಗೆ ತೆರಳಿದರು. ಮುಂಬೈನಲ್ಲಿ ಪದೇ ಪದೇ ಸ್ಥಳ ಬದಲಾಯಿಸಿದ ಆರೋಪಿಗಳು, ಇಬ್ಬರನ್ನು ಲಾಡ್ಜ್ ಒಂದರಲ್ಲಿ ಇರಿಸಿದರು. ದೇವಪ್ಪ ಅವರಿಂದ ಬ್ಯಾಂಕ್ ಖಾತೆಗೆ ಸಂಬಂಧಿಸಿ ದಾಖಲೆಗಳು, ಚೆಕ್ಬುಕ್, ಎಟಿಎಂ, ಮೊಬೈಲ್ಗಳನ್ನು ಪಡೆದು ತಮ್ಮ ವಶದಲ್ಲಿ ಇರಿಸಿಕೊಂಡರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಫೆಬ್ರುವರಿ 10ರಿಂದ 12ರ ವರೆಗಿನ ಮೂರು ದಿನಗಳ ನಡುವೆ ದೇವಪ್ಪ ಬ್ಯಾಂಕ್ ಖಾತೆಗೆ ₹ 96.84 ಲಕ್ಷ ಹಣವನ್ನು ನೆಟ್ ಬ್ಯಾಂಕಿಂಗ್ ಮೂಲಕ ಹಾಕಿ, ಅದರಿಂದ ಬೇರೆ– ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡರು. ಬಳಿಕ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿದರು. ಇದರಿಂದ ಬ್ಯಾಂಕ್ ಖಾತೆ ನಿಷ್ಕ್ರಿಯವಾಯಿತು. ಬಂದ್ ಆಗಿರುವ ಖಾತೆಯನ್ನು ಮತ್ತೆ ಆರಂಭವಾಗಲು ಎರಡ್ಮೂರು ದಿನಗಳಾಗುತ್ತದೆ ಎಂದ ವಂಚಕರು, ಇಬ್ಬರನ್ನು ಲಾಡ್ಜ್ನಲ್ಲಿಯೇ ಇರಿಸಿದರು ಎಂದು ತಿಳಿಸಿದ್ದಾರೆ.

ಮರುದಿನ ಇಬ್ಬರನ್ನು ಮುಂಬೈನಲ್ಲಿ ಖಾಸಗಿ ಬ್ಯಾಂಕ್ನ ಶಾಖೆಯೊಂದಕ್ಕೆ ಕರೆದುಕೊಂಡು ಹೋಗಿ, ಹೊಸ ಬ್ಯಾಂಕ್ ಖಾತೆಯನ್ನು ತೆರೆಯಿಸಿದರು. ಫೆಬ್ರುವರಿ 16ರಂದು ಆರಂಭವಾದ ಖಾತೆಯು ಅರ್ಧ ಗಂಟೆಯ ಬಳಿಕ ಅದು ಸ್ಥಗಿತವಾಯಿತು. ಮೊಬೈಲ್, ಬ್ಯಾಂಕ್ ದಾಖಲೆಗಳನ್ನು ಕೊಟ್ಟು ಇಬ್ಬರನ್ನು ವಾಪಸ್ ಕಳುಹಿಸಿದರು. ಶಹಾಪುರಕ್ಕೆ ಬಂದು ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಕೇರಳ ಮತ್ತು ಮಹಾರಾಷ್ಟ್ರದಿಂದ ಹಣ ವರ್ಗಾವಣೆ ಸಂಬಂಧ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಈ ಬಗ್ಗೆ ತಿಳಿಯುತ್ತಿದ್ದಂತೆ ದೇವಪ್ಪ ಅವರು ಸೆನ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-30-797674483

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.